ಹೆಗೋಡಿನ ನಿನಾಸಂ ಸಂಸ್ಥೆ ನಾಟಕ ಮತ್ತು ಸಿನಿಮಾ ಜನರಿಗೆ ಹೇಗೆ ಚಿರಪರಿಚಿತ ಹಾಗೆ ಇದರ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ತಮ್ಮ ವಿಚಾರ ಮತ್ತು ಬರವಣಿಗೆಯಿಂದ ವಿಶ್ವವಿಖ್ಯಾತರು, ಅಂತರಾಷ್ಟ್ರೀಯ ಮ್ಯಾಗ್ ಸೆಸೆ ಪ್ರಶಸ್ತಿ ವಿಜೇತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಹೆಗೋಡುನವರು ನಮ್ಮ ತಾಲ್ಲೂಕಿನವರು ಅಂತ ನಮಗೆಲ್ಲ ಹೆಮ್ಮೆ.
ಒಮ್ಮೆ ನೀನಾಸಂ ಸಭಾ0ಗಣದಲ್ಲಿ ಸುಬ್ಬಣ್ಣನವರ ಜೊತೆ ಸಭೆ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದೆ, ದೇವಾಡಿಗ ಜಾತಿಯ (ವೀರಪ್ಪ ಮೊಯ್ಲ್ ) ಜಾತಿ ಸಮಾವೇಶವದು, ಸಂಘಟಕರು ನನ್ನನ್ನ ಕರೆದಾಗ ನನಗೆ ನಂಬಲಿಕ್ಕೆ ಆಗಲಿಲ್ಲ, ಸಣ್ಣ ಜಾತಿ ಸಮಾವೇಶಕ್ಕೆ ಸುಬ್ಬಣ್ಣ ಬರುವುದು ಅನುಮಾನ ಅಂದೆ. ಇಲ್ಲ ಒಪ್ಪಿದಾರೆ ಸಬಾo ಗಣ ಉಚಿತವಾಗಿ ನೀಡಿದಾರೆ ಅಂದರು.
ಅವತ್ತಿನ ಸಭೆಯಲ್ಲಿ ಸುಬ್ಬಣ್ಣರ ಬಾಷಣ ಸಣ್ಣ ಜಾತಿಯ ಶೂದ್ರರಿಗೆ ಒ೦ದು ಆಶಾದಾಯಕ ನೀತಿ ಪಾಠವಾಗಿತ್ತು, ಸಮಾಜವಾದದ ಅನುಯಾಯಿ ಆಗಿದ್ದ ಸುಬ್ಬಣ್ಣ ಲೋಹಿಯ ವಿಚಾರಧಾರೆ ಹೊಂದಿದವರು ಹಾಗಾಗಿ ಅವರ ಮಾತನ್ನ ಗಮನವಿಟ್ಟು ಆಲೈಸುತ್ತಿದ್ದೆ..........
" ದೇಶದಲ್ಲಿ ಮೇಲ್ಜಾತಿಗಳು ಸಂಘಟನೆಗಳು ಅವಶ್ಯವಿಲ್ಲ ಅದರಿಂದ ಸಮಾಜಕ್ಕೆ ಮಾರಕ ಆದರೆ ಅಸಂಘಟಿತ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕು ಮತ್ತು ಸವಲತ್ತುಗಳಿಗಾಗಿ ಸಂಘಟಿತರಾಗಬೇಕು " ಎಂಬ ಮಾತು ಸ್ವತಃ ಬ್ರಾಹಮಣರಾದ ಹಾಗೂ ವಿಚಾರವಾದಿ ಸುಬ್ಬಣ್ಣರ ಬಾಯಲ್ಲಿ ಬ೦ದಿದ್ದರ ತಾತ್ಪಯ೯ ಅವರಿಂದಲೆ ಕೇಳಬೇಕೆಂದುಕೊಂಡೆ.
ಸಬೆಯ ಮಧ್ಯದಲ್ಲಿ ಅವರು ವಿರಾಮದ ಮೂಡಿನಲ್ಲಿ ಇದ್ದಾಗ ಸುಬ್ಬಣ್ಣ ಮೇಲ್ಜಾತಿಗಳು ಯಾಕೆ ಸಂಘಟಿತರಾಗಬಾರದು, ಸಂಘಟಿತರಾದರೆ ಸಮಾಜಕ್ಕೆ ಯಾವ ರೀತಿ ಮಾರಕ ? ನನಗೆ ಸರಿಯಾಗಿ ಅಥ೯ವಾಗಿಲ್ಲ ಅಂದೆ, ಬ್ರಾಹ್ಮಣರು ಸಾವಿರಾರು ವಷ೯ದಿಂದ ತಮ್ಮ ಆಚರಣೆಗಳಿಂದ ಸಂಘಟಿತರಾಗೇ ಇದ್ದಾರೆ ಅವರಿಗೆ ಸಣ್ಣ ಜಾತಿಗಳ0ತೆ ಅವರ ಹಕ್ಕು, ಸವಲತ್ತುಗಳಿಗಾಗಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ಇಂತಹ ಉದ್ದೇಶದ ಸಂಘಟನೆ ಪ್ರಾರಂಭಿಸಿದರೆ ದೇಶದ ಇತರ ಜಾತಿಗಳನ್ನ ಅವು ಶೋಶಣೆ ಮಾಡಲು ಕಾರಣವಾಗುತ್ತೆ ಆದ್ದರಿಂದ ಅದರ ಅವಶ್ಯಕತೆ ಇಲ್ಲ ಆದರೆ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಸವಲತ್ತುಗಳಿಗಾಗಿ ಸಂಘಟಿತರಾಗದಿದ್ದರೆ ಸಂಘಟಿತ ದೊಡ್ಡ ಜಾತಿಗಳಿಂದ ಉಳಿಗಾಲ ಇಲ್ಲ ಅಂದರು.
ಅವರ ಮಾತು ಸರಿಯಾಗಿ ಚಿಂತನೆ ಮಾಡಿದರೆ ಎಷ್ಟು ಅಥ೯ಗಬಿ೯ ಅಂತ ಅಥ೯ ಆಗುತ್ತೆ

Comments
Post a Comment