ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕಷಿ೯ತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ, ಆದರೆ ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋದಿಸುತ್ತಾರೆ, ಮುಂದೆ ಇದೇ ಪಟ್ಟದ ರಾಣಿ ಭದ್ರಮಾಜಿ ಅನಾರೋಗ್ಯಕ್ಕೆ ಕಾರಣ ವಾಯಿತು ಮು೦ದೆ ಅವರ ಮರಣಕ್ಕೂ ಕಾರಣವಾಯಿತು.
ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ೦ಪಕ ಮಾಯಾವಿ ಅವಳು ಅನ್ಯ ಆಹಾರ ಸೇವಿಸುತ್ತಾಳೆ, ರಾಜಾ ವೆಂಕಟಪ್ಪ ನಾಯಕರನ್ನ ತಲೆ ಕೆಡಿಸಿದ್ದಾಳೆ ಅಂತೆಲ್ಲ ಆರೋಪ ಮಾಡುತ್ತಾರೆ ಇದರಿOದ ನೊಂದ ಚಂಪಕ ರಾಣಿ ಆನಂದಪುರದ ಕೋಟೆಯಲ್ಲಿ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಸುಂದರವಾಗಿ ಚಿತ್ರಿಸುತ್ತಿದ್ದ ರಂಗೋಲಿಯಿಂದ ಆಕಷಿ೯ತರಾಗಿ ಅವಳಾರು ಅಂತ ತಿಳಿದಾಗ ಚಂಪಕಾ ಎಂಬ ಸುಂದರ ತರುಣಿ ಅಂತ ಗೊತ್ತಾದ ನಂತರ ಅವಳಲ್ಲಿ ಅನುರಕ್ತನಾದ ರಾಜ ವೆಂಕಟಪ್ಪ ನಾಯಕ ಚOಪಕಳನ್ನ ಶಾಸ್ತ್ರ ಬದ್ದವಾಗಿಯೆ ಮದುವೆ ಆಗಿ ಆನಂದಪುರದ ಕೋಟೆಯಲ್ಲಿನ ಅರಮನೆಯಲ್ಲಿ ಇಡುತ್ತಾರೆ, ಆದರೆ ಕೆಳದಿ ಇತಿಹಾಸದಲ್ಲಿ ಕೆಳ ಜಾತಿ ಎಂಬ ಕಾರಣದಿಂದ ಚಂಪಕಾಳ ಇತಿಹಾಸ ತಿರುಚಲಾಗಿದೆ.
ಚಂಪಕ ಪ್ರಜೆಗಳು ತಪ್ಪು ಬಾವಿಸಿ ಆರೋಪ ಮಾಡಿದ್ದರಿಂದ ಜೀವ ತ್ಯಾಗ ಮಾಡಿದ್ದು ರಾಜ ವೆಂಕಟಪ್ಪ ನಾಯಕರಿಗೆ ಅಸಾಧ್ಯ ವೇದನೆ ಆಗುತ್ತೆ ಚಂಪಕಾಳ ನೆನಪು ಶಾಶ್ವತವಾಗಿ ಉಳಿಯಬೇಕೆ೦ದು ಸ್ಮರಣೆಗಾಗಿ ಸುಂದರವಾದ ಕೊಳ ಕಲ್ಲಿನಲ್ಲಿ ಕಟ್ಟಿಸುತ್ತಾರೆ, ಕೊಳದ ಮದ್ಯದಲ್ಲಿ ಈಶ್ವರ ದೇವಸ್ಥಾನ, ಅಲ್ಲಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ, ಕೊಳದ ಸುತ್ತು ಕಲ್ಲಿನ ಸೋಪಾನ, ಚಂಪಕಾಳ ಸಮಾದಿ ಎದುರು ಶಿಲೆ ಕಲ್ಲಿನ ಸುಂದರವಾದ ಆನೆಯ ಶಿಲ್ಪಗಳು ಇದೆ.
1972ರಲ್ಲಿ ಇಲ್ಲಿ ದೇವರ ಕಣ್ಣು ಸಿನಿಮಾದ ಪ್ರಸಿದ್ಧವಾದ ಹಾಡಾದ " ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ" ಎಂಬ ಹಾಡಿನ ಚಿತ್ರಿಕರಣವನ್ನ ಖ್ಯಾತ ನಿದೇ೯ಶಕ ವೈ.ಆರ್.ಸ್ವಾಮಿ ಮಾಡಿದ್ದಾರೆ.
ಪ್ರಾಚ್ಯ ವಸ್ತು ಸಂಶೋದನ ಇಲಾಖೆಯ ನಿಲ೯ಕ್ಷದಿಂದ ,ಸ್ಥಳೀಯರ ಅನಾದರದಿಂದ ಮತ್ತು ಪ್ರಕೃತಿ ವಿಕೋಪಗಳಿಂದ ಈ ಸು೦ದರ ಪ್ರವಾಸಿ ತಾಣ ದಿನೇ ದಿನೇ ಶಿಥಿಲವಾಗುತ್ತಿದೆ, ಮಾಹಿತಿ ಕೊರತೆ ಮತ್ತು ಸರಿಯಾದ ಪ್ರಚಾರವಿಲ್ಲದೆ ಈ ಸ್ಥಳ ಒಂದು ರೀತಿ ಅಪರಿಚಿತ ಮತ್ತು ನಿಗೂಡವಾಗಿದೆ.
ಚಂಪಕಳ ಬಗ್ಗೆ ಆ ಸಂದಭ೯ದಲ್ಲಿ ಕೆಳದಿ ಅರಸರ ರಾಜಧಾನಿ ಇಕ್ಕೆರಿಗೆ ಬೇಟಿ ನೀಡುವ ಇಟಲಿಯ ಇತಿಹಾಸಕಾರ ಡಲ್ಲಾ ವಲ್ಲೆ ತಮ್ಮ ದಾಖಲೆಯಲ್ಲಿ ದಾಖಲಿಸಿದ್ದಾರೆ. ಆನಂದಪುರದ ಸುತ್ತಮುತ್ತಾ 50 ವಷ೯ದ ಹಿಂದಿನ ತನಕ ಲಾವಣಿಗಳಲ್ಲಿ ಚಂಪಕಾಳ ಸೌಂದಯ೯, ಆಕಷ೯ಕ ರಂಗೋಲಿ ಮತ್ತು ರಾಜ ವೆಂಕಟಪ ನಾಯಕರ ವಿವಾಹ, ಪ್ರೇಮ ದುರಂತದ ಬಗ್ಗೆ ವಿವರಗಳ ರಾಗವಾದ ಧ್ವನಿ ಇತ್ತು.
ಈ ಬಗ್ಗೆ ನಾನು ಒಂದು ಕಾದಂಬರಿ ಬರೆದಿದ್ದೇನೆ ಸದ್ಯದಲ್ಲೆ ಬಿಡುಗಡೆ ಇದೆ ಅದರಲ್ಲಿ ಕೆಳದಿ ರಾಣಿ ಚಂಪಕಾಳ ಬಗ್ಗೆ ಹೆಚ್ಚಿನ ವಿವರ ಇದೆ, ರಾಜವೆಂಕಟಪ್ಪ ನಾಯಕರು ಮತ್ತು ರಾಣಿ ಚೆಂಪಕಾಳ ಈ ಪ್ರೇಮ ಕಥೆ ಕೆಳದಿ ಅರಸರ ಬಗ್ಗೆ ಬೆಳಕು ಚೆಲ್ಲುವ ಒಂದು ಕಾದಂಬರಿ ಆಗಲಿದೆ ಅಂತ ಹಸ್ತಪ್ರತಿ ಓದಿದ ಅನುಭವಿಗಳು ಹೇಳಿದ್ದಾರೆ, ಕಥೆ ಓದೋರಿಗೆ ಆಸಕ್ತಿ ಬರಲಿ ಅಂತ ಅನೇಕ ಇತರ ಅವಶ್ಯ ಐತಿಹಾಸಿಕ ವಿಷಯ ಸೇರಿಸಿ ಪಿಕ್ಷನ್ ಬರೆದಿದ್ದೇನೆ.
ಆನಂದಪುರದ ಚಂಪಕಸರಸು ಜನ ಮನದಲ್ಲಿ ಉಳಿಯಲಿ ಅನ್ನೋದು ನನ್ನ ಆಸೆ ಹಾಗಾಗಿ ನಮ್ಮ ರೆಸ್ಟೋರೆಂಟ್ಗೆ "ಚಂಪಕಾ ಪ್ಯಾರಾ ಡೈಸ್ " ಅಂತ ಹೆಸರು ಇಟ್ಟಿದ್ದೇನೆ.
ಇವತ್ತು ರಾಜ್ಯದ ಜಲ ವಿಜ್ಞಾನಿ ಸಿರಸಿಯ ಶಿವಾನಂದ ಕಳವೆಯವರು ಪತ್ರಕತ೯ರಾದ ನೀಚಡಿ ವಸಂತ್ ಚಂಪಕ ಸರಸುಗೆ ಬೇಟಿ ನೀಡಿದ್ದು ಸಂತೋಷದ ಸುದ್ದಿ (17- ಆಗಸ್ಟ- 20l 8)
Thank you for naming a Champaka Paradise and this was the important information regarding this place. When i was in High school life, we visiting to that Place on holiday. We were swimming in that pool and riding the elephants statue in front of that. The temple is so beautiful and even to swim.
ReplyDeleteI request the government to renew that temple and Kalyani for visiting more and more people. And i finally very thankful to Arun prasad to collect so many information on this particular place.