Skip to main content

ಯಹ್ಯಾ ಸಾಹೇಬರೆಂಬ ಸಜ್ಜನ ಶ್ರೀಮ೦ತರು.


1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು, ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು, ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು. ದಿನಸಿ ಪಟ್ಟಿ ಬರೆಯಲು ನಾ ಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಮಾಲಿಕರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರಾಜೇಶ್ ಖನ್ನರ ಸ್ಟೇಲ್ ನ ಟೈಟ್ ಪ್ಯಾಂಟ್, ಚೂಪು ಬೂಟು, ಸೊ೦ಟದಲ್ಲಿ ರಿವಾಲಾವರ್ ಗಮ ಗಮ ಎನ್ನಿಸುವ ಪರಿಮಳ ಸಿಂಪಡಿಸಿಕೊಂಡು ಟಕ್ ಟಕ್ ಎನ್ನುವ ಭೂಟಿನ ಸದ್ದಿನೊಂದಿಗೆ ಬಂದು ತಿರುಗುವ ಕುಚಿ೯ಯಲ್ಲಿ ಕುಳಿತು ಪಕ್ಕದಲ್ಲಿನ ದೊಡ್ಡ ಟ್ರಿಜರಿಯ ಬಾಗಿಲು ತೆಗೆದರೆ ಅದರಲ್ಲಿ ಕಂತೆ ಕಂತೆ ನೋಟು.
      ಅವರಿಗೆ ಉದನೂರು ಎಂಬಲ್ಲಿ 100 ಎಕರೆ ಜಮೀನು, ಅಲ್ಲಿ ಕಾಡು ಪ್ರಾಣಿ ಶಿಕಾರಿ ಮಾಡುತ್ತಾರೆ ಅದಕ್ಕೆ ಡಬಲ್ ಬ್ಯಾರೆಲ್ ತೋಟ ಬಂದೂಕು, ತಿರುಗಾಡಲು ಜಾತಿಯ ಕುದುರೆ ಹೀಗೆ ಯಾಹ್ಯಾ ಸಾಹೇಬರದ್ದು ರಾಜಾ ಠೀವಿ.
     ಇವತ್ತು 95ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು, ಯಾರಿಗೂ ತೊಂದರೆ ಕೊಡದ ಊರ ಉಪಕಾರಿ ಸಾಹುಕಾರರಿವರು, ಇವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಹಾರೈಸುತ್ತೇನೆ.
      ಇವರ ಅಂಗಡಿಯಲ್ಲಿ ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕಿದವರ ಮನೆಯಲ್ಲಿ ಆ ಕಾಲದಲ್ಲಿ ಹಸಿವು ಇರುತ್ತಿರಲಿಲ್ಲ, ಆದರೆ ಅದು ಸುಲಭವಾಗಿ ಸಿಗುವುದಲ್ಲ ಈಗೆಲ್ಲ ಬ್ಯಾಂಕಿನಲ್ಲಿ OD ಸಿಕ್ಕ೦ತೆ, ಆಗ ಬಡತನ ಹೆಚ್ಚು ಒಂದು ಹೊತ್ತು ಇದ್ದರೆ ಇನ್ನೊಂದು ಹೊತ್ತು ಇಲ್ಲ. ನಮ್ಮ ತಂದೆ ಇವರ ಅಂಗಡೀಯಲ್ಲಿ ಸಾಲದ ಖಾತೆ ಹೊಂದಿದ್ದರು ಹಾಗಾಗಿ ನಮ್ಮ ಮನೇಲೂ ಒಂದು ನೀಲಿ ಬಣ್ಣದ ಸಾಲದ ಪುಸ್ತಕ ಇತ್ತು ಅದನ್ನ ತೆಗೆದುಕೊಂಡು ದಿನಸಿ ತರಲು ನಮ್ಮ ಅಣ್ಣನೊಂದಿಗೆ ಇವರ ಅಂಗಡಿಗೆ ಹೋಗುತ್ತಿದ್ದೆ ಆಗೆಲ್ಲ ಯಹಾಯ ಸಾಹೇಬರನ್ನೆ ಅಚ್ಚರಿಯಿ೦ದ ನೋಡುವುದೆ ನಮಗೆಲ್ಲ ಸಂಭ್ರಮ ಆಗಿತ್ತು.

Comments

Post a Comment