ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ರೇಣುಕಮ್ಮ, ದೇವಾಲಯದಲ್ಲಿ ಪ್ರತಿ ವಷ೯ ನಡೆಯುತ್ತಿದ್ದ ಬೆತ್ತಲೆ ಸೇವೆಯನ್ನ ನಿಲ್ಲಿಸಲು ಪ್ರಗತಿಪರರು ಮುಂದಾದಾಗ ಅದಕ್ಕೆ ಅನೇಕ ಅಡಚಣೆ ಬ೦ತು, ಗೌರವಾನ್ವತ ಕುಟುಂಬಗಳ ಪ್ರಾಯದ ಹೆಣ್ಣಮಕ್ಕಳು ತಮ್ಮ ಬಾಲ್ಯದಲ್ಲಿ ತಮ್ಮ ಪೋಷಕರು ಮಾಡಿದ ಹರಕೆ ತೀರಿಸಲು ವರದಾ ನದಿಯಲ್ಲಿ ಮಿಂದು ಬೆತ್ತಲೆಯಾಗಿ ನಾಕಾರು ಕಿ.ಮಿ. ನಡೆದು ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಬೇಕಿತ್ತು.ಬೆತ್ತಲಾಗಿ ಹೋಗುವ ಸಂಕಟ ಈ ಕುಟುಂಬಗಳದ್ದಾದರೆ ಇವರನ್ನ ನೋಡಲು ಪೋಲಿ ಪಟಾಲಂಗಳು ಕೆಲವು ಸಾವಿರ ಅಲ್ಲಿ ಸೇರುತ್ತಿತ್ತು. ಅವತ್ತಿನ ಲೈಂಗಿಕ ಪತ್ರಿಕೆಗಳಾದ ರತಿ ವಿಜ್ಞಾನ ಮುಂತಾದವು ಆ ಚಿತ್ರಗಳನ್ನ ನೇರವಾಗಿ ಪ್ರಕಟಿಸಿ ಹೆಚ್ಚಿನ ಪ್ರಸಾರ ಪಡೆಯುತ್ತಿದ್ದವು. ಅವತ್ತು ದಲಿತ ಸಂಘಷ೯ ಸಮಿತಿ ಸಂಸ್ಥಾಪಕರಾದ ಬಿ.ಕೃಷ್ಣಪ್ಪ ಇದನ್ನೊಂದು ಸವಾಲಾಗಿ ತೆಗೆದು ಕೊಂಡರು.ಸಕಾ೯ರದಲ್ಲಿ ಆಗ ಮಂತ್ರಿ ಆಗಿದ್ದ ಜೆ.ಹೆಚ್.ಪಟೇಲರು ಸಾತ್ ನೀಡಿದರು ಆದರೆ ಸ್ಥಳಿಯ ಶಾಸಕರಾಗಿದ್ದ ಬಂಗಾರಪ್ಪ ಮತ ಗಳಿಗಾಗಿ ತಟಸ್ಥರಾಗಿದ್ದರು.
ಭಕ್ತರನ್ನ ಇದನ್ನ ತಡೆಯಲು ಪ್ರಯತ್ನಿಸಿದವರ ಮೇಲೆ ಎತ್ತಿಕಟ್ಟಿದರು, ಸಾವಿರಾರು ವರುಷದಿಂದ ನಡೆದುಕೊಂಡ ಪದ್ದತಿ ನಿಲ್ಲಿಸಿದರೆ ದೇವಿಯ ಶಾಪ ಎದುರಿಸಬೇಕಾದೀತೆಂಬ ಪಾಪ ಪ್ರಜ್ಞಾ ಪ್ರಚಾರ ಮಾಡಿದರು, ಇದನ್ನ ಅಡ್ಡಗಟ್ಟುತ್ತಿರುವವರು ದಲಿತರು ಅವರನ್ನ ಅಟ್ಟಾಡಿಸಿ ಹೊಡೆಯಿರಿ ಅಂತ ಭೂಮಾಲಿಕರು, ವೈದಿಕರು ಸುಕುಂ ಮಾಡಿದರು,ಜೋಗಪ್ಪಗಳ ದೊಡ್ಡ ಗುಂಪಿಗೆ ಪ್ರಚೋದನೆ ಮಾಡಿ ಬಿಟ್ಟರು ನಂತರ ಸುಯೋ೯ದಯದಿಂದ ಸೂಯಾ೯ ಸ್ತದ ತನಕ ನಡೆದಿದ್ದು ಅಮಾನಿಯ ದೌಜ೯ನ್ಯ ಚಳವಳಿಗಾರರನ್ನ ಜೀವ ಸಹಿತ ಬಿಟ್ಟಿದ್ದೆ ಪುಣ್ಯ ನಂತರ ಪ್ರಚೋದಿತ ಗುಂಪು ರಣೋಲ್ಲಾಸದಲ್ಲಿ ಮೈಮರೆತು ರಕ್ಷಣೆಗೆ ನಿಯೋಜಿತರಾದ ಪೋಲಿಸರನ್ನೂ ಬಿಡಲಿಲ್ಲ ನಂತರದ್ದು ಇತಿಹಾಸ, ಈಗ ಬೆತ್ತಲೆ ಸೇವೆ ನಿಂತಿದೆ.
ಹೀಗೆ ಜನಪರ ಹೋರಾಟ ಹಲವು ಆಯಾಮ ದಾಟಿಯೇ ಗುರಿ ಮುಟ್ಟುತ್ತದೆ ಆದರೆ ಕಾಲದ ವೇಗದಲ್ಲಿ ಎಲ್ಲವೂ ಮರೆಯುತ್ತೇವೆ.
ಬಿ. ಕೃಷ್ಣಪ್ಪರ ಈ ಹೋರಾಟ ಒಮ್ಮೆಯೂ ಯಾರೂ ನೆನಪು ಮಾಡಿಕೊಳ್ಳದಿರುವುದು ವಿಷಾದನೀಯ, ಅವರು ಈ ಹೋರಾಟದಲ್ಲಿ ಅಹಿಂಸೆ, ಕಾನೂನು ಬೆಂಬಲ ಪಡೆದಿದ್ದರು.
ಸಾವ೯ಜನಿಕ ಸ್ಥಳದಲ್ಲಿ ಜಾತಿ ಆಚರಣೆ ನಿವಾರಣೆಗೆ ಇದೇ ರೀತಿ ಚಳವಳಿ ಅಗತ್ಯವಿದೆ. ಈಗ ಪರಸ್ಪರ ಕೆಸರರಚಾಟ ನೋಡಿದರೆ ಬೇಸರ ಅನ್ನಿಸುತ್ತೆ.
Comments
Post a Comment