ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........
ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ. ನೀವು ದಸರಾ ಎದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ ಹಾಗೇನಿಲ್ಲ ಸಂದಭ೯ ಹಾಗಿತ್ತು ನಿರಾಕರಿಸಿದೆ, ಈ ಸಾರಿಯ ಕುವೆಂಪು ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು.ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ ಅಂದದ್ದಕ್ಕೆ ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ ಅಂದರು........................... ಮೈಸೂರಿಗೆ ಬನ್ನಿ ಅಂತ ಆಮಂತ್ರಿಸಿದರು.ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿದೆ, ಮುಖತಃ ಅವರನ್ನ ಬೇಟಿ ಮಾಡಲು ಉತ್ಸುಕನಾಗಿದ್ದೇನೆ.(4 ನವೆಂಬರ್ 20l 6)
ನಿನ್ನೆ ನಮ್ಮ ಜಿಲ್ಲೆಯ ಕುವೆಂಪು ಮನೆ ಕುಪ್ಪಳ್ಳಿಯಲ್ಲಿ ಸಾಹಿತಿ ಸಾಮಾಜಿಕ ಹೋರಾಟಗಾರ ದೇವನೂರು ಮಹಾದೇವರಿಗೆ ಕುವೆಂಪು ರಾಷ್ಟ್ರ ಪ್ರಶಸ್ತಿ ನೀಡಲಾಯಿತು.
ನವೆ೦ಬರ 4ರಂದು ನಾನು ಅದರೊಂದಿಗೆ ಪೋನ್ನಲ್ಲಿ ಮಾತಾಡಿದಾಗ ಅವರು ಕುವೆಂಪು ಪ್ರಶಸ್ತಿ ಸ್ವೀಕರಿಸುವುದಾಗಿ ತಿಳಿಸಿದ್ದರು
ಕುವೆಂಪು ಚಿಂತನೆ, ಆಚಾರ, ವಿಚಾರ ಮತ್ತು ಬರವಣಿಗೆಗೆ ಅತ್ಯಂತ ಸಮೀಪ ಅನ್ನಿಸುವ ದೇವನೂರು ಮಹಾದೇವರಿಗೆ ಕುವೆಂಪು ಪ್ರಶಸ್ತಿ ನೀಡಲು ತೀಮಾ೯ನ ತೆಗೆದುಕೊಂಡು ಪ್ರಶಸ್ತಿ ನೀಡಿದ ಸಂಬಂದ ಪಟ್ಟ ಸಮಿತಿಗೆ 100ಕ್ಕೆ 100 ಅಂಕ ನೀಡುತ್ತೇನೆ, ಈ ಪ್ರಶಸ್ತಿ ಸ್ಥಾಪಿಸಿದ ದಾನಿ ಚಂದ್ರಶೇಖರ್ ಕುಟುಂಬಕ್ಕೆ ಮಲೆನಾಡಿನ ಕುವೆಂಪು ಹಾಗೂ ತೇಜಸ್ವಿ ಅಭಿಮಾನಿಗಳ ಪರವಾಗಿ ಕೃತಜ್ಞತೆ ಮತ್ತು ಅಭಿನಂದನೆ ಈ ಮೂಲಕ ಸಲ್ಲಿಸುತ್ತೇನೆ.(29 ಡಿಸೆಂಬರ್ 2016)
Comments
Post a Comment