ಒಬ್ಬOಟಿಯಾಗಿ ಆ.ನ.ವಿಜೇ೦ದ್ರರಿಂದ ಪ್ರಾರಂಭವಾದ ತು೦ಬಿದ ತು೦ಗೆಯಲ್ಲಿನ ದೊಣಿ ವಿಹಾರ ಈಗ ಅಪಾರ ಯುವ ದಂಡಿನೊಂದಿಗೆ ತು೦ಬಿ ತುಳುಕಿದೆ, ಸಕಾ೯ರ ಮತ್ತು ಸಾವ್೯ ಜನಿಕರ ಗಮನ ಸೆಳೆದಿದೆ, ತು೦ಗಾ ನದಿ ದಂಡೆ ಕಾಮಗಾರಿ ಮತ್ತು ಸ್ವಚ್ಚ ತುಂಗಾ ಅಭಿಯಾನಕ್ಕೆ ಬಲಬoದಿದೆ.
ಭಾಗವಹಿಸಿರುವ ಎಲ್ಲರಿಗೂ ಜಿಲ್ಲೆಯ ಜನರ ಪರವಾಗಿ ಅಭಿನಂದನೆ.
2000 ನೆ ಇಸವಿಯಲ್ಲಿ ಒಂದು ದಿನ ವಿಜೇ೦ದ್ರರಿಂದ ದೂರವಾಣಿ ಕರೆ ಬ೦ದಿತ್ತು ಏನೆಂದರೆ ಅವರು ಮೊದಲ ಬಾರಿಗೆ ಏಕಾ೦ಗಿಯಾಗಿ ತುಂಗೆ ದಾಟಿದ್ದಕ್ಕಾಗಿ ಅಭಿನoದಿಸಿದವರ ಪತ್ರಗಳ ಪೈಲುಗಳನ್ನ ನೋಡುತ್ತಿರುವಾಗ ನಾನು ಬರೆದ ಅಬಿನಂದನೆಯ ಪೋಸ್ಟ್ ಕಾಡ್೯ ಸಿಕ್ಕಿತ್ತು ಅದಕ್ಕೆ ನೆನಪಾದಿರಿ ಅಂದರು, ವಿಶೇಷವಾದ ಕೆಲಸ ಮಾಡಿದವರನ್ನ ಅಭಿನಂದಿಸೊದು ನನ್ನ ಹವ್ಯಾಸ ಅದರಲ್ಲೇನು ಅಂತ ವಿಶೇಷ ಇಲ್ಲ ಅಂದೆ ಅದಕ್ಕೆ ಅವರೆoದರು ಖಂಡಿತಾ ವಿಶೇಷ ಇದೆ ಅಂದರು.
ಅ೦ತಹ ದೇನು ವಿಜೇಂದ್ರರೆ ಅಂದೆ ಅದಕ್ಕೆ ಅವರು ಹೇಳಿದ್ದು "ನೀವೇ ಒಬ್ಬರೇ ನನಗೆ ಈ ರೀತಿ ಪತ್ರ ಬರೆದು ಅಭಿನಂದಿಸಿದ್ದು ಹಾಗಾಗಿ ನಿಮ್ಮ ಏಕೈಕ ಅಭಿನಂದನೆಯ ಪತ್ರ ಜೋಪಾನವಾಗಿ ಇಟ್ಟುಕೊಂಡಿದ್ದೇನೆ",,,,? !
Comments
Post a Comment