ಇದೊಂದು ಅವಿಸ್ಮರಣಿಯ ಸಮಯ, ಇವರ ಹೆಸರು ನಿಂಗಪ್ಪ ಜೋಗಿ, ಬಾಲ್ಯದಲ್ಲಿ ನಾವು ನೋಡಿದಂತೆ ಮನೆ ಮನೆಗೆ ಹೋಗಿ ಹಾಡು ಹೇಳಿ ಬಿಕ್ಷೆ ಪಡೆಯುತ್ತಿದ್ದರು, 1996-1997 ರಲ್ಲಿ ನಾನು ಇವರ ಬಗ್ಗೆ ಚಿತ್ರಲೇಖನ ತರಂಗ, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಬರೆದಿದ್ದೆ. ಇದೆಲ್ಲ ನಿಂಗಪ್ಪ ಜೋಗಿಗೆ ಒಟ್ಟು ಮಾಡಿಕೊಟ್ಟಾಗ ನಿಂಗಪ್ಪ ಜೋಗಿ ಮುಖದಲ್ಲಿ ಮಿ೦ಚು ಮೂಡುತ್ತಿತ್ತು.ಆಗೆಲ್ಲ ನಿಂಗಪ್ಪ ಜೋಗಿ ಹೆಚ್ಚು ಹಾಡು ಹಾಡಿ ನಮ್ಮನ್ನ ರಂಜಿಸಬೇಕಿತ್ತು.
ಕಳೆದ ವಷ೯ ಅವರ ಸಂಬಂದಿಯೋಬ್ಬರನ್ನ ನಿಂಗಪ್ಪ ಜೋಗಿ ಬಗ್ಗೆ ಕೇಳಿದಾಗ ವಯಸಾಗಿದೆ ತಿರುಗಾಟ ಕಡಿಮೆ ಅಂದರು.ಹಾಗಾದರೆ ಕಲಾವಿದರ ಮಾಷಾಸನ ಬರುತ್ತಾ ಅ೦ದರೆ "ಎಲ್ಲಿ ಸಾರ್ ಅವರು ಕೇಳಿದಷ್ಟು ಹಣ ಕೊಡೋಕೆ ಆಗಿಲ್ಲ ಅದಕ್ಕೆ ಅವರು ನಮಗೆ ಇಲ್ಲದಿದ್ದೆಲ್ಲ ದಾಖಲೆ ಕೇಳತಾರೆ" ಅಂದಿದ್ದರು.
ಇವತ್ತು ನಿಂಗಪ್ಪ ಜೋಗಿ ಕನಾ೯ಟಕ ಸಕಾ೯ರದ ಜಾನಪದ ಅಕಾಡೆಮಿ ಪ್ರಶಸ್ತಿ ಪತ್ರದೊಂದಿಗೆ ಬಂದು ನನಗೆ ತೋರಿಸಿ "ಸ್ವಾಮಿ ನೀವೇ ನನಗೆ ಮೊದಲಿಗೆ ಪ್ರಚಾರ ನೀಡಿದವರು" ಅ೦ದಾಗ ನನಗೂ ಸಂತೋಷ ಆಯಿತು.
ಮೊದಲೆಲ್ಲ ಈ ಪ್ರಶಸ್ತಿ ನೋಡಿದರೆ ವಾಕರಿಕೆ ಬರುತ್ತಿತ್ತು ಆದರೆ ಇವತ್ತು ನಮ್ಮ ನಿಂಗಪ ಜೋಗಿಯಿ೦ದ ಈ ಪ್ರಶಸ್ತಿಗೆ ಬೆಲೆ ಬಂತು ಅನ್ನಿಸಿತು.
Comments
Post a Comment