ಮಿತ್ರರು ಬಂದು ಗಡಿಬಿಡಿಯಲ್ಲಿ ಆಪೀಸಿಂದ ಹೊರಬನ್ನಿ ದೊಡ್ಡವರೊಬ್ಬರನ್ನ ಭೇಟಿ ಮಾಡಿ ಅಂದರು, ನನ್ನ ಅಜಗರ ಪ್ರವೃತ್ತಿ ಗೊತ್ತಿತ್ತವರಿಗೆ. ಅಂತೂ ಅವರ ಬೇಟಿ ಆಯಿತು, ಪರಿಚಯ ಆಯಿತು. ಸೌಜನ್ಯಕ್ಕಾಗಿ ಪುನಃ ಬನ್ನಿ ಅಂದೆ, ಖಂಡಿತಾ ಬರುವುದಾಗಿ ಹೇಳಿ ಹೋದರು ಆದರೆ ಅವರು ಬರುವವರಲ್ಲಾ ಅಂತ ನನಗೆ ಗೊತ್ತಿತ್ತು.
ಅದಾಗಿ ಅನೇಕ ತಿಂಗಳಾಗಿತ್ತು, ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದ ಸಭೆಗಾಗಿ ನನ್ನ ಮನೆ ಎದುರು ವೃತ್ತದಲ್ಲಿ ಬಸ್ಸಿನಲ್ಲಿ ಬಿಜೆಪಿ ಕಾಯ೯ಕತ೯ರು ಹೋಗಲು ತಯಾರಿ ನಡೆಸಿದ್ದರು, ಅಲ್ಲಿದ್ದ ಮುಖ೦ಡರು ಪಕ್ಷದ ಜೋಶ್ನಲ್ಲಿದ್ದರು ಹಾಗಾಗಿ ನಾನು ಅವರಿಗೆ ಕಂಡರು ನನ್ನನ್ನ ಮಾತಾಡಿಸಲು ಅವರಿಗೆ ಅಹಂ ಅಡ್ಡ ಬಂದಿತ್ತು, ರಾಜಕೀಯದಿಂದಲೇ ನಿವೃತ್ತಿ ಆಗಿದ್ದ ನನಗೆ ಇದೇನು ಅನ್ನಿಸಲಿಲ್ಲ.
ಆಗಲೇ ಸಲೂನು ನಡೆಸುವ ಬಾಲು ಬಂದು ಅಣ್ಣಾ ರಾಮುಲು ಬಂದಿದ್ದಾರೆ ಅಂದ, ಬರಲಿ ಬಿಡು ನಮ್ಮ ರೆಸ್ಟೋರೆಂಟ್ಗೆ ಬಂದಿರಬೇಕು ಅಂದೆ ಇಲ್ಲಣ್ಣ ಮಾಲಿಕರಿಗೆ ಕರೀರಿ ಅಂತಾರೆ ಅಂದ. ಸರಿ ಅಂತ ಲಾಡಜ್ ಆಫೀಸಿಗೆ ಹೋದರೆ ಬಳ್ಳಾರಿ ಸಂಸದ, ಮಾಜಿ ಮಂತ್ರಿ ಶ್ರೀರಾಮುಲು !?!
ನಂತರ 4 ಗಂಟಿಗಳನ್ನ ನನ್ನೋಡನೆ ಕಳೆದರು
ಅವತ್ತಿನ ಸಂಭಾಷಣೆ ಸಾರ.......
ಅವರು ಶಿವದೀಕ್ಷೆ ಪಡೆದಿದ್ದಾರೆ, ನೀರುಳ್ಳಿ ಬೆಳ್ಳುಳ್ಳಿ ಸೇವನೆ ಇಲ್ಲ ಅಂದರೆ ಅದೇ ತಿನ್ನೋಲ್ಲ ಅ೦ದರೆ ಮಾಂಸ ಮೀನು ಇಲ್ಲವೆ ಇಲ್ಲ ಅಂದರು ಯಾಕೆ ಅಂದೆ ನಿತ್ಯ ಮದ್ಯಪಾನ ಮಾಂಸಹಾರ ಇಲ್ಲದೆ ನನ್ನ ಊಟ ಇರಲಿಲ್ಲ, ನಿತ್ಯ ಸಾನ ಮಾಡುತ್ತಿರಲಿಲ್ಲ ಅಂದರು ನನ್ನ ಜೀವನ ಹಾಗಿತ್ತು ಅಂದರು, ರವಿ ಬೆಳೆಗೆರೆ ಲೇಖನದಿಂದ ನಿಮ್ಮ ಬಗ್ಗೆ ಹೆಚ್ಚು ತಿಳಿದಿದ್ದೇನೆ ಅಂದೆ, ದೇವರು ನನ್ನನ್ನ ಈ ಸ್ಥಾನಕ್ಕೆ ತರುತ್ತಾನೆ ಅಂತ ನನಗೆ ಗೊತ್ತಿರಲಿಲ್ಲ ಅಂದರು ನಂತರದ ಅವಧಿಯಲ್ಲಿ ಅವರ ಅ೦ತಃಕರಣ ಬಿಚ್ಚಿಟ್ಟರು.
ಈಗ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದಾರೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment