Skip to main content

ತಮಿಳು ಖ್ಯಾತ ನಟ ರಾಧಾರವಿಯೊ೦ದಿಗೆ

    ಬೆಳಿಗ್ಗೆ ಬೆಳಿಗ್ಗೆನೆ ಕನ್ನಡದ ಖ್ಯಾತ ಹಾಸ್ಯ ನಟರಾದ ದೊಡ್ಡಣ್ಣನವರ ಕರೆ " ಏನ್ರಿ ನಿನ್ನೆಯಿಂದ ಒಬ್ಬ ದೊಡ್ಡ ಮನುಷ್ಯರಿಗೆ ನಿಮ್ಮ ನಂಬರ್ ಕೊಟ್ಟಿದ್ದೆ ಅವರೆಷ್ಟು ಸಾರಿ ರಿಂಗ್ ಮಾಡಿದರೂ ನೀವು ಪಿಕ್ ಮಾಡಿಲ್ಲ " ಅಂತ, ಯಾರಿಗೆ ನನ್ನ ನಂಬರ್ ಕೊಟ್ಟಿದ್ದಿರಿ? ಅವರು ನನಗೆ ಯಾರು ಅಂತ ಹೇಗೆ ಗೊತ್ತಾಗಬೇಕು? ಅಂದೆ. ಈಗ ನಿಮಗೆ ಪೋನ್ ಮಾಡ್ತಾರೆ ದಯಮಾಡಿ ಪೋನ್ ತಗೋಳಿ, ರಾಕ್ ಲೈನ್ ವೆಂಕಟೇಶ್ ಹೆಸರು ಕೇಳಿದೀರಲ್ಲ ಅವರೆ ಅಜೆ೯೦ಟ್ ಅವರಿಗೆ ನಿಮ್ಮಿO ದ ಉಪಕಾರ ಆಗಬೇಕು, ಅವರು ಇಂತಾ ನಂಬರಿಂದ ಕಾಲ್ ಮಾಡ್ತಾರೆ ಅಂದರು.
      ಸ್ವಲ್ಪ ಹೊತ್ತಲ್ಲೆ ರಾಕ್ ಲೈನ್ ಪೋನ್ ಮಾಡಿದರು "ಬ್ರದರ್ ನಿಮ್ಮಿ೦ದ ಉಪಕಾರ ಆಗಬೇಕು " ಅಂದರು ಅಂತಹ ಕೋಟ್ಯಾದಿಪತಿ ಚಲನಚಿತ್ರ ನಿಮಾ೯ಪಕರು ಕೇಳುವಾಗ ನನಗೆ ಗೊತ್ತಿಲ್ಲದಂತೆ ಹೇಳಿ ಸಾರ್ ಅಂತದ್ದೇನು ಅಂದೆ, ತಮಿಳು ಚಿತ್ರರಂಗದ ಪ್ರಖ್ಯಾತರೊಬ್ಬರು ನಿಮ್ಮ ಅತ್ಯಂತ ಆಪ್ತರಾದ ವೈದ್ಯ ನಾರಾಯಣ ಮೂತಿ೯ಯವರನ್ನ ಬೇಟಿ ಮಾಡಬೇಕಂತೆ ಯಾವತ್ತು ಅವರನ್ನ ನಿಮ್ಮ ಹತ್ತಿರ ಕಳಿಸಲಿ ಅಂದರು.
          ರಾಕ್ ಲೈನ್ ರ ಅಭಿಲಾಷೆಯಂತೆ ತಮಿಳು ಚಿತ್ರರಂಗದ ಹಿರಿಯರು, ಪ್ರಖ್ಯಾತ ವಿಲನ್, ಮಾಜಿ ಶಾಸಕ, ತಮಿಳು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ, ಖ್ಯಾತ ಅಭಿನೇತ್ರಿ ರಾದಿಕಾ ಸಹೋದರ, ಒಂದು ಕಾಲದ ಎಂ.ಜಿ.ಆರ್.ರೊಂದಿಗೆ ನಟಿಸುತ್ತಿದ್ದ ನಂತರ ಎಂ.ಜಿ.ಆರ್ ಕಟ್ಟಾ ವಿರೋದಿ ನಟರಾದ ಎಂ.ಆರ್.ರಾದಾರವರ ಮಗ ರಾಧಾರವಿ ನಮ್ಮಲ್ಲಿಗೆ ಬಂದರು.
            ಅವರು ಒಮ್ಮೆ ಸಿಂಗಾಪುರದಿ೦ದ ವಿಮಾನದಲ್ಲಿ ಚೆನೈಗೆ ಬರುವಾಗ ಇವರ ಪಕ್ಕದಲ್ಲಿನ ಸೀಟಿನಲ್ಲಿ ಸಿಂಗಾಪುರದ ಖ್ಯಾತ ವೈದ್ಯರು ಪ್ರಯಾಣಿಸುತ್ತಿದ್ದರಂತೆ ಲೋಕರಾಮವಾಗಿ ಮಾತಾಡುವಾಗ ಅವರು ತಮ್ಮ ಕಾಯಿಲೆ ಒಂದರ ಚಿಕಿತ್ಸೆಗೆ ನಮ್ಮ ಊರಿನ ಸಮೀಪದ ನರಸೀಪುರಕ್ಕೆ ಬರುತ್ತಿರುವುದಾಗಿ ಈ ಹಿಂದೆ ಅನೇಕ ಬಾರಿ ಬಂದು ಇಲ್ಲಿನ ಆಯುವೆ೯ದ ವೈದ್ಯರಾದ ನಾರಾಯಣ ಮೂತಿ೯ಯವರಿಂದ ಚಿಕಿತ್ಸೆ ಪಡೆದು ಗುಣ ಮುಖರಾಗುತ್ತಿರುವುದಾಗಿ ತಿಳಿಸಿದರಂತೆ, ಆಗ ಇವರು ತಮ್ಮ ಕುತ್ತಿಗೆಯ ಗುಣವಾಗದ ನೋವಿನ ಬಗ್ಗೆ ಹೇಳಿದಾಗ ಆ ಸಿಂಗಾಪುರದ ಖ್ಯಾತ ವೈದ್ಯರು ನರಸಿಪುರದಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿ ವಿಳಾಸ ನೀಡಿದ್ದರಂತೆ ಹಾಗಾಗಿ ಕನಾ೯ಟಕದಲ್ಲಿ ಇವರಿಗೆ ಆಪ್ತರಾದ ರಾಕ್ ಲೈನ್ ಗೆ ಕೇಳಿದ್ದಾರೆ, ಶಿವಮೊಗ್ಗ ಜಿಲ್ಲೆ ವಿಚಾರ ಆದ್ದರಿಂದ ರಾಕ್ ಲೈನ್ ದೊಡ್ಡಣ್ಣನವರಿಗೆ ಹೇಳಿದ್ದಾರೆ, ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ನರಸೀಪುರ ಅಂದಿದ್ದಕ್ಕೆ ದೊಡ್ಡಣ್ಣ ನನಗೆ ಸಂಪಕ೯ ಮಾಡಿದರು. ಹೀಗೆ ರಾಕ್ ಲೈನ್ ಮತ್ತು ರಾಧಾರವಿ ನನಗೆ ಗೆಳೆಯರಾದರು.
      ರಾಧಾ ರವಿ ಸರಳ ಅತ್ಯಂತ ಬುದ್ದಿವಂತರು ಅವರ ಕಾಯಿಲೆ ಸಂಪೂಣ೯ವಾಗಿ ವೈದ್ಯ ನಾರಾಯಣ ಮೂತಿ೯ ನರಸೀಪುರ ಗುಣ ಮಾಡಿದರು, ನಮ್ಮ ಹೋಟೆಲ್ ಉದ್ಯಮದ ಬಗ್ಗೆ ಅನೇಕ ಒಳ್ಳೆಯ ಸಲಹೆ ಕೂಡ ಕೊಟ್ಟರು.

Comments