ಇವತ್ತು ದಿಡೀರ್ ಅಂತ ಸೊರಬದ ವಾಮದೇವ ಗೌಡರು ಬಂದರು ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು ಹಾಲಿ ಹಿರೇಮಠರ ರಾಜ್ಯ ಬ್ರಷ್ಟಾಚಾರಿ ವಿರೋದಿ ಆಂದೋಲನದ ಉಪಾಧ್ಯಕ್ಷರು,
ಚಹಾ ಸ್ವೀಕರಿಸುತ್ತಾ "ದಂಡಾವತಿ ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು ನಾನು ಮರೆತು ಬಿಟ್ಟಿದ್ದೆ ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ, ತೀ.ನಾ.ಶ್ರೀನಿವಾಸ್, ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್, ಪತ್ರಕತ೯ರಾದ ಎಂ.ರಾಘು, ಚಾವಾ೯ಕ ರಾಘು ಮತ್ತು ಗೆಳೆಯರು ದಂಡಾವತಿ ಹೋರಾಟದ ಸ್ಥಳಕ್ಕೆ ಹೋಗಿದ್ದೆವು ಅದರ ಹಿಂದಿನ ದಿನ ಗೌರಿ ಗಣಪತಿ ಹಬ್ಬ ಇತ್ತು, ಹೋರಾಟಗಾರರು ಮಣ್ಣಿನ ಗಣಪತಿ ವಿಗ್ರಹ ಪೂಜೆ ಮಾಡಿ ನಿಯೋಜಿತ ಆಣೆಕಟ್ಟು ಪ್ರದೇಶದ ನೀರಲ್ಲಿ ವಿಸಜ೯ನೆ ಮಾಡಿದ್ದರು.
ಮಳೆಗಾಲದ ಆ ದಿನದಲ್ಲೇ ದಂಡಾವತಿ ನದಿ ಸಣ್ಣ ಹಳ್ಳದಂತೆ ಇತ್ತು, ಹಿಂದಿನ ದಿನ ವಿಸಜ೯ನೆ ಮಾಡಿದ ಗಣಪತಿಯೇ ಮುಳುಗಿರಲಿಲ್ಲ ಆಗ ಗಣಪತಿಯಪನವರು ಕೈ ಮುಗಿದು ಮಹಾಗಣಪತಿ ಇಲ್ಲಿ ದಂಡಾವತಿ ಆಣೆಕಟ್ಟು ಕಟ್ಟದಂತೆ ನೋಡಿಕೊಂಡು ಈ ರೈತರ ಹೋರಾಟಕ್ಕೆ ಜಯ ತಂದು ಕೊಡು ಅಂತ ಬೇಡಿಕೊಂಡರು, ರೈತ ಪರ ಹೋರಾಟಗಾರ ಗಣಪತಿಯಪರ ಪ್ರಾಥ೯ನೆಯಂತೆ ಮತ್ತು ವಾಮದೇವ ಗೌಡರ ಪ್ರಾಮಾಣಿಕ ಹೋರಾಟದಿಂದ ದಂಡಾವತಿ ಆಣೆಕಟ್ಟು ನಿಮಾ೯ಣ ಆಗಿಲ್ಲ ಇದೆಲ್ಲ ಇವತ್ತು ನೆನಪಾಯಿತು.
ವಾಮದೇವ ಗೌಡರು ಆ ಹೋರಾಟದ ದಿನದಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಕುಳಿತು ನಮ್ಮ ಹೋರಾಟ ಬೆಂಬಲಿಸಿದ್ದರು ಈಗ ಮುಖ್ಯಮಂತ್ರಿ ಆಗಿದ್ದಾರೆ ಆದರೆ ಸಂಪುಟ ಸಭೆಯಲ್ಲಿ ಈವರೆಗೆ ಆಣೆಕಟ್ಟು ಕಟ್ಟಬೇಕೆಂಬ ಹಿಂದಿನ ಸಕಾ೯ರದ ನಿಣ೯ಯ ಮಾತ್ರ ಎಷ್ಟು ಸಾರಿ ನೆನಪಿಸಿದರೂ ರದ್ದು ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಇಳಿ ವಯಸ್ಸಲ್ಲೂ ವಾಮದೇವ ಗೌಡರ ಹೋರಾಟದ ಕಿಚ್ಚು ಕೊಂಚವೂ ಕಡಿಮೆ ಆಗಿಲ್ಲ ಅವರಿಗೆ ದೇವರು ಆರೋಗ್ಯ ಆಯಸ್ಸು ಮತ್ತು ಯಶಸ್ಸು ನೀಡಲಿ ಎಂದು ಹಾರೈಸುತ್ತೇನೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment