ಕೊಡಚಾದ್ರಿ ಅಂದರೆ ದಕ್ಷಿಣ ಭಾರತದ ಎವರೆಸ್ಟ್ ಅಂತೆಲ್ಲ ಹೊಗಳುತ್ತಾರೆ. ಇಲ್ಲಿನ ಚಿತ್ರ ಮೂಲದ ಗವಿಯಲ್ಲಿ ಶಂಕರಾಚಾಯ೯ರು ತಪಸ್ಸು ಮಾಡಿದರೆಂಬ ನಂಬಿಕೆ, ಮೂಕಾಸುರ ಎಂಬ ರಕ್ಕಸ ನನ್ನ ಈ ಬೆಟ್ಟದಲ್ಲಿ ದೇವಿ ಹತ್ಯೆ ಮಾಡಿ ಮೂಕಾಂಬಿಕೆ ಆದಳೆಂಬ ಪ್ರತೀತಿಗಳ ನಡುವೆ ಇಲ್ಲಿನ ಮೂಲ ಮೂಕಾಂಬಿಕ ದೇವಸ್ಥಾನದಲ್ಲಿ ಗುಪ್ತವಾಗಿ ನಡೆಯುವ ಶಕ್ತಿ ಪೂಜೆ, ಲೋಹದ ಎತ್ತರದ ಕಂಬದ ರಹಸ್ಯ, ಸೂಯೋ೯ದಯ, ಸೂಯಾ೯ಸ್ತ. ಬೇಸಿಗೆಯಲ್ಲಿನ ತಂಪು ವಾತಾವರಣ, ಚಾರಣಿಗರಿಗೆ ಪ್ರಶಸ್ತವಾದ ಸ್ಥಳ ನಮ್ಮ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ.
ನನಗೆ ಏಕಾ೦ತ ವಾಸ ಬೇಕಾದಾಗ ಜೋಗ ಜಲಪಾತ, ಮುಡೇ೯ಶ್ವರ ಮತ್ತು ಕೊಡಚಾದ್ರಿಯಲ್ಲಿ ಹೆಚ್ಚು ದಿನ ಕಳೆಯುತ್ತೇನೆ.
2006ರಲ್ಲಿ ಅಂಬಾಸಡರ್ ಕಾರಲ್ಲಿ ಹಿರಿಯರಾದ ಗನ್ನಿಸಾಬರನ್ನ ಕರೆದುಕೊಂಡು ಹೊರಟಿದ್ದೆ, ರಾಮು ಎಂಬ ಕುಣುಬಿ ಗುಡ್ಡಗಾಡು ಸಮುದಾಯದ ಡೈವರ್ ಗೆ ಈವರೆಗೆ ಅಂಬಾಸಡರ ಕಾರು ಕೊಡಚಾದ್ರಿ ತುದಿಗೆ ಹೋಗಿಲ್ಲ,4 ವೀಲ್ ಡೈವ್ ನ ಜೀಪ್ ಬಿಟ್ಟರೆ ಮೂಲ ಮೂಕಾ೦ಬಿಕ ದೇವಾಲಯದ ಅಚ೯ಕರು ಸ್ಥಳಿಯ ಪಂಚಾಯಿತಿ ಸದಸ್ಯ ನಾಗೇಂದ್ರ ಜೋಗಿಯ ಮಾರುತಿ ಮಾತ್ರ ಹೋಗಿದೆ ನೀನು ಪ್ರಯತ್ನ ಮಾಡು ಅಂದೆ. ಅಂಬಾಸಡರ್ ಕ್ರಾ೦ಕಿಸ್ ತುಂಬಾ ಕೆಳಗೆ ಇರುತ್ತೆ, ಇಲ್ಲಿ ರಸ್ತೆ ಸರಿ ಇಲ್ಲ ಕಲ್ಲು ತಾಗಿದರೆ ಇಂಜಿನ್ ಆಯಿಲ್ ಸೋರಿ ಕಾರು ಇಲ್ಲಿ ನಿಲ್ಲಿಸ ಬೇಕಾಗುತ್ತೆ ಅಂತ ಆತನ ಆತಂಕ ವ್ಯಕ್ತಪಡಿಸಿದ.
ಆಗಷ್ಟ ಮೆಕ್ಕಾ ಯಾತ್ರೆ ನನ್ನ ಸೇವೆಯಲ್ಲಿ ಮುಗಿಸಿ ಬಂದಿದ್ದ ವಯೋವೃದ್ದರಾದ ಗನೀಸಾಹೇಬರು ತಮ್ಮ ಪ್ರಾಯದಲ್ಲಿ ಅಂದರೆ 1950ರಲ್ಲಿ ವೈದ್ಯಕೀಯ ಇಲಾಖೆಯಲ್ಲಿದ್ದಾಗ DDT ಸಿಂಪಡಿಸಲು ಕೊಡಚಾದ್ರಿ ಬೆಟ್ಟಕ್ಕೆ ನಡೆದು ಹೋಗಿದ್ದು ನೆನಪು ಮಾಡಿದರು. ಏನೇ ತೊಂದರೆ ಆದರೂ ನನ್ನ ಜವಾಬ್ದಾರಿ ನಡೀ ಅಂತ ಚಾಲಕ ರಾಮು ಗೆ ದೈಯ೯ ನೀಡಿ ಪ್ರಯಾಣ ಪ್ರಾರಂಬಿಸಿದವು.
ಪ್ರಾರಂಭದ ದಾರಿ ಮಳೆ ಬಂದು ಕೆಸರಾಗಿತ್ತು ಕಾರಿಳಿದು ದೂಡುತ್ತಾ ಜಾರುತ್ತಾ ಅಂತೂ ಒಂದು ಹಂತ ಮುಟ್ಟಿ ವಿರಾಮ ತೆಗೆದುಕೊಂಡು ಮೊಸರನ್ನ ಖಾಲಿ ಮಾಡಿದೆವು, ನಂತರ ರಸ್ತೆ ಕಲ್ಲಿನ ಗಣಿ ಇದ್ದ೦ತೆ ಕಾರಿನ ಕ್ರಾಂಕಿಸಗೆ ತಾಗದ೦ತೆ ಒಯ್ಯ ವ ಕಷ್ಟದ ಪ್ರಯಾಣ ರಾಮು ಸ್ಟೇರಿಂಗ್ ಹಿಡಿದು ಕಾರಲ್ಲಿ ಕುಳಿತಿದ್ದರೆ ನಾನು ಗನ್ನಿಸಾಹೇಬರು ರಸ್ತೆ ಸರಿ ಮಾಡಿಕೊಡುತ್ತಾ, ಎಲ್ಲೆಲ್ಲಿ ಕಲ್ಲು ತಾಗದಂತೆ ಮಾಹಿತಿ ನೀಡುತ್ತಾ ಅಂತಿಮವಾಗಿ ಕೊಡಚಾದ್ರಿಯ ಪ್ರವಾಸಿ ಮಂದಿರ ತಲುಪಿ ತಣ್ಣನೆ ನೀರಲ್ಲಿ ಸ್ನನಾ ಮಾಡಿ ಮೇಟಿ ರಾಜೇಂದ್ರ ಶೆಟ್ಟಿ ನೀಡಿದ ಚಹ ಕುಡಿಯುವಾಗ ಅವರು ನಿಮ್ಮದೆ ಮೊದಲ ಅಂಬಾಸಡರ ಕಾರು ಬೆಟ್ಟಕ್ಕೆ ಮೊದಲು ಬಂದಿದ್ದು ಅಂದರು.
ಮರುದಿನ ಮುಂಗಾರು ಮಳೆ ಯೋಗರಾಜ ಭಟ್ಟರು ತಮ್ಮ ಕಾರು ಕೊಡಚಾದ್ರಿ ಬುಡದಲ್ಲಿ ಬಿಟ್ಟು ಬಾಡಿಗೆ ಜೀಪಿನಲ್ಲಿ ತಮ್ಮ ಎರಡನೆ ಸಿನಿಮಾ ತಯಾರಿ ಲೋಕೆಷನ್ಗೆ ಬಂದವರು ನಮ್ಮ ಕಾರು ನೋಡಿ ಆಶ್ಚಿಯ೯ ಪಟ್ಟಿದ್ದರು.
ಒಂದಾರು ತಿಂಗಳ ಹಿಂದೆ ಗೆಳೆಯರೊಂದಿಗೆ ಕೊಡಚಾದ್ರಿಗೆ ಹೋದಾಗ ನಮ್ಮ ಗೆಳೆಯರು ತಂದಿದ್ದ ದುಬಾರಿ ಕಾರು ಬುಡದಲ್ಲಿ ಬಿಟ್ಟು ಜೀಪ್ ಬಾಡಿಗೆ ಗೆ ತೆಗೆದುಕೊಂಡು ಮೇಲೆ ಹೋಗುವಾಗ ಡೈವರ್ ಗೆ ಕೇಳಿದೆ ಈ ರಸ್ತೆಯಲ್ಲಿ ಕಾರು ಹೋಗುವುದಿಲ್ಲವಾ? ಅಂತ, ನೋಡಿದರಲ್ಲ ರಸ್ತೆ ಜೀಪ್ ಹೋಗೋದೆ ಕಷ್ಟ ಅಂದ ಅವರು ಐದಾರು ವಷ೯ದ ಹಿಂದೆ ಒಂದು ಅಂಬಾಸಡರ್ ಗುಡ್ಡ ಹತ್ತಿದ್ದು ದಾಖಲೆ ಬಿಟ್ಟರೆ ಯಾವ ಕಾರು ಹತ್ತಿಲ್ಲ ಅಂದರು.
ಅದು ನಮ್ಮದೆ ಅಂಬಾಸಡರ್ ಕಾರು, ನಮ್ಮದೆ ದಾಖಲೆ ಎನ್ನೋದು ನನಗೆ ಹೆಮ್ಮೆ.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment