ಬೊನ್ಸಾಯ್ ಗಿಡಗಳನ್ನು ಕುಬ್ಜಗೊಳಿಸುವ ಜಪಾನ್ ಕಲೆ, 50 ವರ್ಷದ ಅರಳಿ ಮರ ನಿಮ್ಮ ಟೇಬಲ್ ಮೇಲೆ ಒಂದು ಅಡಿ ಮೀರುವುದಿಲ್ಲ, ಕನ್ನಡಿಗ ಬೋನ್ಸಾಯ್ ಶ್ರೀನಿವಾಸರು ಇದರಲ್ಲಿ ಪ್ರಖ್ಯಾತರ ಇವರ ಸಂಗ್ರಹದ ಎಲ್ಲಾ ಬೋನ್ಸಾಯ್ ಗಿಡಗಳು ಕೊಟ್ಯಾಂತರ ರೂಪಾಯಿ ಬೆಲೆ ಬಾಳುವಂತದ್ದು, ಇವರು ತಮ್ಮ ತಂದೆ ತಾಯಿ ಸ್ಮಾರಕವಾಗಿ ಲಾಲ್ ಬಾಗ್ ಗೆ ದಾನ ನೀಡಿದ್ದಾರೆ.
#ಬೊನ್ಸಾಯ್_ಒಂದು_ಅದ್ಬುತ_ಕಲೆ. #ಇದರ_ಮೂಲ_ಜಪಾನ್_ಚೈನಾ #ನಮ್ಮ_ರಾಜ್ಯದ_ಬೊನ್ಸಾಯ್_ಶ್ರೀನಿವಾಸರು_ಪ್ರಖ್ಯಾತರು. ಇತ್ತೀಚೆಗೆ ದ.ಕ.ಜಿಲ್ಲೆಯ ಬರಹಗಾರರಾದ #ತೇಜ್_ಕುಮಾರ್ ತಮ್ಮ 20 ವರ್ಷದ ಬೊನ್ಸಾಯ್ ಗಿಡ ಪೇಸ್ ಬುಕ್ ನಲ್ಲಿ ಪ್ರಕಟಿಸಿದಾಗ ನನಗೆ ಬೊನ್ಸಾಯ್ ಶ್ರೀನಿವಾಸರ ನೆನಪಾಯಿತು ಸುಮಾರು 17 ವರ್ಷದ ಹಿಂದಿನ ನನ್ನ ಅವರ ಬೇಟಿ ಲಾಲ್ ಬಾಗ್ ನಲ್ಲಿ ಆಗಿದ್ದು ನೆನಪಾಯಿತು. ಬೊನ್ಸಾಯ್ ತಮ್ಮ ಹೆಸರಿನ ಮುಂದಿರುವ ಶ್ರೀನಿವಾಸರು ಕನ್ನಡಿಗರು ಇವರು ಜಪಾನ್ ನ ಕಲೆ ಕುಬ್ಜ ಸಸ್ಯಗಳನ್ನ ಬೆಳೆಸಿ ಸಂಗ್ರಹಿಸುವುದರಲ್ಲಿ ಪರಿಣಿತರು. .ಸುಮಾರು 50 ವರ್ಷದ ಟೇಬಲ್ ಮೇಲಿಡುವ ಅರಳಿ ಮರ ಒಂದು ಅಡಿಗಿಂತ ಕಡಿಮೆ ಇಂತಹ ನೂರಾರು ಸಂಗ್ರಹ ಅವರಲ್ಲಿದೆ. ಇವರ ಬಗ್ಗೆ ಸಾಗರದ ಕವಲಗೋಡು ವಿಜ್ಞಾನ ಕೇಂದ್ರ ಪುಸ್ತಕ ಒಂದನ್ನು 2000 - 2003 ರಲ್ಲಿ ಪ್ರಕಟಿಸಿದ್ದರು ಮಿತ್ರ #ಕವಲಗೋಡು_ವೆಂಕಟೇಶ್ ಕಳಿಸಿದ್ದರು. 2004ರಲ್ಲಿ ನಾನು ಬೆಂಗಳೂರು ವಾಸಿ ಪ್ರತಿ ದಿನ ಲಾಲ್ ಬಾಗ್ ನಲ್ಲಿ ವಾಕಿಂಗ್ ಮತ್ತು ಅಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಯಾವುದೋ ಕೆಲಸಕ್ಕಾಗಿ ನಿತ್ಯ ಅಲೆದಾಟ ಆ ಸಂದಭ೯ದಲ್ಲಿ ಲಾಲ್ ಬಾಗ್ ನ ದಕ್ಷಿಣ ಭಾಗದ ಪ್ರವೇಶ...