ಬೊನ್ಸಾಯ್ ಗಿಡಗಳನ್ನು ಕುಬ್ಜಗೊಳಿಸುವ ಜಪಾನ್ ಕಲೆ, 50 ವರ್ಷದ ಅರಳಿ ಮರ ನಿಮ್ಮ ಟೇಬಲ್ ಮೇಲೆ ಒಂದು ಅಡಿ ಮೀರುವುದಿಲ್ಲ, ಕನ್ನಡಿಗ ಬೋನ್ಸಾಯ್ ಶ್ರೀನಿವಾಸರು ಇದರಲ್ಲಿ ಪ್ರಖ್ಯಾತರ ಇವರ ಸಂಗ್ರಹದ ಎಲ್ಲಾ ಬೋನ್ಸಾಯ್ ಗಿಡಗಳು ಕೊಟ್ಯಾಂತರ ರೂಪಾಯಿ ಬೆಲೆ ಬಾಳುವಂತದ್ದು, ಇವರು ತಮ್ಮ ತಂದೆ ತಾಯಿ ಸ್ಮಾರಕವಾಗಿ ಲಾಲ್ ಬಾಗ್ ಗೆ ದಾನ ನೀಡಿದ್ದಾರೆ.
#ಇದರ_ಮೂಲ_ಜಪಾನ್_ಚೈನಾ
#ನಮ್ಮ_ರಾಜ್ಯದ_ಬೊನ್ಸಾಯ್_ಶ್ರೀನಿವಾಸರು_ಪ್ರಖ್ಯಾತರು.
ಇತ್ತೀಚೆಗೆ ದ.ಕ.ಜಿಲ್ಲೆಯ ಬರಹಗಾರರಾದ #ತೇಜ್_ಕುಮಾರ್ ತಮ್ಮ 20 ವರ್ಷದ ಬೊನ್ಸಾಯ್ ಗಿಡ ಪೇಸ್ ಬುಕ್ ನಲ್ಲಿ ಪ್ರಕಟಿಸಿದಾಗ ನನಗೆ ಬೊನ್ಸಾಯ್ ಶ್ರೀನಿವಾಸರ ನೆನಪಾಯಿತು ಸುಮಾರು 17 ವರ್ಷದ ಹಿಂದಿನ ನನ್ನ ಅವರ ಬೇಟಿ ಲಾಲ್ ಬಾಗ್ ನಲ್ಲಿ ಆಗಿದ್ದು ನೆನಪಾಯಿತು.
ಬೊನ್ಸಾಯ್ ತಮ್ಮ ಹೆಸರಿನ ಮುಂದಿರುವ ಶ್ರೀನಿವಾಸರು ಕನ್ನಡಿಗರು ಇವರು ಜಪಾನ್ ನ ಕಲೆ ಕುಬ್ಜ ಸಸ್ಯಗಳನ್ನ ಬೆಳೆಸಿ ಸಂಗ್ರಹಿಸುವುದರಲ್ಲಿ ಪರಿಣಿತರು.
ಇವರ ಬಗ್ಗೆ ಸಾಗರದ ಕವಲಗೋಡು ವಿಜ್ಞಾನ ಕೇಂದ್ರ ಪುಸ್ತಕ ಒಂದನ್ನು 2000 - 2003 ರಲ್ಲಿ ಪ್ರಕಟಿಸಿದ್ದರು ಮಿತ್ರ #ಕವಲಗೋಡು_ವೆಂಕಟೇಶ್ ಕಳಿಸಿದ್ದರು.
2004ರಲ್ಲಿ ನಾನು ಬೆಂಗಳೂರು ವಾಸಿ ಪ್ರತಿ ದಿನ ಲಾಲ್ ಬಾಗ್ ನಲ್ಲಿ ವಾಕಿಂಗ್ ಮತ್ತು ಅಲ್ಲಿನ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಯಾವುದೋ ಕೆಲಸಕ್ಕಾಗಿ ನಿತ್ಯ ಅಲೆದಾಟ ಆ ಸಂದಭ೯ದಲ್ಲಿ ಲಾಲ್ ಬಾಗ್ ನ ದಕ್ಷಿಣ ಭಾಗದ ಪ್ರವೇಶದ ಹೆಬ್ಬಾಗಿಲ ಬಲ ಭಾಗದಲ್ಲಿ ಬೊನ್ಸಾಯ್ ಪಾಕ್೯ ನಿಮಾ೯ಣ ಆಗುವುದು ನೋಡಿ ಅಲ್ಲಿ ವೀಕ್ಷಿಸುತ್ತಿದ್ದೆ.
ಅಲ್ಲಿ ಕೆಲಸ ನಿವ೯ಹಿಸುವವರಿಗೆ ಇದು ಯಾರು ಮಾಡಿದ್ದು ಅಂತೆಲ್ಲ ಕೇಳಿದರೆ ಅವರಿಗೆ ಗೊತ್ತಿಲ್ಲ, ಬೆಂಗಳೂರಿನ #ಬೊನ್ಸಾಯಿ_ಶ್ರೀನಿವಾಸ್ ಅಂತ ಒಬ್ಬರಿದ್ದಾರೆ ಅವರು ಇದರಲ್ಲಿ ಪೇಮಸ್ ಅಂತ ಜೊತೆಯಲ್ಲಿದ್ದ ಗೆಳೆಯರಿಗೆ ಹೇಳುತ್ತಿದ್ದಾಗ " ನಾನೇ ಬೊನ್ಸಾಯ್ ಶ್ರೀನಿವಾಸ್" ಅಂತ ಗಿಡದ ಮರೆಯಿಂದ ಎದ್ದು ಬಂದರು.
ಪರಸ್ಪರ ಪರಿಚಯ ಅವರ ಪುಸ್ತಕದ ಬಗ್ಗೆ ಎಲ್ಲಾ ಮಾತಾಡಿದರು, ಅವರ ತಂದೆ ತಾಯಿ ಹೆಸರಲ್ಲಿ ಲಾಲ್ ಬಾಗ್ ಗೆ ಅವರಲ್ಲಿರುವ ಎಲ್ಲಾ ಸಂಗ್ರಹ ದಾನ ಮಾಡಿದ್ದಾರೆ, ಮಾರಾಟ ಮಾಡುವುದಾದರೆ ಕೊಟ್ಯಾಂತರ ಹಣಕ್ಕೆ ಖರೀದಿಸುವವರಿದ್ದರು ತಿರಸ್ಕರಿಸಿದ್ದಾಗಿ ತಿಳಿಸಿದರು.
Comments
Post a Comment