#ನೀರು_ಇಂಗಿಸಲು_ಪ್ರೋತ್ಸಾಹಿಸುವ_ಕಾರ್ಯ.
2014ರ ನಂತರ ಇಂತಹ ಸಾಹಸ ಕೈ ಬಿಟ್ಟೆ ಅದಕ್ಕೂ ಮೊದಲು ವರ್ಷಕ್ಕೆ ಒಂದೆರೆಡು ಬಾರಿ ಆದರೂ ಜನಪರವಾದ ಕರಪತ್ರ ಮುದ್ರಿಸಿ ಹಂಚುತ್ತಿದ್ದೆ.
ಬ್ರಾಡ್ ಗೇಜ್ ಗಾಗಿ, ತುಮರಿ ಸೇತುವೆಗಾಗಿ, ಹಂದಿಗೋಡು ಕಾಯಿಲೆ ಬಗ್ಗೆ, ಮಲೆನಾಡು ಗಿಡ್ಡ ತಳಿ ಉಳಿಸಿ ಅಂತ, ಬಗರ್ ಹುಕುಂ ಗಾಗಿ, ಈಸೂರು ಸ್ಮರಣೆಗಾಗಿ... ಹೀಗೆ ಅನೇಕ ಕರಪತ್ರಗಳು.
ಇದರಲ್ಲಿ ಇವತ್ತು ಇಲ್ಲಿ ಹಾಕಿರುವುದು 3 ಅಡಿ ಉದ್ದ X ಒಂದೂವರೆ ಅಡಿ ಅಗಲ X ಒಂದೂವರೆ ಅಡಿ ಎತ್ತರದ ಅತ್ಯಂತ ಚಿಕ್ಕದಾದ ಅತ್ಯಂತ ಕಡಿಮೆ ವೆಚ್ಚದ ಮತ್ತು ಮನೆ ಮನೆಗಳಲ್ಲಿ ನಿರ್ಮಿಸಿಕೊಂಡು ಇಂತಹ ಒಂದು ಇಂಗು ಗುಂಡಿಯಿಂದ ಕನಿಷ್ಟ 25 ಸಾವಿರ ಲೀಟರ್ ನೀರು ಇಂಗಿಸುವ ಬಗ್ಗೆ ಪ್ರಚಾರ ಮಾಡಿದ ಕರಪತ್ರ ಇದು.
ಸ್ವತಃ ನಾನು ಇವುಗಳನ್ನು ನಿರ್ಮಿಸಿಕೊಂಡು ಅದರ ಪರಿಣಾಮದ ಲಾಭ ನೋಡಿ ಈ ಕರಪತ್ರ ಅನೇಕ ಮುದ್ರಣ ಮಾಡಿದ್ದೆ.
Comments
Post a Comment