ಶಿವಮೊಗ್ಗ ಜಿಲ್ಲೆಯ ಕೆಳದಿ ರಾಜ ವೆಂಕಟಪ್ಪ ನಾಯಕರು 400 ವರ್ಷದ ಹಿಂದೆ ರಾಣಿ ಚಂಪಕಳ ಸ್ಮರಣಾರ್ಥ ನಿರ್ಮಿಸಿದ ಸ್ಮಾರಕ ಚಂಪಕ ಸರಸ್ಸು ಪುನರುಜ್ಜೀವನಕ್ಕೆ ಮುಂದಾಗಿರುವ ಖ್ಯಾತ ಚಲನಚಿತ್ರ ನಟ ಯಶ್ ಮತ್ತು ಇದರ ನೇತೃತ್ವ ವಹಿಸಿರುವ ಖ್ಯಾತ ಜಲ ತಜ್ಞ ಶಿವಾನಂದ ಕಳವೆ ಅಭಿನಂದನಾರ್ಹರು.
#ಚಂಪಕಸರಸ್ಸು_ಪುನರುಜ್ಜೀವನಕ್ಕೆ_ಮುಂದಾಗಿರುವ_ಖ್ಯಾತ_ಚಲನಚಿತ್ರನಟ_ಯಶ್.
#ಪುನರುಜ್ಜೀವನದ_ಕಾರ್ಯದ_ಮುಖ್ಯ_ಪ್ರೇರಕರು_ಜಲತಜ್ಞ_ಶಿವಾನಂದಕಳವೆ .
#ಇವತ್ತಿಂದ_ಯಶೋಮಾರ್ಗದಿಂದ_ಪಾರಂಪರಿಕ_ಕಲ್ಯಾಣಿ_ಚಂಪಕಸರಸ್ಸು_ಪುನರುಜ್ಜೀವನ_ಕಾರ್ಯ_ಪ್ರಾರಂಭ.
ಚಂಪಕ ಸರಸ್ಸು ಸುಂದರವಾದ ಕಲ್ಯಾಣಿ ಇದರ ಮಧ್ಯೆ ಶಿವಾಲಯ ಅಲ್ಲಿಗೆ ಹೋಗಲು ನೀರಿನ ಮೇಲೆ ಕಲ್ಲಿನದ್ದೇ ಸಂಕ, ಸುಂದರವಾದ ಶಿಲಾಮಯ ಆನೆಗಳು, ಸುತ್ತಲೂ ಪಗಾರ ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಬಸ್ ಸ್ಟಾಂಡಿನಿಂದ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಮಲಂದೂರಿನ ಸಂತೋಷ್ ಕೋಲ್ಡ್ ಸ್ಟೋರೇಜ್ ಹಿಂಬಾಗದಲ್ಲಿದೆ.
ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಳ ನಿತ್ಯ ಬಿಡುಸುತ್ತಿದ್ದ ರಂಗೋಲಿಯಿಂದ ಪ್ರಾರಂಭವಾಗುವ ಪ್ರೇಮ ಕಥೆ, ವಿವಾಹವಾಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿ ತನ್ನ ಆಹಾರ ಪದ್ಧತಿಗಾಗಿ ಪಟ್ಟದ ರಾಣಿ ಭದ್ರಮ್ಮಾಜಿಯ ಮತ್ತು ರಾಜ ವೆಂಕಟಪ್ಪ ನಾಯಕರ ಮಧ್ಯ ಉಂಟಾಗುವ ವಿರಹ ಇದಕ್ಕಾಗಿ ರಾಜ್ಯದ ಪ್ರಜೆಗಳಲ್ಲಿ ರಾಜ ವೆಂಕಟಪ್ಪ ನಾಯಕರ ಮೇಲೆ ಹೆಚ್ಚಾಗುವ ಆಸಹನೆ ತಾಳಿಕೊಳ್ಳದೆ ರಾಣಿ ಚಂಪಕ ವಜ್ರದ ಪುಡಿ ಹಾಲಿನ ಜೊತೆ ಸೇವಿಸಿ ಜೀವ ತ್ಯಾಗ ಮಾಡುತ್ತಾಳೆ, ರಾಣಿ ಚಂಪಕಾಳ ಸ್ಮರಣೆಗಾಗಿ ನಿರ್ಮಿಸಿರುವುದೇ ಈ ಚಂಪಕ ಸರಸ್ಸು (ಸರಸ್ಸು ಎಂದರೆ ಕೊಳ).
ಕೆಳದಿ ಇತಿಹಾಸದಲ್ಲಿ ದೀರ್ಘ ಕಾಲ ಆಳಿದ, ರಾಜ್ಯ ವಿಸ್ತಾರ ಮಾಡಿದ, ರಾಣಿ ಅಬ್ಬಕ್ಕ ಮತ್ತು ಕಾಳು ಮೆಣಸಿನ ರಾಣಿ ಬೈರಾದೇವಿಯವರ ರಾಜ್ಯವನ್ನೂ ವಶಪಡಿಸಿಕೊಂಡು ಇವತ್ತಿನ ಸಾಗರ ಪಟ್ಟಣವನ್ನೇ ನಿರ್ಮಿಸಿದ್ದರು ಕೂಡ ರಾಜ ವೆಂಕಟಪ್ಪ ನಾಯಕ ಮತ್ತ ರಾಣಿ ಚಂಪಕಳ ಅಂತರ್ಜಾತಿ ವಿವಾಹ ರಾಜ ವೆಂಕಟಪ್ಪ ನಾಯಕರನ್ನು ಉದ್ದೇಶ ಪೂರ್ವಕವಾಗಿ ಕತ್ತಲಲ್ಲಿ ಇಡಲಾಗಿದೆ.
ಈ ಕಾರಣದಿಂದಲೇ ಈ ಸುಂದರ ಸ್ಮಾರಕ ನೇಪಥ್ಯಕ್ಕೆ ಸರಿದಿತ್ತಾ?.
2024ರಲ್ಲಿ 400 ವಷಾ೯ಚಾರಣೆಯ ಸಂದರ್ಭದಲ್ಲಿ ಈ ಪಾರಂಪರಿಕ ಕಲ್ಯಾಣಿಯ ಪುನರುಜ್ಜೀವನ ಮಾಡುವ ಕೆಲಸ ಕನ್ನಡದ ಪ್ರಸಿದ್ಧ ನಟ ಯಶ್ ತೆಗೆದುಕೊಂಡಿದ್ದಾರೆ, ಈಗಾಗಲೇ ನಾಡಿನ ನೆಲ-ಜಲ-ಭಾಷೆಯ ಸಂರಕ್ಷಣೆಗಾಗಿ ಅವರು ಸ್ಥಾಪಿಸಿರುವ ಯಶೋ ಮಾಗ೯ (NGO) ಮೂಲಕ ಇವತ್ತಿನಿಂದ ಚಂಪಕ ಸರಸ್ಸು ಸುತ್ತಲೂ ಸ್ವಚ್ಚಗೊಳಿಸಿ, ಇಂಗು ಗುಂಡಿ ನಿರ್ಮಿಸಿ, ಈ ಸ್ಮಾರಕಕ್ಕೆ ಗೇಟ್ ನಿಮಿ೯ಸಿ, ಕಾವಲುಗಾರರ ಮನೆ ಇತ್ಯಾದಿ ಅವಶ್ಯವಾದ ಸಂರಕ್ಷಣೆಯ ಕೆಲಸಕ್ಕೆ ಅವರ ಸಂಸ್ಥೆಯ ಜೊತೆ ಹೈದ್ರಾಬಾದ್ ಮೂಲದ ಪ್ರಖ್ಯಾತ ಖಾದ್ಯ ತೈಲ ಸಂಸ್ಥೆ ಪ್ರೀಡಂ ಆಯಿಲ್ ಕೂಡ ಕೈ ಜೋಡಿಸಿರುವುದು ಇತಿಹಾಸ ಪ್ರಿಯರಿಗೆ ಮತ್ತು ಆನಂದಪುರಂನ ನಿವಾಸಿಗಳಿಗೆ ಸಂತೋಷ ಉಂಟು ಮಾಡಿದೆ.
ಈ ಐತಿಹಾಸಿಕ ಸ್ಮಾರಕ ಪಾರಂಪರಿಕ ಕಲ್ಯಾಣಿಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ಉಳಿಸುವ ಮಹತ್ವಾಕಾಂಕ್ಷೆಯಿಂದ ನಟ ಯಶ್ ರನ್ನು ಒಪ್ಪಿಸಿ ಕಾರ್ಯ ಸಾದು ಮಾಡಿದವರು ನಾಡಿನ ಪ್ರಖ್ಯಾತ ಜಲ ತಜ್ಞರಾದ, ಪರಿಸರ ವಿಜ್ಞಾನಿ ಮತ್ತು ಪತ್ರಕರ್ತರಾದ ಶಿವಾನಂದ ಕಳವೆಯವರನ್ನು ಕೆಳದಿ ಇತಿಹಾಸ ಬಲ್ಲವರೆಲ್ಲ ಮರೆಯುವಂತಿಲ್ಲ.
ಇವತ್ತಿನ ಬೆಳಿಗ್ಗೆ ಪೂಜೆಯೊಂದಿಗೆ ಈ ಪುನರುಜ್ಜೀವನದ ಮಹತ್ವದ ಕೆಲಸ ಪ್ರಾರಂಭದ ಶುಭ ಸಂದರ್ಭದಲ್ಲಿ ಅಖಿಲ ಭಾರತ ಯಶ್ ಅಭಿಮಾನಿ ಸಂಘದ ಅಧ್ಯಕ್ಷರಾದ ರಾಕೇಶ್, ಕರ್ನಾಟಕ ರಾಜ್ಯ ಯಶ್ ಅಭಿಮಾನಿ ಸಂಘದ ಅಧ್ಯಕ್ಷರಾದ ಸತೀಶ್ ಶಿವಣ್ಣ, ಯಶ್ ಅಭಿಮಾನಿ ಸಂಘದ ಸಂಸ್ಥಾಪಕರಾದ ಶ್ರೀ ಗಂಧ ಭಾಗವಹಿಸುತ್ತಿದ್ದಾರೆ.
ಆನಂದಪುರಂನ ಸ್ಥಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನವೀನಾ ರವೀಂದ್ರ ಗೌಡ, ಉಪಾದ್ಯಕ್ಷರಾದ ಮೋಹನ್ ಮತ್ತು ಸದಸ್ಯರು ಮತ್ತು ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ನ ರಾಜೇಂದ್ರ ಗೌಡರು, ಕಾಯ೯ದಶಿ೯ ಮತ್ತು ಪತ್ರಕರ್ತರಾದ ಬಿ.ಡಿ. ರವಿ ಮತ್ತು ಅವರೆಲ್ಲರ ಸಂಗಡಿಗರು ಭಾಗಿಯಾಗಿದ್ದಾರೆ ಮತ್ತು ಪುನರುಜ್ಜೀವನ ಕೆಲಸದ ನೇತೃತ್ವ ವಹಿಸಿದ್ದಾರೆ.
ಮುಂದಿನ ದಿನದಲ್ಲಿ ಇಲ್ಲಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಆಗಬೇಕು ಇದಕ್ಕೆ ಸ್ಥಳಿಯ ಶಾಸಕರಾದ ಹರತಾಳು ಹಾಲಪ್ಪನವರು ಇಂತಹ ಜನಪರ ಕೆಲಸಕ್ಕೆ ಯಾವತ್ತೂ ಸಹಕರಿಸುತ್ತಾರೆ.
ಇದು ಒಂದು ಪ್ರವಾಸೋದ್ಯಮ ಕೇಂದ್ರವಾಗಿಸಲು ಸಂಸದರಾದ ರಾಘವೇಂದ್ರ, ಜಿಲ್ಲಾ ಮಂತ್ರಿಗಳಾದ ಈಶ್ವರಪ್ಪ ಮತ್ತು ಗೃಹ ಸಚಿವರಾದ ಆರಗ ಜ್ಞಾನೇಂದ್ರರು ಮುಂದಾಗುವ ವಿಶ್ವಾಸವಿದೆ.
ಕೆಳದಿ ಅರಸರಿಂದ ನಿಮಾ೯ಣವಾಗಿರುವ ಸುಮಾರು ನಾಲ್ಕುನೂರು ವರ್ಷದ ಇತಿಹಾಸ ಇರುವ ಈ ಸುಂದರ ಸ್ಮಾರಕದ ಪುನರುಜ್ಜೀವನಕ್ಕೆ ಮುಂದಾದ ಕನ್ನಡದ ಪ್ರಖ್ಯಾತ ನಟ ಯಶ್ ರವರಿಗೆ ಇನ್ನೊಮ್ಮೆ ಇತಿಹಾಸಕ್ತರು ಮತ್ತು ಶಿವಮೊಗ್ಗ ಜಿಲ್ಲೆಯ ಸಮಸ್ತ ನಾಗರೀಕರ ಪರವಾಗಿ ಅಭಿನಂದಿಸುತ್ತೇನೆ, ದೇವರು ಅವರಿಗೆ ಆಯುರಾರೋಗ್ಯ - ಆಯಸ್ಸು- ಐಶ್ವರ್ಯ ಮತ್ತು ಯಶಸ್ಸು ದಯಪಾಲಿಸಲಿ ಎಂದು ಹಾರೈಸುತ್ತೇನೆ.
ನಾನೂರು ವರ್ಷದಿಂದ ಕೆಳದಿ ಇತಿಹಾಸ ಮರೆತಿರುವ ದುರ೦ತ ಪ್ರೇಮದ ರಾಣಿ ಚಂಪಕಳ ಆತ್ಮ ಮುಕ್ತಿಗಾಗಿ ಕಾದಿದೆ ಎಂಬುದು ಸುಳ್ಳಲ್ಲ.
Comments
Post a Comment