#ಮನೋವಿಜ್ಞಾನವಾ?
#ಹಾಗಾದರೆ_ದೇವಾಲಯಗಳು_ಭಕ್ತಿ_ಜ್ಞಾನ_ವಿಜ್ಞಾನಗಳ_ಸಂಗಮವೆ?.
#ದೇವರ_ಗುಡ್ಡದ_ಈ_ಮ್ಯಾಜಿಕ್_ಕಲ್ಲು_ಗುಂಡುಗಳು.
ರಾಣಿಬೆನ್ನೂರು ಸಮೀಪದ ದೇವರ ಗುಡ್ಡದ ಮೈಲಾರೇಶ್ವರ ದೇವರಿಗೆ ಭಕ್ತರು ನಾಡಿನಾದ್ಯಂತ ಲಕ್ಷಾಂತರ ಜನರಿದ್ದಾರೆ ಅಲ್ಲಿನ ಕಾರಣಿಕರ ಹೇಳಿಕೆ ವರ್ಷದ ಮಳೆ-ಬೆಳೆಯ ಭವಿಷ್ಯವಾಣಿ ಅಂತಲೇ ಭಕ್ತರು ಬಾವಿಸಿದ್ದಾರೆ.
ಸುಮಾರು 16 ವರ್ಷದ ಹಿಂದೆ ಇಲ್ಲಿಗೆ ಹೋಗಿದ್ದೆ ದೇವಾಲಯದ ಒಳ ಹೋಗುವ ಮೊದಲು ಮರದ ಕಟ್ಟೆಯ ಮೇಲೆ ಸಾಲಾಗಿ ಜೋಡಿಸಿಟ್ಟಿದ್ದ ವಿವಿಧ ಗಾತ್ರದ ಕಲ್ಲು ಗುಂಡುಗಳನ್ನು ನೋಡಿದೆ ಬಹಶಃ ಪೂಜೆಗಾಗಿ ಇಟ್ಟಿರುವ ಕಲ್ಲು ಗುಂಡುಗಳಂತ ಬಾವಿಸಿಕೊಂಡಿದ್ದೆ.
ದೇವರ ಪೂಜೆ ದರ್ಶನದ ನಂತರ ಹೊರ ಬಂದಾಗ ಈ ಕಲ್ಲು ಗುಂಡುಗಳ ಸಮೀಪ ಕುಳಿತ ಮಹಿಳೆಗೆ ಕೇಳಿದೆ ಇದಾವ ದೇವರುಗಳು? ಅಂತ ಆಗ ಆಕೆ ಹೇಳಿದ್ದು
"ಇವು ದೇವರ ಪವಾಡದ ಕಲ್ಲುಗಳು, ನಿಮ್ಮ ಮನಸ್ಸಲ್ಲಿ ಯಾವುದಾದರೂ ಪ್ರಶ್ನೆ ಇದ್ದರೆ ಅದು ಈಡೇರುವುದಾದರೆ ಸುಲಭವಾಗಿ ಎದ್ದು ಬಾ ಅಂದುಕೊಳ್ಳಿ ಈ ಸಣ್ಣ ಕಲ್ಲು ಗುಂಡನ್ನು ನಮಸ್ಕರಿಸಿ ಎತ್ತಿ, ನಿಮ್ಮ ಕೆಲಸ ಈಡೇರುವುದಾದರೆ ನೀವು ಈ ಕಲ್ಲು ಎತ್ತುತ್ತೀರಿ ಅದೇ ನಿಮ್ಮ ಬಯಕೆ ಈಡೇರುವುದಿಲ್ಲವಾದರೆ ಈ ಸಣ್ಣ ಗುಂಡುಕಲ್ಲು ನಿಮಗೆ ಎತ್ತಲು ಸಾಧ್ಯವಿಲ್ಲ.ಇದೇ ರೀತಿ ಈ ದೊಡ್ಡ ಗುಂಡುಕಲ್ಲು ನೀವು ಬಯಸಿದ್ದು ಈಡೇರುವುದಾದರೆ ಹೂವು ಎತ್ತಿದ೦ಗೆ ಎದ್ದು ಬರುತ್ತೆ ಬೇಕಾದರೆ ಪರೀಕ್ಷಿಸಿ" ಅಂದರು.
ಸರಿ ಅಂತ ಪ್ರಯೋಗ ಮಾಡಿದೆ ಮನಸ್ಸಿನಲ್ಲಿ ಪ್ರಶ್ನೆ ಮಾಡಿಕೊಂಡೆ ಈಡೇರುವುದಾದರೆ ಈ ದೊಡ್ಡ ಕಲ್ಲು ಗುಂಡು (ಸುಮಾರು 40 ಕೇಜಿ ಭಾರ) ಎದ್ದು ಬರಲಿ ಎಂದು ಎತ್ತಿದೆ ಹಗುರವಾಗಿ ಕಲ್ಲು ಗುಂಡು ಎತ್ತಿಟ್ಟೆ ಅಂದರೆ ಮನೋಭಿಲಾಷೆ ಈಡೇರುವ ಭರವಸೆಯ ನೈತಿಕ ದೈಯ೯ ಸಿಕ್ಕಿತು.
ಇನ್ನೊಂದು ಪ್ರಶ್ನೆಗೆ ಸಣ್ಣ ಗುಂಡುಕಲ್ಲು ಮೇಲೆ ಇರಿಸಿದೆ ಆದರೆ ಏನಾಶ್ವಯ೯ ಕೇವಲ 10 ಕೇಜಿ ಬಾರದ ಸಣ್ಣ ಕಲ್ಲು ಗುಂಡು ಎತ್ತಲಾಗಲಿಲ್ಲ ಅಂದರೆ ನನ್ನ ಬಯಕೆ ಈಡೇರುವುದಿಲ್ಲ ಎಂಬ ಸಂದೇಶವದು, ಈ 16 ವರ್ಷದಲ್ಲಿ ನಿಜಜೀವನದಲ್ಲಿ ಈ ಪ್ರಶ್ನೆಗೆ ಸಿಕ್ಕ ಉತ್ತರದಂತೆ ನಡೆದ ಅನುಭವ ಈ ಕಲ್ಲಿನ ಮಹಿಮೆ ಸತ್ಯ ಎನ್ನಿಸುತ್ತದೆ.
ಇದನ್ನು ಆದುನಿಕ ಮನೋಶಾಸ್ತ್ರದಲ್ಲಿ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಾರೆ ಇದು ಒಂದು ರೀತಿ ಹಿಪ್ನೋಟಿಸಂ ಅಂತಾರೆ ಅದೇನೆ ಇರಲಿ ಒಪ್ಪುವುದು ಬಿಡುವುದು ಅವರವರ ಭಾವನೆಗೆ ಬಿಟ್ಟುಬಿಡೋಣ ಆದರೆ ಪುರಾತನ ದೇವಾಲಯಗಳು ಭಕ್ತಿಯ ಕೇಂದ್ರಗಳು ಮಾತ್ರವಲ್ಲ ಜ್ಞಾನ - ವಿಜ್ಞಾನಗಳ ಸಂಗಮವೂ ಹೌದು.
Comments
Post a Comment