#ಇಕ್ಕೇರಿ_ಅಘೋರೇಶ್ವರ_ದೇವಾಲಯ
#ಸಹಬಾಳು_ಸಮಪಾಲು_ಸವೋ೯ದಯ_ಎಂಬ_ಸಂದೇಶದೊಡನೆ_ಇತ್ತು.
#ಈಗ_ಬಳಕೆಯಲ್ಲಿಲ್ಲ_ಏಕೆ?
#ಪಂಚಾಯತ್_ರಾಜ್_ಅಧಿಕಾರಿಗಳ_ನಿರ್ಲಕ್ಷ್ಯ
#ಜನಪರ_ಹೋರಾಟಗಾರರು_ಪತ್ರಕರ್ತರು_ಗಮನಹರಿಸಲಿ.
#ಹಾಲಿ_ಪಂಚಾಯತ್_ರಾಜ್_ಸಚಿವರು_ಶಿವಮೊಗ್ಗದ_ಈಶ್ವರಪ್ಪನವರು.
ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿ ಮತ್ತು ದೇವೇಗೌಡರು ಪ್ರಬಾವಿ ಮಂತ್ರಿಗಳಾಗಿದ್ದ ಕಾಲ ಆಗ ಶಿವಮೊಗ್ಗ ಜಿಲ್ಲೆಯಿಂದ ಜೆ.ಹೆಚ್.ಪಟೇಲರು ಮತ್ತು ಬಸವಣ್ಯಪ್ಪರು ಮಂತ್ರಿಗಳಾಗಿದ್ದ ಕಾಲ.
ಪ್ರಥಮ ಶಿವಮೊಗ್ಗ ಜಿಲ್ಲಾ ಪರಿಷತ್ ಅಸ್ತಿತ್ವಕ್ಕೆ ಬಂದಾಗ ಜನತಾ ಪರಿವಾರಕ್ಕೆ ಅಧಿಕಾರ ಚೆನ್ನಗಿರಿ ತಾಲ್ಲೂಕಿನ ಪಟೇಲರ ಆಪ್ತರಾಗಿದ್ದ ಮಹಾದೇವಪ್ಪ (ಇವರನ್ನು ಮಹಾದೇವಜ್ಜ ಅಂತ ಪ್ರೀತಿಯಿಂದ ಕರೆಯುತ್ತಿದ್ದರು) ಅಧ್ಯಕ್ಷರು, ಉಪಾದ್ಯಕ್ಷರಾಗಿ ಸೊರಬದ ಪಾಣಿ ರಾಜಪ್ಪ ಆಯ್ಕೆ ಆಗಿದ್ದರು.
ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಸಾಗರದಿಂದ ಬಿ.ಆರ್.ಜಯಂತ್, ಭದ್ರಾವತಿಯಿಂದ ಬಲ್ಕೀಶ್ ಬಾನು, ಶಿಕಾರಿಪುರದಿಂದ ಪೂರ್ಯನಾಯಕ್ ಹೀಗೆ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು.
ಈ ಸಂದರ್ಭದಲ್ಲೇ ಶಿವಮೊಗ್ಗ ಜಿಲ್ಲಾ ಪರಿಷತ್ ಗೆ ಲಾಂಚನ ಒಂದನ್ನು ಆಯ್ಕೆ ಮಾಡುತ್ತಾರೆ, ಅನೇಕರ ಸಲಹೆ ಸಹಕಾರದ ಜೊತೆಗೆ ಅಂತಿಮವಾಗಿ ಸಾಗರದ ಬಿ.ಆರ್.ಜಯಂತರು ಸೂಚಿಸಿದ ಲಾಂಚನ ಅಂತಿಮಗೊಳಿಸಿ 2000 ಇಸವಿ ಕೊನೆ ತನಕ ಜಿಲ್ಲಾ ಪಂಚಾಯತ್‌ನಲ್ಲೂ ಬಳಕೆ ಮಾಡುತ್ತಿದ್ದ ಲಾಂಚನ ಈಗೆಲ್ಲೂ ಕಾಣದಿರುವುದು ವಿಷಾದನೀಯ.
ಕೆಳದಿ ಅರಸರ ಎರಡನೆ ರಾಜಧಾನಿ ಇಕ್ಕೇರಿಯ ಸುಂದರ ಶಿಲಾಮಯ ಅಘೋರೇಶ್ವರ ದೇವಾಲಯದ ನಂದೀ ಮಂಟಪದ ಚಿತ್ರ ಅದರ ಕೆಳಗೆ ಸಮಾನತೆ ಸಾರುವ #ಸಹಬಾಳು_ಸಮಪಾಲು_ಸವೋ೯ದಯ ಎಂಬ ಸಂದೇಶದ ಸುಂದರವಾದ ಚೌಕಟ್ಟಿನ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪರಿಷತ್ ಲಾಂಚನ ಆಗಿನ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ರಾಮಕೃಷ್ಣ ಹೆಗ್ಗಡೆ, ದೇವೇಗೌಡರ ಪ್ರಶಂಸೆಗೂ ಕಾರಣವಾಗಿತ್ತು.
ಆಗ ಜಿಲ್ಲಾ ಪರಿಷತ್ ಸದಸ್ಯರಾಗಿದ್ದ ಆರಗ ಜ್ಞಾನೇಂದ್ರ ಈಗಿನ ಸರ್ಕಾರದಲ್ಲಿ ಗೃಹ ಮಂತ್ರಿಗಳು, ಪೂರ್ಯಾ ನಾಯಕರು ಈಗಿಲ್ಲ ಇವರ ಪತ್ನಿ ಶಾಸಕಿ ಆಗಿದ್ದರು, ಬಿ.ಆರ್.ಜಯಂತ್ ಸಾಗರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರು, ಬಲ್ಕೀಷ್ ಬಾನು ಏಐಸಿಸಿ ಸದಸ್ಯರು.
ಅಧಿಕಾರಿಗಳ ನಿರ್ಲಕ್ಷದಿಂದ ಉದ್ದೇಶ ಪೂರ್ವಕವಾಗಿ ಜಿಲ್ಲಾ ಪಂಚಾಯಿತಿಯ ಪ್ರತಿಷ್ಠಿತ ಲಾಂಚನ ಕಡೆಗಾಣಿಸುತ್ತಿರುವ ಬಗ್ಗೆ ಶಿವಮೊಗ್ಗ ಜಿಲ್ಲೆಯ ಜನಪರ ಹೋರಾಟಗಾರರು, ಜನಪ್ರತಿನಿದಿಗಳು ಮತ್ತು ಪತ್ರಕರ್ತರು ಗಮನ ಹರಿಸಬೇಕಾಗಿದೆ.
Comments
Post a Comment