ವಿಶ್ವ ವಿಖ್ಯಾತ ಸುಂದರವಾದ ಸದೃಡವಾದ ಬೇಕಲ ಕೋಟೆ ಒಂದು ಚಾರಿತ್ರಿಕ ಅಧ್ಯಯನ ಎಂಬ ಸಂಶೋದನ ಗ್ರಂಥ ಬರೆದ ಗಡಿನಾಡ ಕನ್ನಡಿಗ ಶಿವಾನಂದ ಬೇಕಲ್ ಗೆ ಸಮಸ್ತ ಕನ್ನಡಿಗರ ಕೃತಜ್ಞತೆಗಳು
#ಕೆಳದಿ_ಇತಿಹಾಸ_ಸ೦ಶೋದನೆಯಲ್ಲಿ_ಇದೊಂದು_ಮೈಲಿಕಲ್ಲು
#ಕೆಳದಿ_ಅರಸ_ಶಿವಪ್ಪನಾಯಕರಿಂದ_ನಿರ್ಮಾಣ
#ಬಗೆಹರಿದ_ಪ್ರಸಿದ್ದ_ಬೇಕಲ_ಕೋಟೆ_ವಿವಾದ.
ಕೇರಳದ ಕಾಸರಗೋಡಿನ ಸಮೀಪದ ಬೇಕಲಕೋಟೆ ವಿಶ್ವ ಪ್ರಸಿದ್ಧವಾದದು, ಇಲ್ಲಿ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾ ಶೂಟಿಂಗ್ ಗೆ ಬರುತ್ತಾರೆ 1999 ರ ತನಕ ಈ ಕೋಟೆ ನಿರ್ಮಿಸಿದವರ ಬಗ್ಗೆ ವಿವಾದವಿತ್ತು.
ಕೇರಳದ ಕೊಲತ್ತಿರಿ ಅರಸರು ನಿರ್ಮಿಸಿದರೆಂದು ಒಂದು ವಾದ ಇನ್ನೊಂದು ಮೈಸೂರಿನ ಹುಲಿ ಟಿಪ್ಪು ಸುಲ್ತಾನರು ನಿರ್ಮಿಸಿದ್ದೆಂಬ ವಾದ.
ಈ ಸಂದರ್ಭದಲ್ಲೇ ಬೇಕಲದಲ್ಲೇ ಹುಟ್ಟಿ ಬೆಳೆದು ಕೇರಳದ ಕ್ಯಾಲಿಕಟ್ ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿ, ಮೈಸೂರಿನಲ್ಲಿ ಬಿಎಡ್ ಓದಿ, ದಾರವಾಡದಲ್ಲಿ ಎಂ.ಎ. ಪದವಿ ಪಡೆದು, ಗುಲ್ಬರ್ಗದಲ್ಲಿ ಪಿಹೆಚ್ ಡಿ ಪಡೆದ ಮತ್ತು ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ಅಸಿಸ್ಟೆಂಟ್ ಸ್ಟೇಷನ್ ಡೈರೆಕ್ಟರ್ ಆಗಿದ್ದ ಶಿವಾನಂದ ಬೇಕಲ್ ರಿಗೆ ಕಾಸರಗೋಡು ಜಿಲ್ಲಾದಿಕಾರಿ ಆದಿಯಾಗಿ ಅನೇಕರು ಬೇಕಲ್ ಕೋಟೆ ನಿರ್ಮಾಣ ಮಾಡಿದವರಾರು ಎಂಬ ಸಂಶೋದನೆಗೆ ಒತ್ತಾಯಿಸಿದ್ದೆ ಈ ಚಾರಿತ್ರಿಕ ಅಧ್ಯಯನದ ಪುಸ್ತಕ #ಬೇಕಲ_ಕೋಟೆ 1999 ರಲ್ಲಿ ಪ್ರಕಟ ಆಗಲು ಕಾರಣವಾಯಿತು.
ಕನ್ನಡ, ಮಲೆಯಾಳ, ಇಂಗ್ಲೀಷ್, ಹಿಂದಿ ಮತ್ತು ತುಳು ಬಾಷೆಯಲ್ಲಿ ಪಾಂಡಿತ್ಯ ಹೊಂದಿರುವ ಇವರು ಕೆಳದಿ ಇತಿಹಾಸದ ಸಂಶೋಧನೆ ಮಾಡಿದ್ದಾರೆ, ಕೆಳದಿ ಆಳ್ವಿಕೆಯ ಪ್ರದೇಶಗಳನ್ನೆಲ್ಲ ಸಂದರ್ಶಿಸಿ ಅಧಿಕೃತವಾಗಿ ಈ ಪುಸ್ತಕ ಬರೆದು ಪ್ರಕಟಿಸಿದ್ದು ಬೇಕಲಕೋಟೆಯ ವಿವಾದ ಅಂತ್ಯಗೊಳ್ಳಲು ಸಹಕಾರಿ ಆಗಿದ್ದು ಇತಿಹಾಸ ಸತ್ಯ.
ಈ ಪುಸ್ತಕ ಪ್ರಕಟನೆ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ, ಈಗ ಈ ಪುಸ್ತಕ ಲಭ್ಯವಿರುವ ಮಾಹಿತಿ ಬೇಕಿದ್ದವರು ಗಡಿನಾಡ ಕನ್ನಡ ಹೋರಾಟಗಾರ ಶಿವರಾಂ ಕಾಸರಗೋಡು ಇವರ ಸಂಪರ್ಕಿಸಬಹುದು 09448572016.
Comments
Post a Comment