#ಶಿವಮೊಗ್ಗ_ಜಿಲ್ಲೆ_ಸಾಗರ_ತಾಲ್ಲೂಕಿನ_ಶಿರವಂತೆ_ರೈತರು
2014ರ ಪೆಬ್ರುವರಿ ತಿಂಗಳಲ್ಲಿ ತಾಳಗುಪ್ಪದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದ ರೈಲಿಗೆ ಸಾಗರ ತಾಲ್ಲೂಕಿನ ಶಿರವಂತೆ ಭಾಗದ ರೈತರ ಎಮ್ಮೆಗಳು ಸಿಲುಕಿ ಸಾವನ್ನಪ್ಪಿತ್ತು, ಇದು ಎಮ್ಮೆ ಕಳೆದುಕೊಂಡ ರೈತರಿಗೆ ದೊಡ್ಡ ನಷ್ಟವೇ ಆಗಿತ್ತು ಆದರೆ ಭಾರತೀಯ ರೈಲ್ವೆ ತನ್ನ ಮಾರ್ಗದಲ್ಲಿ ಯಾವುದೇ ಅಪಘಾತ ಜೀವಹಾನಿಗೆ ಪರಿಹಾರ ಕೊಡುವುದಿಲ್ಲ (ರೈಲ್ವೆ ಪ್ರಯಾಣಿಕರನ್ನು ಹೊರತು ಪಡಿಸಿ) ರೈಲ್ವೆ ಇಲಾಖೆ ಹೇಳುವುದು ನಮ್ಮ ಸುಪರ್ದಿಯ ಮಾರ್ಗದಲ್ಲಿ ನೀವು ಅನದಿಕೃತ ಪ್ರವೇಶ ಮಾಡುವುದೇ ಅಪರಾದ ಅಂತ!.
ಇಡೀ ದೇಶದಾದ್ಯಾಂತ ಲಕ್ಷಾಂತರ ಕಿಲೋ ಮೀಟರ್ ರೈಲು ಮಾರ್ಗಕ್ಕೆ ಹೊರಗಿನಿಂದ ಯಾರೂ ಪ್ರವೇಶ ಮಾಡದಂತೆ ತಡೆಗೋಡೆ ಬೇಲಿ ಯಾವುದೂ ನಿರ್ಮಿಸಲಾಗಿಲ್ಲ ಆದರೆ ಯಾರೂ ಪ್ರವೇಶಿಸ ಬಹುದಾದ ಈ ಮಾರ್ಗ ಮಾತ್ರ ಅನದಿಕೃತ ಪ್ರವೇಶಕ್ಕೆ ಅಪರಾದ ಅಂತಲೇ ಹೇಳುತ್ತದೆ.
ಕೆಲವು ವರ್ಷಗಳೇ ಬೇಕು ನಮ್ಮ ನ್ಯಾಯಲಯಗಳು ಇದಕ್ಕೆ ಪರಿಹಾರ ಕಂಡು ಹಿಡಿಯಲು.
ಇಂತಹ ಸಂದರ್ಭದಲ್ಲೇ ಸ್ಥಳಿಯ ರೈತರು ಒಟ್ಟಾಗಿ ಎಮ್ಮೆ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಿಸಲು ಒಂದಾಗುತ್ತಾರೆ ಆದರೆ ಅಪಘಾತ ಮಾಡಿದ ರೈಲು ಚಾಲಕ ಕೆಲ ದಿನ ಈ ಮಾರ್ಗದಲ್ಲಿ ಬರುವುದಿಲ್ಲ, ಆತ ರೈಲು ಚಾಲನೆಗೆ ಬಂದು ವಾಪಾಸು ಹೋಗುವಾಗ ರೈತರು ರೈಲು ತಡೆ ಮಾಡಿ ಪರಿಹಾರಕ್ಕೆ ಒತ್ತಾಯಿಸುತ್ತಾರೆ, "ರೈಲ್ವೆ ಕಾನೂನು ನಮಗೂ ಗೊತ್ತು ಇಲಾಖೆ ಪರಿಹಾರ ಕೊಡೊಲ್ಲ ಆದರೆ ರೈತರ ಜಮೀನು ಮಧ್ಯ ಕಿಲೋ ಮೀಟರ್ ಗಟ್ಟಲೆ ನೇರ ಮಾರ್ಗದಲ್ಲಿ ರೈಲು ಚಾಲನೆ ಮಾಡುವಾಗ ಈ ಅಪಘಾತ ತಪ್ಪಿಸಬಹುದಾಗಿತ್ತು ಆದ್ದರಿಂದ ರೈಲು ಚಾಲಕನೇ ಪರಿಹಾರ ನೀಡಬೇಕೆಂಬ" ವಾದ ರೈತರದ್ದು.
ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಆಗುತ್ತಿರುವ ವಿಳಂಬ, ರೈಲ್ವೆ ಅಧಿಕಾರಿಗಳಿಗೆ ಸಂಪರ್ಕ ಮಾಡಲು ನೆಟ್ ವರ್ಕ್ ಇಲ್ಲ ಮತ್ತು ರೈತನ ಕಷ್ಟ ಅರಿತ ರೈಲು ಚಾಲಕ 20 ಸಾವಿರ ಪರಿಹಾರ ನೀಡಲು ಒಪ್ಪಿಕೊಂಡ ತೀರ್ಮಾನ ಮಾತ್ರ #ದೇಶದ_ಭಾರತೀಯ_ರೈಲ್ವೆಯಲ್ಲಿ ಒಂದು ದಾಖಲೆ ಆಗಿದೆ.
ಆಗ ನಾನು ಶಿವಮೊಗ್ಗದ ಜಿಲ್ಲಾ ಪತ್ರಿಕೆ #ಜನಹೊರಾಟದಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಪ್ರಕಟ ಆಗಿತ್ತು, ಇತ್ತೀಚಿನ ಕಡತ ಯಜ್ಞದಲ್ಲಿ ನೆನಪಾಯಿತು ಈ ಘಟನೆ
Comments
Post a Comment