Blog number 2162. ಇವತ್ತು ವಿಶ್ವ ಪರಿಸರ ದಿನ ಈ ದಿನದ ನನ್ನ ಅತಿಥಿಗಳು ಉರಗ ತಜ್ಞ ಬೆಳ್ಳೂರು ನಾಗರಾಜ್ ಮತ್ತು ಮೈಸೂರಿನ ಪರಿಸರ ಪರಿವಾರದ ಸಂಜಯ ಹೊಯ್ಸಳ
#ಇವತ್ತು_ವಿಶ್ವ_ಪರಿಸರ_ದಿನ #ಪರಿಸರದ_ಜಾಗೃತೆಗಾಗಿ_ಶ್ರಮಿಸುತ್ತಿರುವ #ಉರಗ_ತಜ್ಞ_ಬೆಳ್ಳೂರು_ನಾಗರಾಜ್ #ಮೈಸೂರಿನ_ಪರಿಸರ_ಪರಿವಾರ_ಪೇಸ್_ಬುಕ್_ಗೆಳೆಯ #ಸಂಜಯ_ಹೊಯ್ಸಳ_ನನ್ನ_ಅತಿಥಿಗಳು ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರೂ ನನ್ನ ಗೆಳೆಯರು ಪರಸ್ಪರ ಒಬ್ಬರಿಗೊಬ್ಬರು ಪರಿಚಿತರು ಆದರೆ ಇದೇ ಮೊದಲ ನಮ್ಮಗಳ ಮುಖತಃ ಬೇಟಿ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ #ಬೆಳ್ಳೂರು_ನಾಗರಾಜ್ ಊರಗ ತಜ್ಞರು ವಿಶೇಷ ಎಂದರೆ ವನ್ಯ ಜೀವಿಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಅದನ್ನು ಪೇಸ್ ಬುಕ್ ನಲ್ಲಿ ಪ್ರಕಟಿಸುತ್ತಾರೆ ನಾನು ಇವರ ಪ್ಯಾನ್ ಆಗಿದ್ದೇನೆ. ಮನೆ ಒಳಗೆ ಬರುವ ಕಾಳಿಂಗ ಸರ್ಪವನ್ನ ಹಿಡಿದು ಕಾಡಿಗೆ ಬಿಡುವ ಇವರ ಕ್ರಮ ಬೇರೆಲ್ಲ ಉರಗ ತಜ್ಞರಿಗಿಂತ ವಿಭಿನ್ನ, ತಾವು ಹಿಡಿಯುವ ಹಾವಿಗೆ ಕೊಂಚವೂ ಪೆಟ್ಟಾಗದಂತೆ ಹೆಚ್ಚು ಜಾಗೃತಿಯನ್ನು ವಹಿಸುತ್ತಾರೆ. ಪರಿಸರದ ಬಗ್ಗೆ ಜನ ಜಾಗೃತಿ ಅಭಿಯಾನವೂ ನಡೆಸುವ ಇವರನ್ನ ಬೇಟಿ ಮಾಡಬೇಕೆಂದಿದ್ದೆ. ಇವತ್ತು ಬೆಳ್ಳೂರು ನಾಗರಾಜ್ ತಮ್ಮ ಮೈಸೂರಿನ ಗೆಳೆಯ #ಸಂಜಯ_ಹೊಯ್ಸಳರ ಜೊತೆ ಬಂದಿದ್ದರು. ಮೈಸೂರಿನ ಸಂಜಯ ಹೊಯ್ಸಳ ಅರಣ್ಯ ಇಲಾಖೆಯಲ್ಲಿ DRFO ಆಗಿದ್ದಾರೆ ಪೇಸ್ ಬುಕ್ ನಲ್ಲಿ ನನ್ನ ಗೆಳೆಯರೂ ಆಗಿದ್ದಾರೆ,ವಿಶೇಷ ಅಂದರೆ ಇವರು ಪರಿಸರ ಸಂರಕ್ಷಣೆಗಾಗಿ ಹೆಚ್ಚು ಜನಜಾಗೃತಿಯನ್ನ ತಮ್ಮ #ಪರಿಸರ_ಪರಿವಾರ ಎಂಬ ಪೇಸ್ ಬುಕ್ ಮುಖಾಂತರ ಮಾಡುತ್...