Blog number 2162. ಇವತ್ತು ವಿಶ್ವ ಪರಿಸರ ದಿನ ಈ ದಿನದ ನನ್ನ ಅತಿಥಿಗಳು ಉರಗ ತಜ್ಞ ಬೆಳ್ಳೂರು ನಾಗರಾಜ್ ಮತ್ತು ಮೈಸೂರಿನ ಪರಿಸರ ಪರಿವಾರದ ಸಂಜಯ ಹೊಯ್ಸಳ
#ಇವತ್ತು_ವಿಶ್ವ_ಪರಿಸರ_ದಿನ
#ಪರಿಸರದ_ಜಾಗೃತೆಗಾಗಿ_ಶ್ರಮಿಸುತ್ತಿರುವ
#ಉರಗ_ತಜ್ಞ_ಬೆಳ್ಳೂರು_ನಾಗರಾಜ್
#ಮೈಸೂರಿನ_ಪರಿಸರ_ಪರಿವಾರ_ಪೇಸ್_ಬುಕ್_ಗೆಳೆಯ
#ಸಂಜಯ_ಹೊಯ್ಸಳ_ನನ್ನ_ಅತಿಥಿಗಳು
ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರೂ ನನ್ನ ಗೆಳೆಯರು ಪರಸ್ಪರ ಒಬ್ಬರಿಗೊಬ್ಬರು ಪರಿಚಿತರು ಆದರೆ ಇದೇ ಮೊದಲ ನಮ್ಮಗಳ ಮುಖತಃ ಬೇಟಿ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ #ಬೆಳ್ಳೂರು_ನಾಗರಾಜ್ ಊರಗ ತಜ್ಞರು ವಿಶೇಷ ಎಂದರೆ ವನ್ಯ ಜೀವಿಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಅದನ್ನು ಪೇಸ್ ಬುಕ್ ನಲ್ಲಿ ಪ್ರಕಟಿಸುತ್ತಾರೆ ನಾನು ಇವರ ಪ್ಯಾನ್ ಆಗಿದ್ದೇನೆ.
ಮನೆ ಒಳಗೆ ಬರುವ ಕಾಳಿಂಗ ಸರ್ಪವನ್ನ ಹಿಡಿದು ಕಾಡಿಗೆ ಬಿಡುವ ಇವರ ಕ್ರಮ ಬೇರೆಲ್ಲ ಉರಗ ತಜ್ಞರಿಗಿಂತ ವಿಭಿನ್ನ, ತಾವು ಹಿಡಿಯುವ ಹಾವಿಗೆ ಕೊಂಚವೂ ಪೆಟ್ಟಾಗದಂತೆ ಹೆಚ್ಚು ಜಾಗೃತಿಯನ್ನು ವಹಿಸುತ್ತಾರೆ.
ಪರಿಸರದ ಬಗ್ಗೆ ಜನ ಜಾಗೃತಿ ಅಭಿಯಾನವೂ ನಡೆಸುವ ಇವರನ್ನ ಬೇಟಿ ಮಾಡಬೇಕೆಂದಿದ್ದೆ.
ಇವತ್ತು ಬೆಳ್ಳೂರು ನಾಗರಾಜ್ ತಮ್ಮ ಮೈಸೂರಿನ ಗೆಳೆಯ #ಸಂಜಯ_ಹೊಯ್ಸಳರ ಜೊತೆ ಬಂದಿದ್ದರು.
ಮೈಸೂರಿನ ಸಂಜಯ ಹೊಯ್ಸಳ ಅರಣ್ಯ ಇಲಾಖೆಯಲ್ಲಿ DRFO ಆಗಿದ್ದಾರೆ ಪೇಸ್ ಬುಕ್ ನಲ್ಲಿ ನನ್ನ ಗೆಳೆಯರೂ ಆಗಿದ್ದಾರೆ,ವಿಶೇಷ ಅಂದರೆ ಇವರು ಪರಿಸರ ಸಂರಕ್ಷಣೆಗಾಗಿ ಹೆಚ್ಚು ಜನಜಾಗೃತಿಯನ್ನ ತಮ್ಮ #ಪರಿಸರ_ಪರಿವಾರ ಎಂಬ ಪೇಸ್ ಬುಕ್ ಮುಖಾಂತರ ಮಾಡುತ್ತಿದ್ದಾರೆ.
ಸಾಗರ ತಾಲೂಕಿನ ತುಮರಿಗೆ ಹೋಗುವ ಅವರ ಪ್ರಯಾಣದ ಮಧ್ಯೆ ನನ್ನ ಬೇಟಿಗಾಗಿ ನನ್ನ ಕಛೇರಿಗೆ ಬಂದಿದ್ದು ನನಗೆ ತುಂಬಾ ಇಷ್ಟವಾಯಿತು.
#ಜೂನ್_5_ರಂದು_ವಿಶ್ವ_ಪರಿಸರ_ದಿನ_ಆಚರಿಸುವುದೇಕೆ?
1972ರಲ್ಲಿ ಜೂನ್ 5 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರ ಸಂಬಂಧದ ಕುರಿತು ವಿಶ್ವಸಂಸ್ಥೆಯು ಸಮ್ಮೇಳನವೊಂದನ್ನು ನಡೆಸಿತ್ತು. ಈ ದಿನವನ್ನು ಗೌರವಿಸಿ 1973ರಲ್ಲಿ ಪ್ರಪಂಚದಾದ್ಯಂತದ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತದೆ.
#ವಿಶ್ವ_ಪರಿಸರ_ದಿನ_2024ರ_ಥೀಮ್
ಪ್ರತಿ ವರ್ಷ ಹವಾಮಾನ ಬದಲಾವಣೆಯಿಂದ, ಜಾಗತಿಕ ತಾಪಮಾನ ಏರಿಕೆಯಿಂದ ಅರಣ್ಯನಾಶದವರೆಗೆ ತಕ್ಷಣದ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು ನಿರ್ದಿಷ್ಟ ಥೀಮ್‌ನೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ಪರಿಸರ ದಿನದ ಥೀಮ್ - ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ. ಯುಎನ್ ಕನ್ವೆಷನ್ ಪ್ರಕಾರ ಭೂಮಿಯು ಈಗಾಗಲೇ ಶೇ 40 ರಷ್ಟು ಕ್ಷೀಣಿಸಿದೆ. ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಬರಗಾಲದ ಅವಧಿಯು 2000ನೇ ಇಸವಿಯಿಂದ ಶೇ 29 ರಷ್ಟು ಹೆಚ್ಚಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಮಕ್ಕಾಲು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.
Comments
Post a Comment