#ಜೋಗ_ಜಲಪಾತ
#ವಿಶ್ವ_ವಿಖ್ಯಾತ_ವಿಶ್ವದ_ಸುಂದರ_ಜಲಪಾತ
#ಶಿವಮೊಗ್ಗ_ಜಿಲ್ಲೆಯ_ತೀರ್ಥಹಳ್ಳಿ_ತಾಲ್ಲೂಕಿನ
#ಅಂಬೂತೀರ್ಥದಲ್ಲಿ_ಉಗಮ_ಆಗುವ_ಶರಾವತಿ_ನದಿ
#ಶಿವಮೊಗ್ಗ_ಉತ್ತರಕನ್ನಡ_ಜಿಲ್ಲೆಗಳ_ಗಡಿ_ಬಳಿ_ಪಶ್ಚಿಮಕ್ಕೆ_ತಿರುಗಿ
#ಗೇರುಸೊಪ್ಪೆ_ಪ್ರಪಾತಕ್ಕೆ_ದುಮುಕುತ್ತದೆ
https://youtu.be/FFsMJFRkvc8?si=2EvyVQE971U2MMi2
ಇದರ ಎತ್ತರ 829 ಅಡಿ, ಕೆಳಗೆ ಜಲಪಾತದ ತಳದ ಮಡುವಿನ ಆಳ 132 ಅಡಿ
1856 ರಲ್ಲಿ ಬ್ರಿಟೀಶ್ ನೌಕಾದಳದ ಅಧಿಕಾರಿಗಳು ಸ್ಥಳಿಯ ಕೆಲಸಗಾರರ ಸಹಾಯದಿಂದ ಅಳತೆ ಮಾಡಿದ್ದಾರೆ.
ಈ ಬೋರ್ಗರೆಯುವ ಜಲಪಾತದ ಶಬ್ದ ಕೇಳಿ ಬ್ರಿಟೀಶ್ ಸೈನಿಕರು ಟಿಪ್ಪು ಸೈನ್ಯದ ಅರ್ಭಟ ಎಂದು ಮೋಸ ಹೋಗಿದ್ದರಂತೆ.
ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚು ಆಗ ನೀರಿನಿಂದ ಏಳುವ ಮಂಜು ಜಲಪಾತದ ಪ್ರಪಾತ ಆವರಿಸುತ್ತದೆ.
ಆಗ ನೀರಿನ ಬೋರ್ಗರೆತದ ಶಬ್ದ ಹೃದಯ ಕಂಪಿಸುತ್ತದೆ.
ಸೂರ್ಯಕಿರಣದಿಂದ ಜಲಪಾತ್ ದಿನದ ವಿವಿಧ ಕಾಲದಲ್ಲಿ ವೈವಿಧ್ಯ ತಾಳುತ್ತದೆ ಮತ್ತು ಕಾಮನ ಬಿಲ್ಲು ಮೂಡಿಸುತ್ತದೆ, ಬೆಳದಿಂಗಳ ರಾತ್ರಿಯಲ್ಲೂ ಜಲಪಾತ ವಿಭಿನ್ನವಾಗಿ ಕಾಣುತ್ತದೆ.
ರಾಜ-ರೋರರ್ - ರಾಕೆಟ್ - ರಾಣಿ ಎಂಬ ನಾಲ್ಕು ಕವಲುಗಳಾಗಿ ಬೀಳುತ್ತದೆ.
ಸೊಂದೆಯ ತಾಳಿ ರಾಜಾ ಈ ಕವಲಿರುವ ಕಡೆಯಲ್ಲಿ ಕಟ್ಟಿಸಲು ಉದ್ದೇಶಿಸಿದ್ದ ಮಂಟಪದ ತಳಪಾಯದ ಗುರುತುಗಳನ್ನ ಈಗಲೂ ನೋಡಬಹುದು.
ರಾಜ ಜಲಪಾತದ ಕೆಳಗೆ ಬಂಡೆ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತ ಅಪ್ಪಿಕೊಂಡು ಕಮರಿಗೆ ಬೀಳುತ್ತದೆ.
ಮೂರನೆ ಕವಲು ರಾಕೆಟ್ ಬಂಡೆಯ ಮೇಲಿಂದ ಹಲವು ದಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ.
ನಾಲ್ಕನೆ ರಾಣಿ ತಾನು ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ.
ವಿಶ್ವದ ಪ್ರಸಿದ್ಧ ಜಲಪಾತ ನಯಾಗರ ಜಲಪಾತದ ಹರಿವು ಅಗಾದ ಆದರೆ ಅದರ ಎತ್ತರ 164 ಅಡಿ ಮಾತ್ರ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬೂತೀರ್ಥದಲ್ಲಿ ಉಗಮವಾಗುವ ಶರಾವತಿ ನದಿ ಪತ್ತೀಪೇಟೆ ಬಳಿ ವಾಯುವ್ಯಕ್ಕೆ ತಿರುಗಿ ನಂತರ ಹರಿದ್ರಾವತಿ ಹೊಳೆ ಮತ್ತು ಎಣ್ಣೆ ಹೊಳೆ ಜೊತೆ ಕೂಡಿಕೊಂಡು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಬಳಿ ಪಶ್ಚಿಮಕ್ಕೆ ತಿರುಗಿ ಗೇರುಸೊಪ್ಪೆ ಪ್ರಪಾತಕ್ಕೆ ದುಮುಕುತ್ತದೆ.
Comments
Post a Comment