Blog number 2221. ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣ ಪಡೆದ ಚಾಲೆಂಜಿಂಗ್ ಸ್ಟಾರ್ ದಶ೯ನ್ ಅಲ್ಲಿನ ಜನಸಾಮಾನ್ಯರ ಜೊತೆಯ ಒಡನಾಟ ಹಣ ಖ್ಯಾತಿಯ ಉತ್ತುಂಗಕ್ಕೆ ಏರಿದರೂ ಮರೆಯಲಿಲ್ಲ.
#ಸಾಗರ_ತಾಲ್ಲೂಕಿನ_ನೀನಾಸಂ_ಹೆಗ್ಗೋಡಿನ_ವಿದ್ಯಾರ್ಥಿ_ದರ್ಶನ್_ತೂಗುದೀಪ್
#ಹದಿನಾರು_ತಿಂಗಳ_ಹೆಗ್ಗೋಡಿನ_ವಾಸ_ವ್ಯಾಸಂಗ_ಹೇಗಿತ್ತು?
#ಕನ್ನಡದ_ಚಲನಚಿತ್ರರಂಗದ_ಸೂಪರ್_ಸ್ಟಾರ್_ಆದಮೇಲೆ?
#ಇಲ್ಲಿನ_ದರ್ಶನ್_ಪರಮಾಪ್ತರು_ಯಾರ್ಯಾರು?
ಕನ್ನಡದ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ವಿರೋದಿಗಳು ಮಾತ್ರ ಗೂಳಿ ಗುಂಡಿಗೆ ಬಿದ್ದರೆ ಆಳಿಗೊಂದು ಕಲ್ಲು ಎಂಬ ಗಾದೆ ನೆನಪು ಆಗುವಂತೆ ಮಾಡಿದ್ದಾರೆ.
ಈಗ ಇವರ ಮೇಲಿನ ಅಪರಾದ ನ್ಯಾಯಾಲಯದ ತೀರ್ಪಿನ ಮೇಲೆ ಅ೦ತ್ಯದ ಪಲಿತಾಂಶಕ್ಕೆ ಕಾಯುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಏನೇನೋ ಚರ್ಚೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣರ ನಿನಾಸಂ ಸಂಸ್ಥೆಯಲ್ಲಿ 10 ತಿಂಗಳ ನಟನಾ ತರಬೇತಿ ಮತ್ತು 6 ತಿಂಗಳ ನೀನಾಸಂ ತಿರುಗಾಟ ಎಂಬ ಶಿಭಿರಾರ್ಥಿಗಳು ರಾಜ್ಯಾದ್ಯಂತ ನೀಡುವ ಪ್ರದರ್ಶನಗಳಲ್ಲಿ ದರ್ಶನ್ ಭಾಗವಹಿಸಿದ್ದರು.
ಸುಮಾರು 16 ತಿಂಗಳು ಮಲೆನಾಡಿನ ಹೆಗ್ಗೋಡಿನಲ್ಲಿ ತಮ್ಮ ರಂಗ ತರಬೇತಿಯಲ್ಲಿ ದರ್ಶನ್ ವಿಧೇಯ ವಿದ್ಯಾರ್ಥಿ ಆಗಿದ್ದರು.
ಅವರ ಹೆಚ್ಚು ಒಡನಾಟ ಮತ್ತು ಗೆಳೆತನ ಅತ್ಯಂತ ಸಾಮಾನ್ಯ ಜನರ ಜೊತೆ ಜೊತೆಗೆ ಇತ್ತು ಎನ್ನುವುದು ಸೋಜಿಗದ ಸಂಗತಿ ಆಗ ದರ್ಶನ್ ಕೂಡ ಸೆಲೆಬ್ರಿಟಿ ಆಗಿರಲಿಲ್ಲ.
ಸೆಲೆಬ್ರಿಟಿ ಸ್ಟಾರ್ ಆದಾಗ ಹೆಚ್ಚಿನವರು ಇಂತಹ ನೆನಪು ಗೆಳೆತನ ಮರೆತು ಬಿಡುತ್ತಾರೆ ಆದರೆ ದರ್ಶನ್ ಅದನ್ನೆಲ್ಲ ಮರೆತಿಲ್ಲ ಎಂಬುದಕ್ಕೆ ಅವರ ನಡತೆ ಸಾಕ್ಷಿ ಆಗಿದೆ.
ಮಲೆನಾಡಿನ ಜನರ ಸ್ವಭಾವ ಒಂದಿದೆ ತಮ್ಮ ಜೊತೆ ಒಡನಾಟದ ವ್ಯಕ್ತಿ ಅಧಿಕಾರ ಅಂತಸ್ತು ಹಣಗಳಿಸಿ ಪ್ರಖ್ಯಾತನಾದಾಗ ಆತನ ಹತ್ತಿರ ಸಹಾಯ ಇತ್ಯಾದಿ ಕೇಳಲು ಹೋಗುವುದಿಲ್ಲ ಕಾರಣ ಪ್ರಖ್ಯಾತಿ ಪಡೆದವನಿಗೆ ಹಿಂದಿನ ನೆನಪು ಇಲ್ಲದಿದ್ದರೆ ಅಥವ ಇಲ್ಲದಂತೆ ವರ್ತಿಸಿದರೆ ಎನ್ನುವ ಕಾರಣ.
ಆದರೆ ದರ್ಶನ್ ಮಾತ್ರ ಅದನ್ನು ಮರೆಯಲಿಲ್ಲ ಕೊರಾನಾ ನಂತರ ಹೆಗ್ಗೋಡಿಗೆ ಬಂದು ಅವರೆಲ್ಲರ ಮನೆಗೆ ಭೇಟಿ ನೀಡಿದ್ದಾರೆ ಕಷ್ಟದಲ್ಲಿದ್ದವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ.
ಹೆಗ್ಗೋಡಿನಲ್ಲಿ ದರ್ಶನ್ ಗೆ ಅತ್ಯಾಪ್ತ ಅವರ ಗೆಳೆಯ ಏಸು ಪ್ರಕಾಶ್ ಅವರ ಮನೆಯಲ್ಲಿ ಅನೇಕ ಬಾರಿ ಊಟ ತಿಂಡಿ ಮಾಡಿದ್ದಾರೆ ಮತ್ತು ಅವರ ಮೂರು ಸಿನಿಮಾದಲ್ಲಿ ಏಸು ಪ್ರಕಾಶರಿಗೆ ಅಭಿನಯದ ಅವಕಾಶ ನೀಡಿದ್ದರು.
ನೀನಾಸಂನಲ್ಲಿ ಯೋಗಾ ಶಿಕ್ಷಕರಾಗಿದ್ದ ಪಣಿಯಮ್ಮನಿಗೆ ಮೇಡಂ ಅಂತ ಕರೆಯುತ್ತಿದ್ದ ದರ್ಶನ್ ಪಣಿಯಮ್ಮನ ಮನೆಯ ನಾನ್ ವೆಜ್ ಅಡಿಗೆ ಊಟ ಮಾತ್ರ ತಪ್ಪಿಸುತ್ತಿರಲಿಲ್ಲ.
ಸ್ಟಾರ್ ಆಗಿ ಬಂದಾಗಲೂ ಪಣಿಯಮ್ಮರ ಅತಿಥ್ಯ ಮರೆಯಲಿಲ್ಲ.
ಈಗ ಸಾಗರದ ಜೋಗ್ ರಸ್ತೆಯಲ್ಲಿ ಖಾದಿ ಮನೆ ನಡೆಸುವ ಭಾಗೀರಥಿ ಅವರನ್ನ ನೀನಾಸಂನಲ್ಲಿ ಅಕ್ಕ ಎಂದು ಕರೆಯುತ್ತಿದ್ದ ದರ್ಶನ್ ಅವರ ಊಟದ ಕ್ಯಾರಿಯರ್ ಕಸಿದುಕೊಂಡು ಅವರು ತರುತ್ತಿದ್ದ ಉಪಹಾರದ ರುಚಿ ಸವಿಯುವ ಕಿಲಾಡಿತನ ಅವರು ಸ್ಟಾರ್ ಆದರೂ ಬಿಟ್ಟಿರಲಿಲ್ಲ.
ಹೆಗ್ಗೋಡಿಗೆ ಬಂದಾಗ ಹೀಗೆ ಅವರ ಊಟದ ಕ್ಯಾರಿಯರ್ ಕಸಿದುಕೊಂಡಿದ್ದಾರೆ ಸಂಜೆ ಮನೆ ಸೇರಿದ ಭಾಗೀರಥಿ ಚೀಲದಲ್ಲಿ ಐದು ಸಾವಿರ ರೂಪಾಯಿ ನೋಡಿ ಚಕಿತರಾಗಿದ್ದಾರೆ ಇದು ದರ್ಶನ್ ಪ್ರೀತಿಯಿಂದ ಅಕ್ಕ ಭಾಗಿರಥಿಗೆ ನೀಡಿದ ಉಡುಗೊರೆ.
ನೀನಾಸಂ ಸ್ವಚ್ಚತ ಕಾರ್ಮಿಕ ಬಂಗಾರಣ್ಣ ದರ್ಶನ್ ಗೆ ಪರಮಾಪ್ತ, ಬಂಗಾರಣ್ಣರ ಪತ್ನಿ ನೇತ್ರಾವತಿ ಮಹಿಳಾ ಡೊಳ್ಳು ಕಲಾವಿದೆ ದರ್ಶನ್ ಹೆಗ್ಗೋಡಿಗೆ ಬಂದಾಗ ಬಂಗಾರಣ್ಣರ ಮನೆಗೆ ಹೊಸ ಪ್ರಿಜ್ ಒಂದು ತಂದು ಉಡುಗೊರೆ ನೀಡಿದ್ದರು.
ಅವರು ನೀನಾಸಂ ವಿದ್ಯಾರ್ಥಿ ಆಗಿದ್ದಾಗ ನೀನಾಸಂ ಕ್ಯಾಂಟೀನ್ ನಡೆಸುತ್ತಿದ್ದವರು ಶ್ರೀಧರ್ ಮತ್ತು ರತ್ನಮ್ಮ ದಂಪತಿಗಳು ಅವರ ಬಗ್ಗೆ ದರ್ಶನ್ ಗೆ ಅಪಾರ ಪ್ರೀತಿ.
ಚಿತ್ರನಟ ರಮೇಶ್ ಅವರ #ವೀಕೆಂಡ್_ವಿತ್_ರಮೇಶ್ ಟೀವಿ ಕನ್ನಡ ವಾಹಿನಿಯಲ್ಲಿ ಅವರನ್ನ ಆಹ್ವಾನಿಸಿದ್ದರು.
ನೀನಾಸಂ ಕ್ಯಾಂಟೀನ್ ಶ್ರೀಧರ್ ಕ್ಯಾನ್ಸರ್ ಗೆ ತುತ್ತಾದಾಗ ಚಾಲೆಂಜಿಂಗ್ ಸ್ಟಾರ್ ಬಂದು ಅವರಿಗೆ ನೈತಿಕ ದೈಯ೯ ಮತ್ತು ಆರ್ಥಿಕ ಸಹಾಯ ನೀಡಿದ್ದರು.
ಇಂತಹ ಮಾನವೀಯ ಗುಣದ ದರ್ಶನ್ ಈಗ ಸಂಕಷ್ಟದಲ್ಲಿ ಇದ್ದಾರೆ ಸಿನಿಮಾ ಲೋಕದಲ್ಲಿ ಅನೇಕ ವಿರೋದದ ಜನರ ಮದ್ಯೆ ಎಲ್ಲರನ್ನೂ ಏಕಾಂಗಿ ಆಗಿ ವಿರೋಧಿಸಿ ತನ್ನ ಸ್ಥಾನ ಭದ್ರ ಪಡಿಸಿ ಕೊಂಡಿದ್ದ ದರ್ಶನ್ ಈಗ ಸಂಕಷ್ಟದಲ್ಲಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಉತ್ತುಂಗಕ್ಕೆ ಏರಿದಾಗ ಬಂದು ಸೇರುವ ಪರಾವಲಂಬಿ ಅವಕಾಶವಾದಿಗಳಿಂದ ಇಂತಹ ಅಪಾಯ ಸಹಜ.
Comments
Post a Comment