Blog number 2159. ತುಮರಿಯಲ್ಲಿ 1999 ಡಿಸೆಂಬರ್ 22ರಂದು ತುಮರಿಯ ಸಜ್ಜನ ರಾಮಣ್ಣ ನನ್ನ ಸಾಗರ ತಾಲ್ಲೂಕ್ ಅಭಿವೃದ್ಧಿ ಹೋರಾಟ ಸಮಿತಿ ಶಾಖೆ ಉದ್ಘಾಟನೆ ಮಾಡಿದ್ದರು.
#ಹೊಳೆ_ಆಚೆನವರು
#ಅಂತಾನೇ_ಸಾಗರ_ತಾಲ್ಲೂಕಿನ_ಶರಾವತಿ_ನದಿ_ಮುಳುಗಡೆ
#ಪ್ರದೇಶದ_ಆಚೆಯ_ಕರೂರು_ಬಾರಂಗಿ_ಹೋಬಳಿಯವರಿಗೆ_ಹೆಸರು
#ಸೂರ್ಯಾಸ್ತದ_ನಂತರ_ಲಾಂಚ್_ಸಾಗಾಟ_ಇರುವುದಿಲ್ಲ
#ಆದ್ದರಿಂದ_ಆ_ಭಾಗದ_ಜನ_ಒಂದು_ದಿನ_ತಾಲ್ಲೂಕು_ಕೇಂದ್ರದಲ್ಲಿ_ಉಳಿಯಲೇ_ಬೇಕು
#ಜನರ_ದೂರು_ದುಮ್ಮಾನಗಳು_ತಾಲ್ಲೂಕಿನ_ಪ್ರಭುಗಳಿಗೆ_ತಲುಪುತ್ತಿರಲಿಲ್ಲ.
#ತುಮರಿಯಲ್ಲಿ_1999ರಲ್ಲಿ_ಸಾಗರ_ತಾಲ್ಲೂಕ್_ಅಭಿವೃದ್ಧಿ_ಹೋರಾಟ_ಸಮಿತಿ
#ಶಾಖೆ_ಸ್ಥಳೀಯ_ಸಜ್ಜನ_ರಾಮಣ್ಣರಿಂದ_ಉದ್ಘಾಟಿಸಲಾಗಿತ್ತು.
ಕರೂರು -ಬಾರಂಗಿ ಹೋಬಳಿಗಳು ಶರಾವತಿ ನದಿ ಆಣೆಕಟ್ಟಿನಿಂದ ರಸ್ತೆ ಸಂಪರ್ಕ ಕಳೆದುಕೊಂಡು ಲಾಂಚ್ ಸಾಗಾಟ ಅವಲಂಬಿಸಿದೆ ಸಧ್ಯದಲ್ಲೇ ಸೇತುವೆ ಕಾಮಗಾರಿ ಮುಗಿದು ವಾಹನ ಸಂಚಾರ ಪ್ರಾರಂಬದ ಕ್ಷಣಗಣನೆ ಪ್ರಾರಂಭವಾಗಿದೆ.
2004 ರ ನಂತರ ಈ ಭಾಗದಲ್ಲಿ ಹೊಸ ತಲೆಮಾರಿನ ಜನಪ್ರತಿನಿದಿಗಳ ಆಡಳಿತ ಮತ್ತು ವಿದ್ಯಾವಂತ ಯುವಕರ ಹೋರಾಟಗಳು ಆರಂಭವಾಗಿ ಅನೇಕ ಬದಲಾವಣೆಗಳು ಆಗುತ್ತಲಿದೆ.
ಇದಕ್ಕೂ ಹಿಂದೆ ಈ ಭಾಗದ ಜನರಿಗೆ ಸರ್ಕಾರದ ಕೆಲಸಗಳು ಸರಾಗವಾಗಿ ಮಾಡಿಸಿಕೊಳ್ಳಲು ಕಷ್ಟವಾಗಿತ್ತು ಮಧ್ಯವರ್ತಿಗಳು ಅನಿವಾಯ೯ವಾಗಿತ್ತು, ತಾಲ್ಲೂಕು ಕೇಂದ್ರದ ಆಡಳಿತ ಪಕ್ಷಗಳ ಮರ್ಜಿ ಅನಿವಾರ್ಯವಾಗಿತ್ತು.
ಸೋತ ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೊಡಬಾರದ ಅಗೋಚರ ಶಿಕ್ಷೆಗಳು ಇರುತ್ತಿತ್ತು.
ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಒಳಗೆ ಮಾತ್ರ ಲಾಂಚ್ ಸಂಚಾರ ಇರುತ್ತಿತ್ತು ಬೆಳಿಗ್ಗೆ ಸರ್ಕಾರಿ ಕಛೇರಿ ಪ್ರಾರಂಭ ಆಗುವ ಬೆಳಿಗಿನ 11 ಗಂಟೆಗೆ ತಲುಪಿ ಮಧ್ಯಾಹ್ನ ಊಟದ ಸಮಯದಲ್ಲಿ ಬಸ್ಸು ಹತ್ತಿ ಹೊಳೆಬಾಗಿಲಿನ ಕೊನೆಯ ಲಾಂಚ್ ಹಿಡಿದರೆ ಮಾತ್ರ ರಾತ್ರಿ ಮನೆ ತಲುಪಬಹುದಾಗಿತ್ತು ಆದರೆ ಸರಕಾರಿ ಕಛೇರಿ ಕೆಲಸ ಅಷ್ಟು ವೇಗವಾಗಿ ಚಲಿಸುವುದಿಲ್ಲ ಆದ್ದರಿಂದ ಮರುದಿನಕ್ಕೆ ಮುಂದೆ ಹಾಕುವುದರಿಂದ ಹೊಳೆಯಾಚೆಗಿನವರು ಸಾಗರ ಪೇಟೆಯಲ್ಲಿ ಲಾಡ್ಜ್ ಗಳಲ್ಲಿ, ಸಂಬಂದಿಗಳ ಮನೆಯಲ್ಲಿ ವಾಸ್ತವ್ಯ ಮಾಡ ಬೇಕಾಗಿತ್ತು.
ಇದರಿಂದ ಸರಕಾರದ ಸವಲತ್ತುಗಳು ಕಾಮಗಾರಿಗಳು ಆ ಭಾಗದಲ್ಲಿ ಹೇರಾ ಪೇರಿ ಆಗುತ್ತಿತ್ತು ಅದನ್ನು ಯಾರೂ ವಿರೋದಿಸುವಂತೆ ಇರಲಿಲ್ಲ ಅಂತಹ ಸಂದರ್ಭದಲ್ಲಿ ಅನೇಕ ಬಾರಿ ಅಲ್ಲಿನವರು ನನ್ನ ಸಹಾಯ ಸಹಕಾರ ಕೇಳಿ ಬರುತ್ತಿದ್ದರು ಆದ್ದರಿಂದ ಅಲ್ಲಿನ ಅನೇಕರ ಸಲಹೆ ಮೇರೆಗೆ ಮತ್ತು ನನ್ನ ರಾಜಕಾರಣದ ಮಹತ್ವಾಕಾಂಕ್ಷೆಯಿಂದ ತುಮರಿಯಲ್ಲಿ #ಸಾಗರ_ತಾಲ್ಲೂಕ್_ಅಭಿವೃದ್ಧಿ_ಹೋರಾಟ_ಸಮಿತಿ ಶಾಖೆ ದಿನಾಂಕ 22- ಡಿಸೆಂಬರ್-1999 ರಂದು ತುಮರಿಯ ಸಜ್ಜನ ರಾಮಣ್ಣರಿಂದ ಉದ್ಘಾಟನೆ ಮಾಡಲಾಗಿತ್ತು ಅವತ್ತಿನ ಪೋಟೋ ಸಿಕ್ಕಿದ್ದರಿಂದ ಇದೆಲ್ಲ ನೆನಪಾಯಿತು.
ಈ ರೀತಿ ಜನ ಜಾಗೃತಿ ಕಾರ್ಯಕ್ರಮಗಳು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧವಾಗಿದ್ದರಿಂದ ಅವರ ಗೂಂಡಾಗಳು ಒಂದು ದಿನ ಸಾಗರದ ನನ್ನ ಕಛೇರಿ ಲೂಟಿ ಮಾಡಿ ಬೋರ್ಡನ್ನು ಎದುರಿನ ಬಾವಿಗೆ ಹಾಕಿದ್ದರು, ಅಲ್ಲಿ ಓದಲು ಇದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು ಆ ಸಂದರ್ಭದಲ್ಲಿ ಪೋಲಿಸರು ಆಡಳಿತಾರೂಡರ ಮಾತು ಮೀರುವ ಸಾಧ್ಯತೆ ಕೂಡ ಇರಲಿಲ್ಲ.
ಇದೇ ಸಂದರ್ಭದಲ್ಲಿ ಮನೆ ಮಾಲೀಕರಿಗೂ ಒತ್ತಡ ಹಾಕಿ ನನ್ನ ಸಾಗರ ತಾಲ್ಲೂಕಿನ ಅಭಿವೃಧ್ಧಿಯ ಆಶಯದ ಹೋರಾಟ ಸಮಿತಿಯ ಆಫೀಸು ಬೀಗ ಜಡಿಯಲಾಯಿತು
ಆದರೆ ನಾವು ಪ್ರಾರಂಬಿಸಿದ #ತುಮರಿ_ಸೇತುವೆ, #ಬ್ರಾಡ್_ಗೇಜ್_ರೈಲು,#ಜೋಗ್_ಪ್ರವಾಸೋದ್ಯಮದ_ಅಭಿವೃದ್ಧಿ,#ಹಂದಿಗೋಡು_ನಿಗೂಡ_ಕಾಯಿಲೆ ಇತ್ಯಾದಿ ಪರಿಹಾರಕ್ಕೆ ಒತ್ತಾಯಿಸಿ ನಡೆಸಿದ ಹೋರಾಟಗಳಾದ ದೆಹಲಿ ಚಲೊ ಯಾತ್ರೆ, ಸಾಗರ ತಾಲೂಕಿನಾದ್ಯಂತ ನಡೆಸಿದ ಪಾದಯಾತ್ರೆಗಳ ಜನ ಜಾಗೃತಿ ಹೊಸ ತಲೆಮಾರಿನ ಕಾಲದಲ್ಲಿ ಅನೂಷ್ಟಾನ ಅಗುತ್ತಿರುವುದು ಸಂತೋಷದ ಸಂಗತಿ.
Comments
Post a Comment