Blog number 2186. ಸನ್ಮಾರ್ಗ ಸುದ್ದಿ ಸಂಸ್ಥೆ ಎ.ಕೆ.ಕುಕ್ಕಿಲ ಅವರು ಸೌಹಾರ್ದ ಸಮಾಜ ನಿರ್ಮಾಣದ ಕೆಲಸದಲ್ಲಿ ದೊಡ್ಡ ಹೆಸರು ಇಂತಹ ಜ್ಞಾನಿಗಳು ದೇಶದ ತುಂಬಾ ಎಲ್ಲಾ ಧರ್ಮದಲ್ಲೂ ಉದಯಿಸಲಿ.
#ನಿನ್ನೆ_ನಾನು_ನಿತ್ಯ_ನೋಡುವ_ಸನ್ಮಾರ್ಗ_ಸುದ್ದಿ_ಸಂಸ್ಥೆ_ಮುಖ್ಯಸ್ಥ_ಎ_ಕೆ_ಕುಕ್ಕಿಲರ
#ಪೋಸ್ಟ್_ಗಮನ_ಸೆಳೆಯಿತು
#ಅದು_ಎಲ್ಲಾ_ತೀರ್ಥ_ಯಾತ್ರೆಗಳಿಗೂ_ಸಂಬಂದಿಸುತ್ತದೆ.
ಸನ್ಮಾರ್ಗ ಸುದ್ದಿ ಸಂಸ್ಥೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಜೊತೆಗೆ ತನ್ನ ಓದುಗರನ್ನ ಜ್ಞಾನವಂತರಾಗಿಸುವ ಸಮಾಜದ ತಪ್ಪು ಕಲ್ಪನೆಗಳನ್ನ ತಿಳಿಯಾಗಿಸುವ ಕೆಲಸ ಮಾಡುತ್ತಿದೆ.
ಇದರ ಸಂಪಾದಕರ ಪೋಸ್ಟಿನ ಕೊನೆಯ ಪ್ಯಾರ ಓದಿ....
ನಾಲ್ಕು ದಶಕಗಳ ಹಿಂದಿನ ಹಜ್ ಯಾತ್ರೆಗೂ ಈಗಿನ ಹಜ್ ಯಾತ್ರೆಗೂ ನಡುವೆ ಆಗಿರುವ ವ್ಯತ್ಯಾಸ ಅಗಾಧವಾದದ್ದು. ಇವತ್ತು ಹಜ್ ನಿರ್ವಹಿಸಿದವರಾರೂ ತಮ್ಮ ಹೆಸರಿನ ಮುಂದೆ ಹಾಜಿ ಎಂದು ಬರಕೊಳ್ಳುವುದು ಕಡಿಮೆ. ಆದರೆ ಮೂರ್ನಾಲ್ಕು ದಶಕಗಳ ಹಿಂದೆ ಹಾಜಿ ಎಂಬ ಗುರುತು ಸಾಮಾನ್ಯವಾಗಿತ್ತು. ಮಾತ್ರವಲ್ಲ ಹಾಜಿಗಳನ್ನು ಅಪಾರ ಗೌರವ ಭಾವದಿಂದಲೂ ನೋಡಲಾಗುತ್ತಿತ್ತು.
ಏ ಕೆ .ಕುಕ್ಕಿಲ.
#ಇದಕ್ಕೆ_ನನ್ನ_ಪ್ರತಿಕ್ರಿಯೆ
ಆ ಕಾಲಗಳಲ್ಲಿ ತೀರ್ಥಯಾತ್ರೆಗಳು ಪುಣ್ಯ ಮಾಡಿದವರಿಗೆ ಮಾತ್ರ ಮೀಸಲೆಂಬ ನಂಬಿಕೆಗಳು ಇತ್ತು ಕಾರಣ ಅಂತ ಯಾತ್ರೆಗಳು ಕಠಿಣ, ಹೆಚ್ಚು ದಿನಗಳ ಪ್ರಯಾಣ, ತಂಗುದಾಣ ಆಹಾರ ಮೊದಲೆ ನಿರ್ದರಿಸಲಾಗುತ್ತಿರಲಿಲ್ಲ, ವೈದ್ಯಕೀಯ ಚಿಕಿತ್ಸೆ ಅಪರೂಪ ಮತ್ತು ಇಡೀ ಯಾತ್ರೆ ಖರ್ಚಿಗೆ ಬೇಕಾದ ಸಂಪತ್ತು ಮಾಗ೯ ಮಧ್ಯದಲ್ಲಿ ಅದನ್ನು ಕಳ್ಳರಿಂದ ಕಾಪಾಡಿಕೊಳ್ಳುವ ಕಷ್ಟ ಇತ್ತು, ಈಗ ಬದಲಾದ ಕಾಲದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ನಮಗೆ ಬೇಕಾದ ಎಲ್ಲಾ ಸುಖದ ಸವಲತ್ತು ಮೊದಲೇ ಕಾದಿರಿಸಿ ತೀರ್ಥಯಾತ್ರೆ ಸುಲಭವಾಗಿ ಮಾಡಿ ಬರಲು ಸಾಧ್ಯವಿದೆ.
ಆದ್ದರಿಂದ ನೋಡುವವರಿಗೆ ಇದು ವಿಶೇಷ ಅನ್ನಿಸದಿದ್ದರೂ ಅನುಭವಿಸುವ ಯಾತ್ರಿಗೆ ಅನುಭೂತಿ ಮಾತ್ರ ಆ ಕಾಲಕ್ಕೂ ಈ ಕಾಲಕ್ಕೂ ಬದಲಾಗಿಲ್ಲ.
ಹಜ್ ಯಾತ್ರೆ ಅಂದರೆ ನಾನು ಅದರಲ್ಲಿ ಭಾಗಿ ಆಗದಿದ್ದರೂ ನನ್ನ ಹಿರಿಯ ಗೆಳೆಯರಾದ ಗನ್ನಿ ಸಾಹೇಬರಿಗೆ ನಮ್ಮ ಊರಿನ ವರಸಿದ್ದಿ ವಿನಾಯಕ ದೇವರ ವಿಗ್ರಹ ದೇವಾಲಯಕ್ಕೆ ಕೋಲಾರದ ಶಿವಾರ ಪಟ್ಟಣದಿಂದ ತಂದು ಗುಡಿ ಒಳಗೆ ಹೋಗುವಾಗ ನಾನು ಗನ್ನಿ ಸಾಹೇಬರು ದೇವಸ್ಥಾನದ ಬಾಗಿಲಲ್ಲೇ ನಿಂತಿದ್ದೆವು ಸಂಪೂರ್ಣ ಉಸ್ತುವಾರಿ ನಾನಾದರೂ ನನ್ನ ಬಲಗೈ ಗೆಳೆತನ ಗನ್ನಿ ಸಾಹೇಬರದ್ದು ಆಗ ನನ್ನ ಬಾಯಲ್ಲಿ ಬಂದ ಒಂದು ಮಾತು "ಗನ್ನಿ ಸಾಹೇಬರೆ ವಿನಾಯಕನು ಶಕ್ತಿ ನೀಡಿದರೆ ಈ ವರ್ಷ ನಿಮಗೆ ಮೆಕ್ಕಾ ಕಳಿಸುತ್ತೇನೆ" ಇದಕ್ಕೆ ಗನ್ನಿ ಸಾಹೇಬರು ಖಂಡಿತಾ ಆಗುತ್ತದೆ ಎಂದರು.
ನಂತರ ಗನ್ನಿ ಸಾಹೇಬರು ಮೆಕ್ಕಾ ಯಾತ್ರೆಗೆ ಹೋಗಿ ಬಂದರು ಅಡೆ ತಡೆ ಮಾಡಿದ ಕುಹಕಿಗಳು ನೂರಾರು ಇದೆಲ್ಲ ನೆನಪಾಯಿತು.
Comments
Post a Comment