Blog number 2198. ಕುಂಚಿಕಲ್ ಜಲಪಾತ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಅದು ಇರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ವರಾಹಿ ನದಿಯ ಜಲಪಾತ.
#ಕುಂಚಿಕಲ್_ಪಾಲ್ಸ್
#ಭಾರತ_ದೇಶದ_ಅತ್ಯಂತ_ಎತ್ತರದ_ಜಲಪಾತ
#ಇದು_ಇರುವುದು_ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ
#ಮಾಸ್ತಿಕಟ್ಟೆ_ಸಮೀಪದ_ವರಾಹಿ_ನದಿ_ಜಲಪಾತ
#ವಿಶ್ವದ_ಸುಂದರ_ಜಲಪಾತ_ಜೋಗ್_ಜಲಪಾತ_ಕೂಡ_ಶಿವಮೊಗ್ಗ_ಜಿಲ್ಲೆಯಲ್ಲಿದೆ.
ಅನೇಕ ಸಾಹಸಿಗಳು ಕುಂಚಿಕಲ್ ಪಾಲ್ಸ್ ಪ್ರದೇಶಕ್ಕೆ ಹೋಗಿ ಚಿತ್ರಗಳನ್ನು ತೆಗೆದು ಗೂಗಲ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಆದರೆ ಅವರು ಆ ಸ್ಥಳಕ್ಕೆ ಹೋದಾಗ ಅವರಿಗೆ ಇದು ಭಾರತ ದೇಶದ ಜಲಪಾತಗಳಲ್ಲಿ ಎತ್ತರದಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಅರಿವಿರಲಿಲ್ಲ.
ಇಲ್ಲಿಗೆ ಬೇಟಿ ನೀಡಿದ ಚಾರಣಿಗರಿಗೆ ಈ ಜಲಪಾತ ಹೊರ ಜಗತ್ತಿಗೆ ಗೊತ್ತಾದರೆ ಈ ಪರಿಸರ ಹಾಳಾದೀತೆಂಬ ಕಾಳಜಿ ಹೊಂದಿದ್ದವರು.
ಈ ಜಲಪಾತ ವೀಕ್ಷಣೆಗೆ ಹೋಗಲು ವರಾಹಿ ವಿದ್ಯುತ್ ಉತ್ಪಾದನ ಸ್ಥಾವರದ ಅನುಮತಿ ಮತ್ತು ಅರಣ್ಯ ಇಲಾಖೆ ಅನುಮತಿ ಕೂಡ ಕಡ್ಡಾಯವಾಗಿ ಪಡೆಯಲೇ ಬೇಕು.
ಮುಂಗಾರು ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಇಲ್ಲಿ ವಿಪರೀತ ಜಿಗಣೆ ಮತ್ತು ಮಂಜು ಮುಸುಕಿದ ವಾತಾವರಣ ಇರುತ್ತದೆ ಮತ್ತು ಜಾರಿಕೆ ಇರುವುದರಿಂದ ಸಾಹಸಿ ಚಾರಣಿ ಗರಿಗೆ ದೊಡ್ಡ ಸವಾಲು ಮತ್ತು ಅಪಾಯ ಇದೆ.
ಆದ್ದರಿಂದ #ಕುಂಚಿಕಲ್_ಪಾಲ್ಸ್ ನಿಗೂಡ ಜಲಪಾತವಾಗಿದೆ.
2023ರಿಂದ ಜಲಪಾತಗಳ ಪಟ್ಟಿ ಪರಿಷ್ಕರಣೆ ಆಗಿ ಕುಂಚಿಕಲ್ ಪಾಲ್ಸ್ ದೇಶದ ಅತ್ಯಂತ ಎತ್ತರದ ಜಲಪಾತ ಎಂದಾಗಿದೆ ಈಗ ಸಂಬಂದ ಪಟ್ಟ ಇಲಾಖೆಯ ಅನುಮತಿ ಪಡೆದು ಈ ಜಲಪಾತ ಸಂದರ್ಶಿಸುವ ಯಾವುದೇ ತಂಡ ಮೊದಲಿಗರಾಗಲಿದ್ದಾರೆ.
2018ರಲ್ಲಿ ಬಿದನೂರು ನಗರದ ಗ್ರಾಮ ಪಂಚಾಯಿತಿ ಸದಸ್ಯರು, ಸಮಾಜ ಸೇವಕರು ಮತ್ತು ಸ್ಥಳೀಯ ಉರಗ ಸಂರಕ್ಷಕರಾದ ನಗರ ನಾರಾಯಣ ಕಾಮತ್ ಮತ್ತು ಅವರ ಮಿತ್ರವೃಂದ ಮಳೆಗಾಲದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದು ಈ ಸ್ಥಳ ಸಂದರ್ಶಿಸಿ ತೆಗೆದ ವಿಡಿಯೋ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ ಕುಂಚಿಕಲ್ ಪಾಲ್ಸ್ ನ ಮೊದಲ ವಿಡಿಯೋ ಆಗಿದೆ.
ನಂತರ ಅನೇಕ ಪರಿಸರ ಪ್ರೇಮಿ ಸಾಹಸಿ ಚಾರಣಿಗರು ಈ ಜಲಪಾತದ ಸ್ಥಳಕ್ಕೆ ಹೋಗಿ ತೆಗೆದ ವಿಡಿಯೊ ಗೂಗಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಅದನ್ನು ಇವತ್ತಿನಿಂದ ದಿನಕ್ಕೊಂದು ಪೋಸ್ಟ್ ಮಾಡುತ್ತೇನೆ.
ಇವತ್ತಿನ ಪೋಟೋ ಕಿರಣ್ ನಾಯಕ್ ಅವರದ್ದು ಅವರ ಪರಿಚಯ ನನಗಿಲ್ಲ ಅವರಿಗೆ ದೇಶದ ಅತ್ಯಂತ ಎತ್ತರದ ನಂಬರ್ 1 ಜಲಪಾತದ ಚಿತ್ರ ಬಿಡುಗಡೆ ಮಾಡಿದ್ದಕ್ಕೆ ಶಿವಮೊಗ್ಗ ಜಿಲ್ಲೆಯ ಮತ್ತು ರಾಜ್ಯದ ಪರವಾಗಿ ಅಭಿನಂದಿಸುತ್ತೇನೆ
Comments
Post a Comment