#ಸರ್ಕಾರದ_ಪ್ರಾಯೋಜತ್ವದ_ಇತಿಹಾಸ_ಸಂಶೋದನೆಗೂ
#ಹವ್ಯಾಸಿ_ಇತಿಹಾಸ_ಸಂಶೋಧಕರ_ಸಂಶೋದನೆಗೂ_ಎಷ್ಟು_ಅಜಗಜಾಂತರ
#ಡಿಜಿಟಲ್_ಮಾಧ್ಯಮದಲ್ಲಿ_ಇಕ್ಕೇರಿ_ಇತಿಹಾಸ_ವಿವರಿಸುತ್ತಿರುವ_ಹೆಚ್_ಕೆ_ಗಣಪತಿ
#ನಿಜಕ್ಕೂ_ಗ್ರೇಟ್_ಅವರು_ಉಪನ್ಯಾಸಕರಾಗಿ_ನಿವೃತ್ತರಾಗಿದ್ದಾರೆ
#ತಮ್ಮ_70ನೇ_ವಯಸ್ಸಿನಲ್ಲಿ_ತಮ್ಮ_ಊರಿನ_ಕೋಟೆ_ದೇವಾಲಯ_ತೋರಿಸುತ್ತಾ
#ಅದರ_ಇತಿಹಾಸ_ಜನಪದ_ಕಥೆಗಳನ್ನು_ಸ್ವಾರಸ್ಯವಾಗಿ_ವಿವರಿಸುತ್ತಿದ್ದಾರೆ
#ನಮ್ಮ_ಜಿಲ್ಲೆಯ_ಕೆಳದಿ_ರಾಜವಂಶಸ್ಥರ_ಇತಿಹಾಸ_ದೃಶ್ಯ_ಮಾಧ್ಯಮದಲ್ಲಿ_ಮುಂದಿನ_ತಲೆಮಾರಿಗೆ
https://youtu.be/DStYp8fXbt4?feature=shared
#ಸಾಗರ_ತಾಲ್ಲೂಕಿನವರು_ತಪ್ಪದೇ_ವೀಕ್ಷಿಸಿ
#ಇಕ್ಕೇರಿ_ಕೋಟೆ_ಇತಿಹಾಸ
ಸರ್ಕಾರದ ಇತಿಹಾಸ ಸಂಶೋಧನಾ ಸಂಸ್ಥೆಗಳ ಕೆಲಸಕ್ಕೂ ಹವ್ಯಾಸಿ ಇತಿಹಾಸ ಸಂಶೋಧಕರ ಕೆಲಸಕ್ಕೂ ಎಷ್ಟು ವ್ಯತ್ಯಾಸ ನೋಡಿ.....
ಇಕ್ಕೇರಿ ಕೆಳದಿರಾಜರ ಎರಡನೇ ರಾಜಧಾನಿ ಅಲ್ಲಿ ಕೆಳದಿರಾಜರ ಬೃಹತ್ ಕೋಟೆ ಮತ್ತು ಅರಮನೆ ನಿರ್ಮಿಸಲಾಗಿತ್ತು.
ಅಲ್ಲಿ ಇತಿಹಾಸ ಪ್ರಸಿದ್ಧ ಅಘೋರೇಶ್ವರ ದೇವಸ್ಥಾನ ನಿರ್ಮಿಸಲಾಗಿದೆ.
ಇಕ್ಕೇರಿಯ ಕೋಟೆ ಮತ್ತು ಅಘೋರೇಶ್ವರ ದೇವಸ್ಥಾನದ ಶಂಕುಸ್ಥಾಪನೆಯನ್ನು ಸ್ವತಃ ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯರು ನೆರವೇರಿಸಿದ್ದರು ಎಂಬುದು ವಿಶೇಷ.
ರಾಜ್ಯದ ಖ್ಯಾತ #ಡಿಜಿಟಲ್_ಮಾಧ್ಯಮ ಕರ್ನಾಟಕದ ಇತಿಹಾಸವನ್ನು ದೃಶ್ಯ ಮಾಧ್ಯಮದ ಮೂಲಕ ಮುಂದಿನ ತಲೆಮಾರಿಗೆ ತಲುಪಿಸುವ ವಿಶೇಷ ಕೆಲಸವನ್ನು ಮಾಡುತ್ತಿದೆ.
ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ ಮತ್ತು ಇಕ್ಕೇರಿಯ ಕೋಟೆಯನ್ನು ಈ ಚಾನಲ್ ನಲ್ಲಿ ವೀಕ್ಷಕರಿಗೆ ಅರ್ಥವತ್ತಾಗಿ ವಿವರಿಸುತ್ತಿರುವವರು ಸ್ಥಳೀಯ ಇತಿಹಾಸ ಸಂಶೋಧಕರು, ನಿವೃತ್ತ ಉಪನ್ಯಾಸಕರು ಆದ ಎಪ್ಪತ್ತು ವರ್ಷ ವಯೋಮಾನದ ಕಾಳೇ ಮನೆತನದ ಹೆಚ್.ಕೆ.ಗಣಪತಿ.
ಸುಮ್ಮನೆ ಕೋಟೆಯನ್ನು ನೋಡಿದರೆ ಯಾವ ಪ್ರಯೋಜನವೂ ಇಲ್ಲ ಅದು ಶಿಥಿಲವಾದ ಪಾಳು ಕೋಟೆ ಅಷ್ಟೆ ಅದರ ಇತಿಹಾಸ ಗೊತ್ತಾಗುವುದಿಲ್ಲ.
ಡಿಜಿಟಲ್ ಮಾಧ್ಯಮದ ಕ್ಯಾಮರಾ ಕಣ್ಣಿನಲ್ಲಿ - ಎಚ್. ಕೆ.ಗಣಪತಿಯವರ ಧ್ವನಿಯಲ್ಲಿ ಕೆಳದಿ ಇತಿಹಾಸದ ಎರಡನೇ ರಾಜಧಾನಿ ಇಕ್ಕೇರಿ ಇತಿಹಾಸ ಸುಂದರವಾಗಿ ನಿರೂಪಸಲ್ಪಡುತ್ತಿದೆ.
Comments
Post a Comment