Blog number 2171. ನಮ್ಮ ಮನೆಯ ಗೋಬರ್ ಗ್ಯಾಸ್ ಸ್ಥಾವರದ ಬಾವಿ ಇಂಗು ಗುಂಡಿಯಾಗಿ ಪರಿವರ್ತಿಸಿ ಹತ್ತು ವರ್ಷ ಆಯಿತು ಈ ವರ್ಷದ ಮೊದಲ ಮುಂಗಾರು ಮಳೆ ಕೊಯ್ಲು ಪ್ರಾರಂಭ
#ಈ_ನಮ್ಮ_ಇಂಗು_ಗುಂಡಿ_10_ಅಡಿ_ಆಳ_ಇದೆ
#ಇದರ_ವ್ಯಾಸ_10_ಅಡಿ
#ಇದು_ನಮ್ಮ_ಹಳೆಯ_ಗೋಬರ್_ಗ್ಯಾಸ್_ಬಾವಿ
#ಹತ್ತು_ವರ್ಷದ_ಹಿಂದೆ_ನಮ್ಮಲ್ಲಿ_ಉಳಿದ
#ಕಟ್ಟಡ_ನಿರ್ಮಾಣದ_ಬೋಲ್ಡರ್ಸ್_ಸೋಲಿಂಗ್
#ಜಲ್ಲಿಗಳು_40mm_20mm_ಮರಳು_ಸಾಣಿಸಿದಾಗ
#ತೆಗೆದು_ಹಾಕಿದ_ಮರಳಿನ_ಊರುಳು_ಕಲ್ಲುಗಳು
#ಜಲ್ಲಿ_6mm_ಹಂತ_ಹಂತವಾಗಿ_ಹಾಕಿ_ಅದರ_ಮೇಲೆ
#ಮರಳು_ಇದಕ್ಕೆ_ಇಡೀ_ಅವರಣದ_ಮಳೆ_ನೀರು_ಹರಿದು
#ಬಂದು_ಸಂಗ್ರಹವಾಗಿ_ಇಂಗುತ್ತದೆ.
https://youtube.com/shorts/kCDlPHNl318?feature=shared
ನನ್ನ ಮನೆ ಮತ್ತು ಸಂಸ್ಥೆಯ ಅವರಣದ ಮಳೆ ನೀರು ನಾನು ಸಂಪೂರ್ಣ ಮರುಪೂರಣ ಮಾಡುತ್ತೇನೆ, ನಮ್ಮಲ್ಲಿ ಒಂದು ಬೋರ್ ವೆಲ್ ಒಂದೂವರೆ ಇಂಚು ನೀರು ನೀಡುತ್ತದೆ ಮತ್ತು ಎರೆಡು ತೆರೆದ ಬಾವಿಗಳು ಇದೆ ಇದರ ಪಕ್ಕದಲ್ಲೇ ಗೋಬರ್ ಗ್ಯಾಸ್ ಗುಂಡಿ ಕಾರ್ಯನಿರ್ವಹಿಸದೆ ನಿಂತಿದ್ದು ಅದನ್ನು ಶಿಲೆ ಕಲ್ಲಿನಿಂದ ಕಟ್ಟಿಸಿದ್ದರು ನಮ್ಮ ತಂದೆ.
ನಾನು ಅದಕ್ಕೆ ಕಟ್ಟಿದ್ದ ಸೈಜು ಕಲ್ಲು ತೆಗೆಸಿದೆ, ಆ ಗುಂಡಿ ನೆಲದಿಂದ 8 ಅಡಿ ಆಳದವರೆಗೆ ಗಟ್ಟಿ ಮ್ಯಾಂಗನೀಸ್ ಅಂಶದ ಜಂಬಿಟ್ಟಿಗೆ ತೆಗೆದು ಮಾಡಿದ ಗುಂಡಿ ಆದ್ದರಿಂದ ಅದನ್ನು ನಾನು ಬೋಲ್ಡರ್ಸ್ - ಸೋಲಿಂಗ್ - 40 mm ಜಲ್ಲಿ - ನಂತರ 20 mm - ಅದರ ಮೇಲೆ ಮರಳು ಸಾಣಿಸಿ ಉಳಿದ ಊರುಟು ಮರಳು ಕಲ್ಲು- 6 mm ಜಲ್ಲಿ ಇದೆಲ್ಲದರ ಮೇಲೆ ಮರಳು ಹಂತ ಹಂತವಾಗಿ ಹಾಕಿ ಸುತ್ತಲೂ ಕಲ್ಲಿನ ಎತ್ತರದ ಕಟ್ಟೆ ಕಟ್ಟಿ ಮಳೆ ನೀರು ಇಂಗುವಂತೆ ಮಾಡಿದ್ದೇನೆ.
ಭೂಮಿ ತನ್ನ ಸಾಮರ್ಥ್ಯದ ಇಂಗುವಿಕೆ ದಾರಣೆ ಮುಗಿದ ಮೇಲೆ ಉಹೂಂ ... ಒಂದು ಹನಿಯನ್ನು ಒಳತೆಗೆದು ಕೊಳ್ಳುವುದಿಲ್ಲ... ಆಗ ಇಂಗದ ಹೆಚ್ಚುವರಿ ನೀರು ತನ್ನಿಂದ ತಾನೇ ಕೆರೆಗೆ ಹೋಗುವಂತೆ ಮಾಡಿದ್ದೇನೆ.
ಇದು ಕಳೆದ 12 ವರ್ಷದಿಂದ ನಡೆಯುತ್ತಿದೆ ಆದರೂ ನಮ್ಮ ಎರಡು ತೆರೆದ ಬಾವಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯ ಕೊನೆಯಲ್ಲಿ ನೀರು ನೀಡಲು ಸಾಧ್ಯವಾಗುತ್ತಿರಲಿಲ್ಲ ಆದರೆ ಈ ವರ್ಷದ ಬಿರು ಬೇಸಿಗೆಯ ಆಶ್ಚರ್ಯ.. ನಮ್ಮ ತೆರೆದ ಬಾವಿಗಳು ಬೋರ್ ವೆಲ್ ಗೆ ಸರಿಸಮನಾಗಿ ಪೈಪೋಟಿಯಿಂದ ನೀರು ನೀಡಿದೆ.
ಭೂಮಿ ಒಳಗಿನ ವಿಜ್ಞಾನ ನನಗೆ ಅರ್ಥವಾಗುತ್ತಿಲ್ಲ, ಕಡಿಮೆ ಮಳೆ ಮತ್ತು ವಿಪರೀತ ತಾಪ ಮಾನ ನಮ್ಮ ಬಾವಿಗಳು ಕೈ ಕೊಡುತ್ತದೆಂದು ಬಾವಿಸಿದ್ದು ಹುಸಿ ಆಯಿತು ನಿರಂತರ ನೀರು ಇಂಗುವಿಕೆ ಇಂತ ಆಪತ್ಕಾಲದಲ್ಲಿ ತನ್ನ ಚಮತ್ಕಾರ ತೋರಿಸಿತು.
Comments
Post a Comment