Blog number 2172. ಇವತ್ತು 9 - ಜೂನ್-2024 ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪರ 86ನೇ ಹುಟ್ಟು ಹಬ್ಬದ ಸ್ಮರಣೆಗಳು.
#ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕ
#ಬಿ_ಕೃಷ್ಣಪ್ಪರ_86ನೇ_ಹುಟ್ಟು_ಹಬ್ಬ
#ಬಿ_ಕೃಷ್ಣಪ್ಪರ_ಪರಮಾಪ್ತ_ಗೆಳೆಯ
#ಶಿವಮೊಗ್ಗ_ಮುನೀರ್_ಬಿ_ಕೃಷ್ಣಪ್ಪರ_ಪ್ರೇಮ_ವಿವಾಹಕ್ಕೆಸಾಕ್ಷಿ_ಆದವರು
#ದಲಿತ_ಸಂಘರ್ಷ_ಸಮಿತಿ_ಹುಟ್ಟು_ಸಂಘಟನೆ_ಬಗ್ಗೆ_ಅವರ_ಸಂದರ್ಶನದಲ್ಲಿ_ನೋಡಿ
#ಆನಂದಪುರಂ_ರೈತ_ಬಂದು_ಗ್ರಾಮೋದ್ಯೋಗದ_ಕಾರ್ಮಿಕ_ಹೋರಾಟದಲ್ಲಿ_ಬೆಂಬಲಿಸಿದ್ದರು
#ಚಂದ್ರಗುತ್ತಿ_ಬೆತ್ತಲೆ_ಸೇವೆ_ನಿಷೇದಕ್ಕೆ_ಕಾರಣವಾಗಿತ್ತು_ಅವರ_ಹೋರಾಟ.
9 ಜೂನ್ 1938 ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೋ.ಬಸಪ್ಪ ಕೃಷ್ಣಪ್ಪ ಅವರ ಜನ್ಮದಿನ ಇವತ್ತು ಅವರ 86ನೇ ಹುಟ್ಟು ಹಬ್ಬ ಬಹಳ ಜನ ಅವರ ಹೆಸರಿನ ಮುಂದಿನ ಬಿ ಅಂದರೆ ಭದ್ರಾವತಿ ಅನ್ನುತ್ತಾರೆ ಆದು ತಪ್ಪು, ಹರಿಹರ ಅವರ ಹುಟ್ಟಿದ ಊರು ಅವರ ಶಿಕ್ಷಣ ಚಿತ್ರದುರ್ಗದಲ್ಲಿ.
ಬಿ.ಕೃಷ್ಣಪ್ಪರ ಮೊದಲ ಉದ್ಯೋಗ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ತಾತ್ಕಲಿಕ ಉಪನ್ಯಾಸ ಹುದ್ದೆಗೆ ಸೇರುತ್ತಾರೆ, ಆಗ ಕವಿ ಗೋಪಾಲಕೃಷ್ಣ ಅಡಿಗರು ಎಲ್.ಬಿ. ಕಾಲೇಜಿನ ಪ್ರಾಂಶುಪಾಲರು.
ನಂತರ ಭದ್ರಾವತಿ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದ್ದಾರೆ, ಪ್ರಮುಖ ಕನ್ನಡ ಸಾಹಿತ್ಯ ನಿ
ಇಡೀ ರಾಜ್ಯದಲ್ಲಿ ದಲಿತರ ಹಕ್ಕುಗಳ ಬಗ್ಗೆ ಜನ ಜಾಗೃತಿಯ ಆಂದೋಲನದ ಜ್ಯೋತಿ ಬೆಳಗಿದ ಅವರ ಹೋರಾಟ ಸಣ್ಣದಲ್ಲ ಅವರ ಯೌವನದಲ್ಲಿ ಅವರು ಫ್ರೋ. ನಂಜುಂಡ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶರ ಜೊತೆ ಸಮಾಜವಾದಿ ಯುವ ಜನ ಸಭಾದಲ್ಲಿ ಮುಂಚೂಣಿಯಲ್ಲಿದ್ದರು.
ಆ ಸಮಯದಲ್ಲೇ ಅವರ ಪ್ರೇಮ ವಿವಾಹ ಕವಿ ಗೋಪಾಲ ಕೃಷ್ಣ ಅಡಿಗರ ಅಣ್ಣನ ಪುತ್ರಿ ಇಂದಿರಾ ಜೊತೆ ಆಗುತ್ತದೆ ಬಿ.ಕೃಷ್ಣಪ್ಪ ಮತ್ತು ಇಂದಿರಾ ವಿವಾಹ ದಲಿತ ಮತ್ತು ಬ್ರಾಹ್ಮಣರ ಅಂತರ್ಜಾತಿ ವಿವಾಹವಾದ್ದರಿಂದ ಆ ಕಾಲದಲ್ಲಿ ಜಾತಿ ಕಲಹಕ್ಕೆ ಕಾರಣವಾಗಿತ್ತು.
ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಸಮಾಜವಾದಿ ಯುವಜನ ಸಭಾ ಸಮಾವೇಶದ ಸಂದರ್ಭದಲ್ಲಿ ಪೂರ್ಣ ಚಂದ್ರ ತೇಜಸ್ವಿ ಈ ಪ್ರೇಮಿಗಳಿಗೆ ಆಶ್ರಯ ನೀಡುತ್ತಾರೆ, ಜಾತಿ ಕಾರಣದಿಂದ ಪ್ರೇಮಿಗಳಿಗೆ ಬೆದರಿಸಲು ಭದ್ರಾವತಿಯಿಂದ ಕಾರಿನಲ್ಲಿ ಅಲ್ಲಿಗೆ ಹೋಗಿದ್ದವರನ್ನ ಪ್ರೋ ನಂಜುಂಡ ಸ್ವಾಮಿ ತರಾಟೆಗೆ ತೆಗೆದು ಕೊಳ್ಳುತ್ತಾರೆ ಹೀಗೆ ಆ ದಿನದ ನೆನಪುಗಳನ್ನ ಮೆಲಕು ಹಾಕಿದವರು ಬಿ.ಕೃಷ್ಣಪ್ಪರ ಆಪ್ತ ಗೆಳೆಯರಾಗಿದ್ದ ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಕಾಗಿದ್ದವರು ಮತ್ತು ಕನ್ನಡ ಸಾಹಿತ್ಯದ ಆಶ್ರಯದಾತರಾಗಿದ್ದ ಹಂಚಿನಾಳ ಇಬ್ರಾಹಿಂ ಸಾಹೇಬರ ಬಲಗೈ ಆಗಿದ್ದ #ಶಿವಮೊಗ್ಗ_ಮುನೀರ್.
1983-84ರಲ್ಲಿ ನಮ್ಮ ಊರು ಆನಂದಪುರಂನ ರೈತಬಂದು ಗ್ರಾಮೋದ್ಯೋಗದ ರೈಸ್ ಮಿಲ್ ಐಕಾನ್ ಸುಬ್ಬಣ್ಣನಾಯಕರು ಸುಪ್ರ ಸಿದ್ದರು ಆ ಕಾಲದಲ್ಲೇ ಸಂಸ್ಥೆಯ ನಾಲ್ವರು ಕಾರ್ಮಿಕರ ಕೊಲೆ ಆಗುತ್ತದೆ ಇದನ್ನು ತನಿಖೆಗೆ ಒತ್ತಾಯಿಸಿ ನಾನು, ಸಾಗರದ ಆಗಿನ ಜನರಲ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ S.S. ನಾಗರಾಜ್, ಆಗಿನ ಸಾಗರ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವಾನಂದ ಕುಗ್ವೆ, ಜನಪರ ಹೋರಾಟಗಾರ ನ್ಯಾಯದ ತಕ್ಕಡಿ ಪತ್ರಿಕೆ ಸಂಪಾದಕ ತೀ.ನಾ.ಶ್ರೀನಿವಾಸ್, ಆಗಿನ ವಿದ್ಯಾರ್ಥಿ ಮುಖಂಡ ಅದರಂತೆ ವಿಶ್ವನಾಥ ಗೌಡ, ಯುವ ಮುಖಂಡರಾದ ಕುಗ್ವೆ ವಸಂತ್, ಪ್ರೆಡರಿಕ್, ಆಟೋ ಮೋಹನ್ ಮತ್ತು ಅನೇಕರು ಪ್ರತಿಭಟನೆ ನಡೆಸಿದಾಗ ಲಾಠಿ ಛಾರ್ಜ್, ಬಂದನ ಹೀಗೆ ಅನೇಕ ಹಿಂಸೆ ನಾವು ಅನೇಕರು ಅನುಭವಿಸ ಬೇಕಾಯಿತು ಆಗ ನಮ್ಮ ಬೆಂಬಲಕ್ಕೆ ಬಂದವರು ಬಿ.ಕೃಷ್ಣಪ್ಪನವರು.
ನಾವು ಆನಂದಪುರಂನಿಂದ ಶಿವಮೊಗ್ಗಕ್ಕೆ ನೂರಾರು ಯುವಕರು ಸೈಕಲ್ ಜಾಥಾ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿದಾಗ ನಮ್ಮನ್ನ ಸ್ವಾಗತಿಸಲು ಬಿ. ಕೃಷ್ಣಪ್ಪನವರು ಭದ್ರಾವತಿಯಿಂದ ತಮ್ಮ ನೀಲಿ ಬಣ್ಣದ ಬಜಾಜ್ ಸ್ಕೂಟರ್ ನಲ್ಲಿ ಬಂದಿದ್ದರು.
ಪ್ರತಿಭಟನಾ ಸಭೆಯಲ್ಲಿ ನಮ್ಮ ಹೋರಾಟ ಬೆಂಬಲಿಸಿ ಮಾತಾಡಿದ್ದರು ಆಗ ಶಿವಮೊಗ್ಗದ ಕಾರ್ಮಿಕ ಮುಖಂಡ ವಕೀಲರಾದ ತಿರುಕಪ್ಪನವರು, ಡಿವಿಎಸ್ ಕಾಲೇಜಿನ ಉಪನ್ಯಾಸಕರಾದ ಜನಪರ ಹೋರಾಟಗಾರ ರಾಚಯ್ಯ, ವಿದ್ಯಾರ್ಥಿ ಮುಖಂಡ ಈಸೂರು ಲೋಕೇಶ್ ಮತ್ತು ಗೆಳೆಯರು ನಮ್ಮ ಹೋರಾಟ ಬೆಂಬಲಿಸಿದ್ದರು.
30 ಏಪ್ರಿಲ್ 1997ರಂದು ತಮ್ಮ 58 ನೆ ವರ್ಷಕ್ಕೆ ಇಹಲೋಕ ಯಾತ್ರೆ ಮುಗಿಸಿದ ಬಿ.ಕೃಷ್ಣಪ್ಪರ ದಲಿತ ಜನ ಜಾಗೃತೆ ಅಸಾಧಾರಣ ಹೋರಾಟವಾಗಿ ದಾಖಲಾಗಿದೆ.
ಶಿವಮೊಗ್ಗ ಮುನೀರ್ ಅವರು ನನ್ನ ಅತಿಥಿ ಆಗಿದ್ದಾಗ ಬಿ.ಕೃಷ್ಣಪ್ಪರ ನೆನಪುಗಳ ಅವರ ಮೂರು ಸಂದರ್ಶನಗಳು ಬಿ.ಕೃಷ್ಣಪ್ಪರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ನೋಡಿ
1).https://youtu.be/Cy5U572-nm0?feature=shared
2).https://youtu.be/fqRHd-7LdU8?feature=shared
3).https://youtu.be/aa_Ba3MVCFg?feature=shared
Comments
Post a Comment