#ಯೋಗಾ_ಯೋಗ_ಋಣಾನುಬಂದಗಳ_ಸತ್ಯ_ದರ್ಶನ
#ಗಯಾದಲ್ಲಿ_ವಿಷ್ಣುಪಾದದಲ್ಲಿ_ನಮ್ಮ_ಪಿತೃಗಳಿಗೆ_ಪಿಂಡ_ತರ್ಪಣದ
#ಕಾಯ೯ಕ್ರಮ_ನನ್ನ_ಅಣ್ಣನ_ಅನಾರೋಗ್ಯದಿಂದ_ರದ್ದಾಗಿತ್ತು
#ಯೋಗಾ_ಯೋಗ_ಕೆ_ವಿ_ಸುರೇಶರು_ಇದೇ_ತಿಂಗಳು_22ರಂದು_ಗಯಾದಲ್ಲಿ
#ನನ್ನ_ತಂದೆ_ತಾಯಿ_ಮತ್ತು_ನನ್ನ_ತಂದೆಯ_ಸಾಕು_ತಂದೆ_ಸುಬ್ಬಣ್ಣಾಚಾರ್_ಅವರಿಗೆ
#ಕಾರಣ್ಯ_ತರ್ಪಣ_ಅರ್ಪಿಸಿದ್ದಾರೆ.
ನನ್ನ ತಂದೆ #ಎಸ್_ಕೃಷ್ಣಪ್ಪ ಅನಾಥ ಮಗು ಅದನ್ನ ಎತ್ತಿತಂದವರು #ನಲ್ಲಪ್ಪ ಎಂಬ ಡೇರ್ ಡೆವಿಲ್ ಕ್ಷೌರಿಕರು, ಸಾಕಿದ್ದು ನನ್ನ ಅಜ್ಜಿ ಮೀನುಗಾರರಾದ ಉಡುಪಿ ಜಿಲ್ಲೆಯ ಬಾರ್ಕೂರಿನ ಬೆಣ್ಣೆ ಕುದುರಿನ #ಅಬ್ಬಕ್ಕ ಎಂಬ ದೀರ ಮಹಿಳೆ ಮತ್ತು ಅವರ ಪತಿ ವಿಶ್ವಕರ್ಮ ಜಾತಿಯ #ಸುಬ್ಬಣ್ಣ_ಆಚಾರ್.
ಸುಬ್ಬಣ್ಣ ಆಚಾರ್ ಇಹಲೋಕ ತ್ಯಜಿಸಿದಾಗ ವೈಕುಂಠ ಸಮಾರಾಧನೆ ದಿನ ದಶದಾನವನ್ನು ನೀಡಿದ್ದರು ಅದನ್ನು ಸ್ವೀಕರಿಸಿದವರು ಮಹಾನ್ ವ್ಯಕ್ತಿ #ವೇದನಾರಾಯಣ_ಭಟ್ಟರು ಅವರು ದ್ವಾರಕೆ ಸಂಶೋಧಿಸಿದ #S_R_ರಾವ್ ಜನಿಸಿದ ಆನಂದಪುರಂನ ಮನೆ ಮಾಲಿಕರು, ಶಾಸಕರು, ಮಂತ್ರಿ ಸಂಸದರು ಆಗಿದ್ದ #ಬದರಿನಾರಾಯಣ_ಅಯ್ಯಂಗಾರರ ಆಪ್ತರು ಅವರು ಈ ದಾನ ಸ್ವೀಕರಿಸಲು ಕಾರಣ ನನ್ನ ತಂದೆ ಬಗ್ಗೆ ಅವರಿಗಿದ್ದ ಪ್ರೀತಿ ಮಾತ್ರ.
ಆ ಹಿತ್ತಾಳೆ ಹರಿವಾಣ ಅವರ ಮನೆಯಲ್ಲಿದೆ ಅವರ ವೈದಿಕದಲ್ಲಿ ಮಾತ್ರ ಅದನ್ನು ಈ ಕುಟುಂಬ ಬಳಸುತ್ತಾರೆ ಅದಕ್ಕೆ "ಸುಬ್ಬಣ್ಣಾಚಾರರ ಪರಾತ ಕೃಷ್ಣಪ್ಪ ಕೊಟ್ಟಿದ್ದು" ಅಂತನೇ ಹೇಳುತ್ತಾರೆ ನಿನ್ನೆ ವೇದನಾರಾಯಣ ಭಟ್ಟರ ವೈದಿಕದಲ್ಲಿ ಬಳಸಿದ್ದಾರೆ.
ಈ ವೇದ ನಾರಾಯಣ ಭಟ್ಟರ ಕಿರಿಯ ಪ್ರತ್ರ #ಕೆ_ವಿ_ಸುರೇಶ್ ನಮ್ಮ ತಂದೆಗೆ ಮತ್ತು ನನ್ನ ಅಣ್ಣನಿಗೆ ಅತ್ಯಾಪ್ತರು ಇತ್ತೀಚಿಗೆ ಅವದೂತರಾದ #ಶ್ರೀಕಾಂತಾನಂದ_ಸರಸ್ವತಿ_ಮಹಾರಾಜರು ಪ್ರಾರಂಬಿಸಿರುವ ಲೋಕ ಕಲ್ಯಾಣಕ್ಕಾಗಿ ಒಂದು ಕೋಟಿ ರುದ್ರಪಾರಾಯಣ ಅಭಿಯಾನದಲ್ಲಿ ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ನೆರವೇರಿಸಲು ಹೋದವರು ಗಯಾಕ್ಕೆ ಹೋಗಿ ಅವರ ಪಿತೃವರ್ಗದವರಿಗೆ ಪಿತೃತರ್ಪಣ ನೀಡುವಾಗ ನನ್ನ ತಂದೆ ಕೃಷ್ಣಪ್ಪರಿಗೆ, ನನ್ನ ತಾಯಿ ಸರಸಮ್ಮನಿಗೆ, ಅವರ ಸಾಕು ತಾಯಿ ನನ್ನ ಅಜ್ಜಿ ಅಬ್ಬಕ್ಕನಿಗೆ ಮತ್ತು ಸಾಕು ತಂದೆ ಸುಬ್ಬಣ್ಣಾಚಾರ್ ಅವರಿಗೆ ಕಾರುಣ್ಯ ತರ್ಪಣ ಅರ್ಪಿಸಿದ್ದಾರೆ.
ಇದೇ ಯೋಗಾ ಯೋಗ ಕಳೆದ ಏಪ್ರಿಲ್ 13 ರಂದು ಬೆಂಗಳೂರಿಂದ ನಾನು ನನ್ನಣ್ಣ ಸ್ವಪತ್ನಿಕರಾಗಿ ಕಾಶಿ-ಪ್ರಯಾಗ್ ರಾಜ್ - ಆಯೋಧ್ಯೆ ದರ್ಶನ ಮಾಡಿ ಗಯಾದಲ್ಲಿ ಪಿತೃತರ್ಪಣ ನೀಡಿ ನನ್ನ ಕುಟುಂಬಕ್ಕೆ ಸಹಾಯ ಮಾಡಿದವರಿಗೆ ನಲ್ಲಪ್ಪನವರು ಆದಿಯಾಗಿ ನನ್ನ ಅತ್ಯಾಪ್ತರಿಗೆ, ನಮ್ಮ ಸಾಕುಪ್ರಾಣಿಗಳಿಗೆ ಕಾರುಣ್ಯ ತರ್ಪಣ ನೀಡಲು ಪಟ್ಟಿ ಮಾಡಿಕೊಂಡಿದ್ದೆ.
ಏಪ್ರಿಲ್ 2 ರ ರಾತ್ರಿ ನನ್ನ ಅಣ್ಣನಿಗೆ ಸ್ಟ್ರೋಕ್ ಆಗಿ ನಮ್ಮ ಯಾತ್ರೆ ರದ್ದಾಗಿತ್ತು ಆದರೆ ನಮ್ಮ ಉದ್ದೇಶ ಕೆ.ವಿ.ಸುರೇಶರಿಂದ ದಿನಾಂಕ 22- ಜೂನ್- 2024 ರಂದು ಶುಕ್ರವಾರದಲ್ಲಿ ನೆರವೇರಿತು ಇದೇ ಯೋಗಾ ಯೋಗ ಮತ್ತು ಋಣಾನುಬಂದ.
ಇವತ್ತು ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಪ್ರಸಾದ- ಗಂಗಾಜಲ ತಂದ ಕೆ.ವಿ.ಸುರೇಶರಿಗೆ ನಮ್ಮ ಕುಟುಂಬದವತಿಯಿಂದ ಗೌರವಿಸಿ ನೆನಪಿನ ಕಾಣಿಕೆ ಅರ್ಪಿಸುವುದಕ್ಕೆ ನಮಗೆ ಅತ್ಯಂತ ಸಂತೋಷ ಸಂತೃಪ್ತಿ ಜೊತೆಗೆ ಆನಂದಬಾಷ್ಪವೂ ಸೇರಿತು.
ಈ ವರ್ಷದ ನವೆಂಬರ್ ತಿಂಗಳಲ್ಲಿ ಗಯಾ ತಲುಪಿ ನಮ್ಮ ಸಂಕಲ್ಪ ಪೂರೈಸುವ ಉದ್ದೇಶ ಇದೆ.
Comments
Post a Comment