#ಸಸ್ಯ_ತಜ್ಞ_ಬರಗಿ_ವೆಂಕಟಗಿರಿರಾವ್
#ಇನ್ನು_ನೆನಪು_ಮಾತ್ರ
#ಆನಂದಪುರಂ_ಕನ್ನಡ_ಸಂಘದಲ್ಲಿ_24_ವರ್ಷದ_ಹಿಂದೆ
#ಕಡಿದಾಳು_ಶಾಮಣರಿಂದ_ಸನ್ಮಾನ_ಮಾಡಿಸಿದ್ದೆ
#ಶಿವಮೊಗ್ಗದ_ಮೀನಾಕ್ಷಿ_ಭವನ_ಅವರ_ಕೇಂದ್ರವಾಗಿತ್ತು
#ತೊಂಬತ್ತರ_ದಶಕದಲ್ಲಿ_ಡಿಎಪ್_ಓ_ಶ್ರೀಕಂಠಪ್ಪ_ಮತ್ತು_ಇವರು
#ಅರಣ್ಯ_ಇಲಾಖೆಯಲ್ಲಿ_ನವಗ್ರಹ_ವನ_ನಕ್ಷತ್ರ_ವನ_ಸ್ಥಾಪಿಸಿ_ಪ್ರಸಿದ್ದರಾಗಿದ್ದರು
90 ರ ದಶಕದಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಸಿದ್ಧರಾಗಿದ್ದ DFO ಶ್ರೀಕಂಠಪ್ಪ ಅರಣ್ಯದಲ್ಲಿ ನಕ್ಷತ್ರ ವನ ಮತ್ತು ನವಗ್ರಹ ವನ ನಿರ್ಮಿಸಿ ಪ್ರಸಿದ್ದರಾಗಿದ್ದರು ನಂತರ ಔಷದ ವನ ಆಯುರ್ವೇದ ವನಗಳೂ ಆಯಿತು ಇದರ ಹಿನ್ನೆಲೆಯಲ್ಲಿ ಹೆಚ್ಚಿನ ಶ್ರಮ ಇದ್ದಿದ್ದು ನಮ್ಮ ಬರಗಿ ವೆಂಕಟಗಿರಿ ಅವರದ್ದು.
ಸರಳ ಸಜ್ಜನರಾದ ಈ ಸಸ್ಯ ತಜ್ಞರು ಯಾವತ್ತೂ ಪ್ರಚಾರ ಪ್ರಿಯರಾಗಿರಲಿಲ್ಲ ಪ್ರತಿ ನಿತ್ಯ ಶಿವಮೊಗ್ಗದ ಮೀನಾಕ್ಷಿ ಭವನ ದಲ್ಲಿ ಇರುತ್ತಿದ್ದರು ಮೀನಾಕ್ಷಿ ಭವನದ ಮಾಲಿಕ ಸಹೋದರರ ಖಾಸಾ ಮಿತ್ರರು ಇವರು.
2001ರಲ್ಲಿ 24 ವರ್ಷದ ಹಿಂದೆ ಆನಂದಪುರಂನಲ್ಲಿನ ಕನ್ನಡ ಸಂಘದ ಅವರಣದಲ್ಲಿ ಖ್ಯಾತ ಸಾಹಿತಿ #ನಾ_ಡಿಸೋಜ_ಬಯಲು_ರಂಗಮಂದಿರ ಉದ್ಘಾಟನೆ ರೈತ ಮುಖಂಡ #ಕಡಿದಾಳು_ಶಾಮಣ್ಣರಿಂದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಸ್ಯ ತಜ್ಞ ವೆಂಕಟಗಿರಿ ಅವರನ್ನ ಆಹ್ವಾನಿಸಿದ್ದೆ.
ಸಂಜೆ ನನ್ನ ಮನೆಯಲ್ಲಿ ಕಡಿದಾಳು ಶಾಮಣ್ಣ, ನಾ ಡಿಸೋಜ ದಂಪತಿಗಳು ಮತ್ತು ವೆಂಕಟಗಿರಿ ಚಹಾ ಸೇವಿಸಿ ಸಭೆಗೆ ಹೋಗಿದ್ದೆವು ಅಲ್ಲಿ ವೆಂಕಟಗಿರಿ ಅವರ ಸಸ್ಯ ಸಂರಕ್ಷಣೆ ಮತ್ತು ಅದರ ಬಗ್ಗೆ ಅವರಿಗಿರುವ ಅಪಾರ ಜ್ಞಾನದ ಬಗ್ಗೆ ನಾನು ಸಭೆಗೆ ಪರಿಚಯಿಸಿದ್ದೆ ಮತ್ತು ಕಡಿದಾಳು ಶಾಮಣ್ಣರಿಂದ ಸನ್ಮಾನಿಸಿದ್ದೆ.
ಇತ್ತೀಚೆಗೆ ಆರು ತಿಂಗಳ ಹಿಂದೆ ನಮ್ಮ ಊರ ಮಾರ್ಗವಾಗಿ ಬಂದಾಗ ನನ್ನ ಕಛೇರಿಗೆ ಬಂದು ಬೇಟಿ ಆಗಿದ್ದರು ಆಗ ಅವರ ಹೆಣ್ಣು ಮಕ್ಕಳು ವಿವಿದ ದೇಶದಲ್ಲಿರುವ ಬಗ್ಗೆ ಮತ್ತು ಆ ದೇಶಕ್ಕೆ ಕೆಲಕಾಲ ಹೋಗಿ ನೆಲೆಸಿದ್ದ ಬಗ್ಗೆ ಅಲ್ಲಿ ಬೀಳುವ ಹಿಮದಿಂದ ಹೆಚ್ಚು ತಿರುಗಾಟ ಮಾಡದ ಬಗ್ಗೆ ಮಾತಾಡಿದ್ದರು ಕಾಫಿಯ ಆತಿಥ್ಯ ಸ್ವೀಕರಿಸಿ ಹೋಗಿದ್ದರು.
ನಿನ್ನೆ ಹೊಸಬಾಳೆಯ ಮಂಜುನಾಥ ಹೆಗಡೆ ಅವರ ಪೋಸ್ಟಿನಿಂದ ವೆಂಕಟಗಿರಿ ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯಿತು.
ವಿರಳಾತಿ ವಿರಳ ಸಸ್ಯ ಸಂರಕ್ಷಣೆಯ ಅಮೋಘ ಕಾರ್ಯ ನಡೆಸಿದ್ದ ಸಜ್ಜನ ವೆಂಕಟಗಿರಿ ಅವರಿಗೆ ಸದ್ಗತಿ ಸ್ವರ್ಗ ಪ್ರಾಪ್ತಿಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment