Blog number 2182. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಪ್ರತಿ ವರ್ಷ ಪಾಲಿಸುವ ಸಂಪ್ರದಾಯ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚೆನ್ನಾಗಿ ಸುರಿದು ಹೊಸಪೇಟೆಯ ಆಣೆಕಟ್ಟು ತುಂಬಿ ತುಳುಕಲಿ ಎಂದು.
#ಶಿವಮೊಗ್ಗ_ಚಿಕ್ಕಮಗಳೂರು_ಜಿಲ್ಲೆಯ_ದಿಕ್ಕಿಗೆ_ಕೈಮುಗಿದು
#ಅಲ್ಲಿ_ಸಮೃದ್ಧ_ಮಳೆ_ಆಗಲಿ_ಅಂತ_ಪ್ರಾರ್ಥಿಸುತ್ತಾರೆ
#ಪೂಜೆ_ಮಾಡಿ_ಬುತ್ತಿ_ತಿಂದು_ಊರಿಗೆ_ಮರಳುತ್ತಾರೆ.
#ಮಲೆನಾಡಿನ_ಮಳೆಗಾಗಿ_ಪ್ರಾರ್ಥನೆ_ಮಾಡುವ
#ತುಂಗಭದ್ರ_ಅಚ್ಚು_ಕಟ್ಟು_ಪ್ರದೇಶದ_ರೈತರು
#ಮುಂಗಾರು_ಕಾಲದಲ್ಲಿ_ಹೊಸಪೇಟೆ_ತುಂಗಭದ್ರಾ_ಆಣೆಕಟ್ಟಿಗೆ_ಬಂದು_ಪೂಜಿಸುವ_ಸಂಪ್ರದಾಯ
#ಆಣೆಕಟ್ಟಿನ_ನೀರು_ಶೇಖರಣೆ_ಸಾಮರ್ಥ್ಯ_101_TMC
#ಜಲಾನಯನ_ಪ್ರದೇಶ_ಕೃಷ್ಣ_ನದಿಗೆ_ಸೇರಿ_71417_ಚದರ_ಕಿಮಿ
#ಇದರಲ್ಲಿ_ಕೃಷ್ಣಾ_ನದಿ_ಜಲಾಯನ_ಪ್ರದೇಶ_259_ಚದರ_ಕಿ_ಮಿ_ಮಾತ್ರ
#ಕರ್ನಾಟಕದ_ರಾಯಚೂರು_ಕೊಪ್ಪಳ_ಬಳ್ಳಾರಿ_ಜಿಲ್ಲೆಯ_ಮೂರುವರೆ_ಲಕ್ಷ_ಹೆಕ್ಟೇರ್
#ಆಂದ್ರಪ್ರದೇಶದ_ಕರ್ನೂಲ್_ಕಡಪ_ಆನಂತಪುರ_ಜಿಲ್ಲೆಯ_ಒಂದು_ಲಕ್ಷದ_ನಲವತ್ತಾರು_ಸಾವಿರ
#ಹೆಕ್ಟೇರ್_ಪ್ರದೇಶ_ಸಮೃದ್ಧ_ನೀರಾವರಿ_ಪ್ರದೇಶವಾಗಿದೆ.
ನಮ್ಮ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಗಂಗಾಮೂಲದಲ್ಲಿ ಉದ್ಭವ ಆಗುವ ಎರೆಡು ನದಿಗಳಾದ ತುಂಗಾ ಮತ್ತು ಭದ್ರ ಬೇರೆ ಬೇರೆ ಆಗಿ ಹರಿದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸಮೀಪದ ಕೂಡ್ಲಿಯಲ್ಲಿ ಸಂಗಮವಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಆಣೆಕಟ್ಟುವಿನಲ್ಲಿ ಸಂಗ್ರಹವಾಗಿ ನಮ್ಮ ರಾಜ್ಯದ 3.5 ಲಕ್ಷ ಹೆಕ್ಟೇರ್ ಭೂಮಿಗೆ ಸಮೃದ್ದವಾಗಿ ನೀರುಣಿಸುತ್ತದೆ.
ನಂತರ ಪಕ್ಕದ ಆಂಧ್ರ ಪ್ರದೇಶದಲ್ಲಿ 1.49 ಲಕ್ಷ ಹೆಕ್ಟೇರ್ ಭೂಮಿ ನೀರುಣಿಸಿ ಮಹಾ ರಾಷ್ಟ್ರದಿಂದ ಬರುವ ಕೃಷ್ಣ ನದಿಗೆ ಸೇರಿ ನಂತರ ಬಂಗಾಳಕೊಲ್ಲಿ ಸಮುದ್ರ ಸೇರುತ್ತದೆ.
ಈ ನೀರಾವರಿ ಪ್ರದೇಶದ ರೈತರು ಒಂದು ಸಂಪ್ರದಾಯ ಪಾಲಿಸುತ್ತಾರೆ, ಪ್ರತಿ ವರ್ಷ ಮುoಗಾರಿನ ದಿನಗಳಲ್ಲಿ ಹೊಸಪೇಟೆ ತುಂಗಭದ್ರ ಆಣೆ ಕಟ್ಟಿಗೆ ಬಂದು ಈ ವರ್ಷ ಆಣೆಕಟ್ಟು ತುಂಬಿ ತುಳುಕಲಿ ಎಂದು ಹಾರೈಸುತ್ತಾ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ದಿಕ್ಕಿಗೆ ಕೈಮುಗಿದು ಅಲ್ಲಿ ಸಮೃದ್ಧ ಮಳೆ ಆಗಲಿ ಅಂತ ಪ್ರಾರ್ಥಿಸುತ್ತಾರೆ, ಪೂಜೆ ಮಾಡಿ ಬುತ್ತಿ ತಿಂದು ಊರಿಗೆ ಮರಳುತ್ತಾರೆ.
ಅವರ ಪ್ರಾರ್ಥನೆ ಯಾವತ್ತೂ ಹುಸಿ ಆಗಿಲ್ಲ ಅವರ ಕೃಷಿ ಭೂಮಿಯಲ್ಲಿ ಎರೆಡು ಬೆಳೆ ತೆಗೆದು ತಮ್ಮ ಜೀವನ ಸಾರ್ಥಕಗೊಳಿಸಿದ್ದಾರೆ.
Comments
Post a Comment