ಭಾಗ_5_ಸ್ವಾಮಿರಾವ್_ಮಾತು_ಕಥೆ
#ಡಿ_ಬಿ_ಚಂದ್ರೇಗೌಡರ_ವಿರುದ್ದ_ಬಂಗಾರಪ್ಪ_ಸೇಡು
#ಸ್ವಾಮಿರಾವ್_ಅವರ_ಜೀವನ_ವೃತ್ತಾಂತ_ವಿಮರ್ಶೆ_ಭಾಗ_2
#ನಾನು_ಹೇಳುವುದೆಲ್ಲ_ಸತ್ಯ_ಎಂಬ_ಶೀರ್ಷಿಕೆ_ಏಕೆ?
#ಯಾವುದನ್ನೂ_ಮುಚ್ಚಿಡದೆ_ಅವರ_ಜೀವನ_ವೃತ್ತಾಂತ_ತೆರೆದಿಟ್ಟಿದ್ದಾರೆ
#ಶಿವಮೊಗ್ಗ_ಜಿಲ್ಲೆಯ_ಪವರ್_ಪೊಲಿಟೆಕ್ಸ್_ಒಳಾಂತರಳ_ಇದರಲ್ಲಿದೆ
#ಬಹು_ಸಂಖ್ಯಾತ_ದೀವರು_ಸಮಾಜದ_ಹೋರಾಟಗಳು_ಗೆಲುವು_ಸೋಲು_ದಾಖಲಿಸಿದ್ದಾರೆ.
https://youtu.be/Nrdv5819R4s?feature=shared
1980 ರಲ್ಲಿ ಕಾಂಗ್ರೇಸ್ ಸೇರಿ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿದ್ದ ಬಂಗಾರಪ್ಪ ನಂತರ ನಡೆದ ರಾಜಕೀಯ ಸ್ಥಿತ್ಯಂತರದಿಂದ ಬೇಸರಗೊಂಡು ಕಾಂಗ್ರೆಸ್ ತೊರೆದು ಡಿ.ದೇವರಾಜ ಅರಸು ಮರಣಾನಂತರ ಅವರಿಂದ ಸ್ಥಾಪಿತಗೊಂಡಿದ್ದ #ಕ್ರಾಂತಿ_ರಂಗ ಪಕ್ಷದ ಅಧ್ಯಕ್ಷರಾಗಿ 1983 ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಜೊತೆ ಕೈ ಜೋಡಿಸಿ ಜನತಾರಂಗದ ಮೂಲಕ 35 ಶಾಸಕರನ್ನ ಬಂಗಾರಪ್ಪ ಗೆಲ್ಲಿಸಿಕೊಂಡು ಮುಖ್ಯಮಂತ್ರಿ ಎಂದೇ ಬಿಂಬಿತಗೊಂಡರು.
ಆದರೆ 35 ಶಾಸಕರಲ್ಲಿ 29 ಶಾಸಕರು ಮಂತ್ರಿ ಪದವಿ ಆಸೆಗಾಗಿ ಕ್ರಾಂತಿ ರಂಗ ತೊರೆದು ಜನತಾ ಪಕ್ಷ ಸೇರಿದರು.
ಬಂಗಾರಪ್ಪನವರಿಗೆ ದಂಬಾಲು ಬಿದ್ದು ಕ್ರಾಂತಿರಂಗದಿಂದ ತೀರ್ಥಹಳ್ಳಿ ವಿಧಾನಸಭಾ ಟಿಕೇಟು ಪಡೆದು ಮೊದಲ ಬಾರಿಗೆ ಆಯ್ಕೆ ಆಗಿದ್ದ ಡಿ.ಬಿ.ಚಂದ್ರೇಗೌಡರು ಬಂಗಾರಪ್ಪರಿಗೆ ಕೈಕೊಟ್ಟು ಜನತಾ ಪಕ್ಷ ಸೇರಿ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸ್ಪೀಕರ್ ಆಗಿ ಆಯ್ಕೆ ಆಗಿದ್ದರು ಒಮ್ಮೆ ಸದನದಲ್ಲಿ "ಕ್ರಾಂತಿರಂಗ ಈಗ ಎಲ್ಲಿದೆ" ಎಂದ ವ್ಯಂಗ್ಯದ ಮಾತು ಬಂಗಾರಪ್ಪರನ್ನ ಕೆರಳಿಸಿತ್ತು.
1985ರಲ್ಲಿ ಬಂಗಾರಪ್ಪ ತಮ್ಮ ಕ್ರಾಂತಿರಂಗ ಕಾಂಗ್ರೇಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು ಎಐಸಿಸಿ ರಾಜ್ಯದ ಚುನಾವಣೆಯ ಸಂಪೂಣ೯ ಹೊಣೆ ಬಂಗಾರಪ್ಪರಿಗೆ ವಹಿಸಿದ್ದರು.
ತೀರ್ಥಹಳ್ಳಿ ವಿದಾನ ಸಭಾ ಕ್ಷೇತ್ರದಿಂದ ಡಿ.ಬಿ.ಚಂದ್ರೇಗೌಡರಿಗೆ ಸೋಲಿಸುವ ಶಫಥ ಮಾಡಿದ್ದ ಬಂಗಾರಪ್ಪ ಈ ಕೆಲಸ ಸ್ವಾಮಿ ರಾವ್ ರಿಗೆ ವಹಿಸುತ್ತಾರೆ ಪಲಿತಾಂಶ ಬಂದಾಗ ಡಿ.ಬಿ.ಚಂದ್ರೇಗೌಡರು ಸೋತು ಹೋದರು #ಪಟಮಕ್ಕಿ_ರತ್ನಾಕರ್ ಗೆದ್ದರು ಇದನ್ನು ಸವಿವಿವರವಾಗಿ ಸ್ವಾಮಿ ರಾವ್ ಜೀವನ ವೃತ್ತಾಂತದಲ್ಲಿ ದಾಖಲಿಸಿದ್ದಾರೆ ಇದು ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರಮುಖ ರಾಜಕಾರಣದ ಘಟನೆ.
Comments
Post a Comment