Skip to main content

Blog number 2214. ಆನಂದಪುರಂನಲ್ಲಿ ಎರೆಡು ರಾಷ್ಟ್ರೀಯ ಹೆದ್ದಾರಿಗಳು, ಬೈಪಾಸ್, ಪ್ಲೈಒವರ್ ನಿರ್ಮಾಣ ಆಗಲಿದೆ.

#ಆನಂದಪುರಂನಲ್ಲಿ_ಎರೆಡು_ರಾಷ್ಟ್ರೀಯ_ಹೆದ್ದಾರಿಗೆ_ಬೈಪಾಸ್

#ಎರೆಡೂ_ರಾಹೆ_ವಿಂಗಡಿಸುವ_ಬೃಹತ್_ಪ್ಲೈಒವರ್

#ರಾಣಿಬೆನ್ನೂರು_ಬೈಂದೂರು_ರಾಹೆ_766ಸಿಗೆ_ಬೈಪಾಸ್ 

#ಹೊನ್ನಾವರ_ಚಿತ್ತೂರು_ರಾಹೆ_69ಕ್ಕೆ_ಬೈಪಾಸ್

#ಕನಾ೯ಟಕದಲ್ಲಿ_14_ರಾಷ್ಟ್ರೀಯ_ಹೆದ್ದಾರಿ_ಹಾದು_ಹೋಗಿದೆ 

#ಐದು_ಸ್ಥಳದಲ್ಲಿ_ಮಾತ್ರ_ಎರೆಡು_ರಾಷ್ಟ್ರೀಯ_ಹೆದ್ದಾರಿ_ಹಾದು_ಹೋಗಿದೆ.

#ಅದರಲ್ಲಿ_ನಮ್ಮ_ಆನಂದಪುರಂ_ಒಂದು

 ನ್ಯಾಷನಲ್ ಹೈವೇ ಅಥಾರಿಟಿ ಆನಂದಪುರಂನಲ್ಲಿ ಹಾದು ಹೋಗುವ NH 766 C (ರಾಣಿಬೆನ್ನೂರು ಬೈಂದೂರು) ಮತ್ತು NH 69 (ಹೊನ್ನಾವರ ಚಿತ್ತೂರು) ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸಲು ಎಲ್ಲಾ ರೀತಿಯ ತಯಾರಿ ನಡೆಸಿ ಈಗ ಡಿಪಿಆರ್ ಆಗಿದೆ.
     ಡಿಟೈಲ್ ಪ್ರಾಜೆಕ್ಟ್ ರಿಪೋರ್ಟ್ (DPR) ನನ್ನ ಟೀಬಲ್ ಮೇಲೆ ಇದೆ ಇದನ್ನ ವಿವರವಾಗಿ ನೋಡಿದ್ದೇನೆ ಅದರ ಫೋಟೋಗಳನ್ನ ಲಗತ್ತಿಸಿದ್ದೇನೆ ನೋಡಿ.
   ಈ ಬೈಪಾಸ್ ಜೋಡಿ ರಸ್ತೆ ದಾಸಕೊಪ್ಪ ವೃತ್ತದ ಕಮಲಾಕ್ಷ ನಾಯಕರ ಜಾಗದಿಂದ ಗೌರಿಕೆರೆ ಕೆಳಗಿನ ಗುಂಡಿಬೈಲು ಜಮೀನಿನಲ್ಲಿ ಸಾಗಿ, ರಂಗನಾಥ ಸ್ವಾಮಿ ದೇವಾಲಯದ ಕೆಳಗಿನ ಕೆ.ಎಂ.ಎಸ್ ಲೇಔಟ್ ಗೆ ತಾಗಿ ಯಡೇಹಳ್ಳಿ ಕೆರೆ ಕೆಳಗಿನ ಗುಂಡಿಬೈಲು ಜಮೀನಿನ ಮುಖಾಂತರ ಯಡೇಹಳ್ಳಿ ಆಚಾಪುರ NH 69ರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೂವಪ್ಪಣ್ಣರ ಬಾವನ ವರ್ಕ್ ಶಾಪ್ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ NH 69 ಕ್ರಾಸ್ ಮಾಡಿ RR ರೈಸ್ ಮಿಲ್ ಗಿಂತ ಮೊದಲೇ ರಿಪ್ಟನ್ ಪೇಟೆ ರಸ್ತೆ ಕ್ರಾಸ್ ಮಾಡಿ ಸಲಿಂ ಗ್ಯಾರೇಜ್ ಮತ್ತು ಉದ್ದ ನೂರು ಜಾಗದ ಮದ್ಯದಲ್ಲಿ ಹಾದು ರೈಲ್ವೆ ರಸ್ತೆ ಕ್ರಾಸ್ ಮಾಡಿ ಶಾಂತಬೈಲು ಮಧ್ಯದಿಂದ ಹೊಸನಗರ ರಸ್ತೆಯಲ್ಲಿ ಗಣಪತಿ ದೇವಸ್ಥಾನದ ನಂತರ ಇರುವ ದಿವಂಗತ ಗಣಪತಿ ಮಾಸ್ತರ್ ಅವರ ಜಾಗದಲ್ಲಿ ಸೇರುತ್ತದೆ.
  2700 ಮೀಟರ್ ಅಂದರೆ 2.7 ಕಿ.ಮೀಟರ್ ರಸ್ತೆ ನಿರ್ಮಾಣಕ್ಕಾಗಿ ಹಣ ಮಂಜೂರಾಗಿದೆ, ರಸ್ತೆ ನಿರ್ಮಾಣಕ್ಕೆ ಭೂಮಿ ಗುರುತಿಸಿದ್ದಾರೆ, ಭೂ ಸ್ವಾದೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
   ಇದರ ಜೊತೆಗೆ ತುಮಕೂರು ಹೊನ್ನಾವರ ಸೇರುವ ರಾಷ್ರೀಯ ಹೆದ್ದಾರಿ 69 ಕೂಡ ಆನಂದಪುರಂ ಹಾದು ಹೋಗಲಿದೆ ಇದಕ್ಕೂ ಬೈಪಾಸ್ ನಿರ್ಮಾಣಕ್ಕೆ ಸರ್ವೇ ಮಾಡಿ DPR ಆಗಿದೆ.
   ಎರೆಡು ರಾಷ್ಟ್ರೀಯ ಹೆದ್ದಾರಿ ವಿಭಜಿಸುವ ಬೃಹತ್ ಪ್ಲೈಒವರ್ ಯಡೇಹಳ್ಳಿ ವೃತ್ತ ಮತ್ತು ಆಚಾಪುರ ನಡುವೆ ನಿರ್ಮಾಣ ಆಗಲಿದೆ.
  ಒಂದೇ ಊರಿನಲ್ಲಿ ಎರೆಡು ರಾ.ಹೆ. ಹಾದು ಹೋಗುವ ರಾಜ್ಯದ ಐದು ಸ್ಥಳಗಳಲ್ಲಿ ಆನಂದಪುರಂ ಕೂಡ ಒಂದು (ಕರ್ನಾಟಕದಲ್ಲಿ 14 ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ).
  ಒಂದು ಕಾಲದಲ್ಲಿ ಎರಡು ಬಾರಿ ಆನಂದಪುರಂ ತಾಲ್ಲೂಕ್ ಕೇಂದ್ರ ಆಗಿತ್ತು, ಸಾಗರ ತಾಲೂಕಿನ ಮೊದಲ ನ್ಯಾಯಾಲಯ ಪ್ರಾರಂಭ ಆಗಿದ್ದು ಆನಂದಪುರಂನ ಯಡೇಹಳ್ಳಿ ಪ್ರವಾಸಿ ಮಂದಿರದಲ್ಲಿ.
 ಈಗ ಈ ಎರೆಡೂ ರಾಷ್ಟ್ರೀಯ ಹೆದ್ದಾರಿ ಸಂದಿಸುವ ಸ್ಥಳದಲ್ಲಿ ಬೃಹತ್ ಪ್ಲೈಒವರ್ ನಿಮಾ೯ಣ, ರೈಲು ನಿಲ್ದಾಣ, ಕೃಷಿ ವಿಶ್ವವಿದ್ಯಾಲಯಗಳಿರುವ ನಮ್ಮ ಊರು ಮುಂದಿನ ದಿನಗಳಲ್ಲಿ ದೊಡ್ಡ ನಗರವಾಗಿ ಬದಲಾಗಲಿದೆ.
  ರಾಷ್ಟ್ರೀಯ ಹೆದ್ದಾರಿ ಅಲ್ಲಿ ಹೋಗುತ್ತೆ.... ಇಲ್ಲಿ ಹೋಗುತ್ತದೆ ಎಂಬ ಗಾಳಿ ಸುದ್ದಿಗೆ ವಿರಾಮ ನೀಡುವಂತೆ ಸಂಬಂದ ಪಟ್ಟ ಇಲಾಖೆ ಅಂತಿಮ DPR ಪ್ರಕಟಿಸಿದೆ.
(ನಾಳೆ ತುಪ್ಪೂರು - ಚೋರಡಿ- ಕುಂಸಿ - ಅಯನೂರು ಮಾಹಿತಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...