Blog number 2156. ನನ್ನ ತಂದೆಯ ಆಪ್ತ ಗೆಳೆಯರು ಸಿರಿಲಣ್ಣ, ಇವರಿಬ್ಬರೂ ಆನಂದಪುರಂ ವಿಲೇಜ್ ಪಂಬಾಯಿತ ಸದಸ್ಯರಾಗಿದ್ದಾಗ ನಮ್ಮ ಊರಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿಸಿದ್ದರು ಅದರಲ್ಲಿ ಡುಮಿಂಗಣ್ಣನಿಗೆ ಜಾಗ ಮನೆ ಮಾಡಿಸುವಾಗ ಇವರಿಗಾದ ಅನುಭವಗಳು ಕೇಳಿ
#ಆನಂದಪುರಂ_ವಿಲೇಜ್_ಪಂಚಾಯಿತಿ_ಮಾಜಿ_ಸದಸ್ಯರಾದ
#ಸಿರಿಲಣ್ಣ_ನನ್ನ_ತಂದೆಯ_ಗೆಳೆಯರು_ಬಂದಿದ್ದರು
#ನೆನಪಿಗೆ_ಬಂದ_ಡುಮಿಂಗಣ್ಣರ_ಜನತಾ_ಮನೆ_ಕಥೆ
#ತಿರುಮಲಾಚಾರ್_ಅಧ್ಯಕ್ಷರಾಗಿದ್ದರು.
#ಟಿಪ್_ಟಾಪ್_ಇಬ್ರಾಹಿಂ_ಸಾಹೇಬರು_ಉಪಾಧ್ಯಕ್ಷರಾಗಿದ್ದರು
#ಎಲ್_ಟಿ_ತಿಮ್ಮಪ್ಪ_ಹೆಗ್ಗಡೆ_ಶಾಸಕರಾಗಿದ್ದರು.
#ಮಲಂದೂರಿನ_ಶಿವಾಜಿ_ರಾವ್_ಗುತ್ತಿಗೆದಾರರು.
https://youtu.be/HY0-pdL9whc?feature=shared.
ಸಿರಿಲಣ್ಣರ ನಿಜ ನಾಮ ಸಿರಿಲ್ ಡಿಕಾಸ್ಟಾ ಇವರು ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಬೆಣ್ಣೆ ಕುದ್ರು ಮೂಲದವರು.
ಆನಂದಪುರಂನ ಪ್ರಖ್ಯಾತ ಖಾಲಿ ದೋಸೆ ಹೋಟೆಲ್ ಕಾಮತ್ ಹೋಟೆಲ್ ಪಕ್ಕ ಇವರ ಸೈಕಲ್ ಶಾಪ್ ತುಂಬಾ ಪ್ರಸಿದ್ದಿ ಪಡೆದಿತ್ತು.
1972 ರಲ್ಲಿ ಆನಂದಪುರಂ ವಿಲೇಜ್ ಪಂಚಾಯಿತಿಗೆ ಈಗಿನ ಯಡೇಹಳ್ಳಿ ಆಚಾಪುರ ಗ್ರಾಮ ಪಂಚಾಯಿತಿಗಳು ಸೇರಿತ್ತು ಆ ಚುನಾವಣೆಯಲ್ಲಿ ಸಿರಿಲಣ್ಣ ಆನಂದಪುರಂ ಪೇಟೆ ಕ್ಷೇತ್ರದಿಂದ ಆಯ್ಕೆ ಆಗಿದ್ದರು.
ಅದೇ ಚುನಾವಣೆಯಲ್ಲಿ ನನ್ನ ತಂದೆ S. ಕೃಷ್ಣಪ್ಪನವರು ಯಡೇಹಳ್ಳಿ - ತಾವರೆಹಳ್ಳಿ - ಕೊರಲಿಕೊಪ್ಪ-ಗೇರುಬೀಸು ಸೇರಿದ ದೊಡ್ಡ ಕ್ಷೇತ್ರದಿಂದ ನನ್ನ ತಂದೆ ಅತಿ ಹೆಚ್ಚು ಮತಗಳಿಂದ ಆರಿಸಿ ಬಂದಿದ್ದರು.
ಆವಾಗಿನ ಆನಂದಪುರಂ ವಿಲೇಜ್ ಪಂಚಾಯಿತಿ ಅಧ್ಯಕ್ಷರು ತಿರುಮಲಾಚಾರ್ ಅಯ್ಯಂಗಾರ್ ಮತ್ತು ಉಪಾಧ್ಯಕ್ಷರಾಗಿ ಆಚಾಪುರದಿಂದ ಆಯ್ಕೆ ಆಗಿದ್ದ ಟಿಪ್ ಟಾಪ್ ಇಬ್ರಾಹಿಂ ಸಾಹೇಬರು ಇದ್ದರು.
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಎಲ್.ಟಿ.ತಿಮ್ಮಪ್ಪ ಹೆಗ್ಗಡೆಯವರು ಅವರಿಗೆ ನಿಷ್ಟಾವಂತರಾಗಿದ್ದ ಆನಂದಪುರಂ ವಿಲೇಜ್ ಪಂಚಾಯಿತಿ ಸದಸ್ಯರಾಗಿದ್ದ ಸಿರಿಲಣ್ಣ ಮತ್ತು ನನ್ನ ತಂದೆಗೆ ಅವರ ಬೆಂಬಲ ಜಾಸ್ತಿ ಇತ್ತು ಆದ್ದರಿಂದ ಆ ಕಾಲದಲ್ಲಿ ಗೇರುಬೀಸಿಗೆ ಸೇತುವೆ, ಬಂಟಮನೆ ಶಾಲೆಗಳು ಮಂಜೂರಾಗಿತ್ತು.
ನಮ್ಮ ಊರು ಯಡೇಹಳ್ಳಿ ನಾಲ್ಕು ರಸ್ತೆ ಸೇರುವ ಊರು ಶಿವಮೊಗ್ಗ -ಸಾಗರ, ಬಟ್ಟೆಮಲ್ಲಪ್ಪ ಮತ್ತು ರಿಪ್ಪನ್ ಪೇಟೆಯಿಂದ ಬರುವ ರಸ್ತೆ ಯಡೇಹಳ್ಳಿ ವೃತ್ತದಲ್ಲಿ ಸೇರುತ್ತದೆ ಆಗ ಇಲ್ಲಿ ವಾಸವಾಗಿದ್ದವರಿಗೆ ಹಕ್ಕುಪತ್ರ ಇರಲಿಲ್ಲ ಇವರಿಬ್ಬರೂ ಸೇರಿ ಎಲ್ಲಾ ಮನೆಗಳಿಗೂ ಹಕ್ಕು ಪತ್ರ ಕೊಡಿಸಿದ್ದರು ಮತ್ತು ಮುಖ್ಯ ರಸ್ತೆಯ ಖಾಲಿ ಜಾಗಗಳನ್ನ ನಿವೇಶನ ರಹಿತರಿಗೆ ಮಂಜೂರು ಮಾಡಿಸಿದ್ದರು.
ನನ್ನ ಬಾಲ್ಯದ ರೋಲ್ ಮಾಡೆಲ್ ಆಗಿದ್ದ ಡುಮಿಂಗಣ್ಣ (ಡುಮಿಂಗ್ ರೆಬೆಲೋ) ರ ತಂದೆ ಮನೆ ಯಡೇಹಳ್ಳಿ ವೃತ್ತದ ಮೈಸೂರು ರಾಜರ ಸರ್ಕಾರದಲ್ಲಿ ನಿರ್ಮಿಸಿದ್ದ ಬಾವಿ ಹಿಂಬಾಗದಲ್ಲಿ ಬಹಳ ವರ್ಷಗಳಿಂದ ಇತ್ತು ನಂತರ ಈ ಜಾಗ ನಮ್ಮ ಊರಿನ ಗಾರ್ಡರಮ್ಮನವರದ್ದೆಂದು ಅವರ ಸಾಕು ಮಗನಾಗಿದ್ದ ಸಾಗರ ಕೆ ಇ ಬಿ ಇಲಾಖೆ ಕಛೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಜಾನ್ ಡಿಸೋಜ ಮನೆ ತೆರವು ಮಾಡಿಸಿದ್ದರಿಂದ ಡುಮಿಂಗಣ್ಣ ಮನೆ ಇಲ್ಲದಿದ್ದರಿಂದ ಸಾಗರ ಪೇಟೆಯಲ್ಲಿ ಗಾರೆ ಕೆಲಸದ ತಂಡ ಸೇರಿದ್ದರು.
ಆದ್ದರಿಂದ ಡುಮಿಂಗಣ್ಣರಿಗೆ ಚರ್ಚ್ ಸಮೀಪ ನಿವೇಶನ ಮಂಜೂರು ಮಾಡಿಸಿದ್ದರು ಆದರೆ ಸಾಗರ ಸೇರಿದ್ದ ಡುಮಿಂಗಣ್ಣ ಮನೆ ಜಾಗ ಸಮತಟ್ಟು ಮಾಡಲು ಬೇಲಿ ಹಾಕಲು ಬರಲೇ ಇಲ್ಲ ಆಗ ಆ ಕೆಲಸ ನನ್ನ ತಂದೆ ಮತ್ತು ಸಿರಿಲಣ್ಣ ನೆರವೇರಿಸಿದರು.
ನಂತರ ಎಲ್.ಟಿ.ತಿಮ್ಮಪ್ಪ ಹೆಗ್ಗಡೆಯವರಿಂದ 50 ಜನತಾ ಮನೆಗಳು ಮಂಜೂರು ಮಾಡಿ ತಂದು ಯಡೇಹಳ್ಳಿ ಮತ್ತು ಕೊರಲಿಕೊಪ್ಪದಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಿದರು ಆಗ ಒಂದು ಮನೆಗೆ ಎರೆಡು ಸಾವಿರ ರೂಪಾಯಿ ಸರ್ಕಾರ ನೀಡುತ್ತಿತ್ತು.
ಆಗ ಜನತಾ ಮನೆಗಳ ನಿರ್ಮಾಣದ ಗುತ್ತಿಗೆದಾರ ಮಲಂದೂರಿನ ಶಿವಾಜಿ ರಾವ್ ಅವರು ಎತ್ತರದಲ್ಲಿ ತುಂಬಾ ಗಿಡ್ಡ ವ್ಯಕ್ತಿ ಕಚ್ಚೆ ಪಂಜೆ ಜುಬ್ಬಾ ಮತ್ತು ಕಪ್ಪು ಟೋಪಿದಾರಿ ಶಿಸ್ತಿನ ಮನುಷ್ಯ.
ಜನತಾ ಮನೆಗೆ ಬೇಕಾದ ಪಕಾಸಿ ರೀಪು ರಿಪ್ಪನಪೇಟಿಯ ಪದ್ಮನಾಭ ಆಚಾರ್ ಅವರ ಗುಂಡಿ ಪರ್ಮಿಟ್ ಸಾಮಿಲ್ ನಿಂದ ಜನತಾ ಮನೆಗಳಿಗೆ ಸರಬರಾಜಾಗಿತ್ತು.
ಜನತಾ ಮನೆ ಪೌಂಡೇಶನ್ ಜಂಬಿಟ್ಟಿಗೆ ಕಲ್ಲಿನಿಂದ ಶಿವಾಜಿರಾವ್ ನಿರ್ಮಿಸುತ್ತಿದ್ದರು ಫಲಾನುಭವಿಗಳು ಪೌಂಡೇಶನಗೆ ಮಣ್ಣು ತುಂಬಿ ನೀರಿಂದ ಕೆಸರು ಕಲಿಸಬೇಕಾಗಿತ್ತು ಆದರೆ ನಮ್ಮ ಡುಮಿಂಗಣ್ಣ ಆ ಕೆಲಸವೂ ಮಾಡಲಿಲ್ಲ ಅದು ಇವರಿಬ್ಬರ ಹೆಗಲಿಗೇ ಬಿತ್ತು.
ನಂತರ ಫಲಾನುಭವಿ ಸಾಗರದ ಬಿಡಿಓ ಕಛೇರಿಯಲ್ಲಿ ಸಹಿ ಮಾಡಿದರೆ ಗುತ್ತಿಗೆದಾರರಿಗೆ ಹಣ ಸಿಗುತ್ತದೆ ಆದರೆ ಡುಮಿಂಗಣ್ಣ ಅವತ್ತಿನ ಕೂಲಿ ನೀಡದಿದ್ದರೆ ಸಹಿ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು.
Comments
Post a Comment