Blog number 2166. ಆನಂದಪುರಂ ಶ್ರೀಮತಿ ಕನಕಮ್ಮಳ್ ಆಸ್ಪತ್ರೆಗೆ ಪ್ರಥಮ ಕ್ಷ-ಕಿರಣ ಯಂತ್ರ ಜಿಲ್ಲಾ ಪಂಚಾಯತ್ ನಿಂದ ಮಂಜೂರು ಮಾಡಿಸಿ ಶಿವಮೊಗ್ಗ ಲೋಕಸಭಾ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ ಉದ್ಘಾಟನೆ ಮಾಡಿಸಿದ ನನ್ನ ಸಾದನೆಯ ನೆನಪು
#ಲೋಕಸಭಾ_ಸದಸ್ಯರಾಗಿದ್ದ_ಬಂಗಾರಪ್ಪರಿಂದಲೇ_ಕ್ಷ_ಕಿರಣ_ಯಂತ್ರ
#ಉದ್ಘಾಟನೆ_ಮಾಡಿಸ_ಬೇಕೆಂಬ_ನನ್ನ_ಶಪತ
#ದಿನಾಂಕ_19_ಆಗಸ್ಟ್_1996ರಂದು_ಕಾರ್ಯರೂಪಕ್ಕೆ
#ಇದು_ಆನಂದಪುರಂ_ಕನಕಮ್ಮಳ್_ಆಸ್ಪತ್ರೆ_ಇತಿಹಾಸದ_ಮೊದಲ_ಕ್ಷಕಿರಣ_ಯಂತ್ರ
#ಸಾಗರ_ತಾಲ್ಲೂಕಿನ_ಕೃಷಿ_ಇಲಾಖೆಯ_ಕೋಟ್ಯಾಂತರ_ರೂಪಯಿ
#ಅವ್ಯವಹಾರ_ಬಯಲು_ಮಾಡಿ_ಆಗಿನ_ಕೃಷಿ_ಮಂತ್ರಿ_ಬೈರೇಗೌಡರಿಂದ
#ತನಿಖೆ_ಮಾಡಿಸಿ_7ಜನ_ಕೃಷಿ_ಇಲಾಖೆ_ಅಧಿಕಾರಿಗಳ_ಜೈಲಿಗೆ_ಕಳಿಸಿದ್ದರಿಂದ
#ಜಿಲ್ಲಾ_ಪಂಚಾಯಿತಿ_ಸದಸ್ಯನಾದ_ನಾನು_ಮತ್ತು_ತಾಲೂಕು_ಪಂಚಾಯಿತಿ
#ಅಧ್ಯಕ್ಷ_ಬೀಮನೇರಿ_ಶಿವಪ್ಪರನ್ನ_ಕಾಗೋಡು_ಬಣ_ದೂರ_ಇಟ್ಟಿದ್ದ_ಕಾಲವದು.
19 ಆಗಸ್ಟ್ 1996ರಂದು ನಮಗೆಲ್ಲ ಸಂಭ್ರಮದ ದಿನವಾಗಿತ್ತು ಕಾರಣ ಅವತ್ತು ಆನಂದಪುರಂನ ಶ್ರೀಮತಿ ಕನಕಮ್ಮಳ್ ಆಸ್ಪತ್ರೆಗೆ ಕ್ಷ-ಕಿರಣ ಯಂತ್ರ ಉದ್ಘಾಟನೆ ಮಾಜಿ ಮುಖ್ಯಮಂತ್ರಿಗಳು ಮತ್ತು ಶಿವಮೊಗ್ಗ ಲೋಕ ಸಭಾ ಸದಸ್ಯರಾಗಿದ್ದ ಬಂಗಾರಪ್ಪನವರಿಂದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನಾನು ಈ ಆಸ್ಪತ್ರೆ ಅಭಿವೃದ್ದಿ ಸಮಿತಿ ಅಧ್ಯಕ್ಷನೂ ಆಗಿರುವುದರಿಂದ ಈ ಆಸ್ಪತ್ರೆಯಲ್ಲಿ ಎಕ್ಸ್ ರೇ ಯಂತ್ರ ಇಲ್ಲದ್ದರಿಂದ ಸ್ಥಳಿಯರಿಗೆ ಸಣ್ಣ ಪುಟ್ಟ ಮೂಳೆ ಮುರಿತವಾದರೆ ಸಾಗರ ಅಥವ ಶಿವಮೊಗ್ಗಕ್ಕೆ ಎಕ್ಸರೇ ತೆಗೆಸಲು ಹೋಗಬೇಕಾಗಿತ್ತು.
ಆನಂದಪುರಂನ ಆಸ್ಪತ್ರೆ ವೈದ್ಯರು ಎಕ್ಸರೇ ಯಂತ್ರ ಇದ್ದಿದ್ದರೆ ನಾವೇ ಮೂಳೆ ಮುರಿತಕ್ಕೆ ಬ್ಯಾಂಡೇಜು ಮಾಡಿ ಚಿಕಿತ್ಸೆ ನೀಡುವುದಾಗಿ ಹೇಳುತ್ತಿದ್ದರಿಂದ ನನಗೆ ನಮ್ಮ ಊರ ಆಸ್ಪತ್ರೆಗೆ ಎಕ್ಸ್ ರೇ ಯಂತ್ರ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಿಂದ ಮಂಜೂರು ಮಾಡಿಸಲು ಪ್ರಯತ್ನಿಸಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಲ್ಲಿಯವರೆಗೆ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಎಕ್ಸ್ ರೇ ಯಂತ್ರ ಖರೀದಿಸಿರಲಿಲ್ಲ ಮತ್ತು ಆನಂದಪುರಂ ಆಸ್ಪತ್ರೆ ಇತಿಹಾಸದಲ್ಲಿ ಇದು ಮೊದಲ ಎಕ್ಸರೇ ಯಂತ್ರ ಅಂತ ಸಿಬ್ಬಂದಿಗಳು ತಿಳಿಸಿದ್ದರು.
ಅವತ್ತಿನ ಬೆಲೆ ಅದಕ್ಕೆ 11 ಲಕ್ಷ ರೂಪಾಯಿ ಆಗಿತ್ತು ಆಗಿನ 1995ರ ಜಿಲ್ಲಾ ಪಂಚಾಯತ್ ನಲ್ಲಿ ಈಗಿನಷ್ಟು ಅನುದಾನ ಇಲ್ಲದ ಕಾಲದಲ್ಲಿ ಅಧಿಕಾರಸ್ಥರನ್ನೆಲ್ಲ ಒಪ್ಪಿಸಿ ಎಕ್ಸ್ ರೇ ಯಂತ್ರ ಆನಂದಪುರಂ ಕನಕಮ್ಮಳ್ ಆಸ್ಪತ್ರೆ ತಲುಪಿತು.
ಈ ಆಸ್ಪತ್ರೆ ವಿದ್ಯಾಮಂತ್ರಿ ಮತ್ತು ಸಂಸದರೂ ಆಗಿದ್ದ ಎ.ಆರ್. ಬದರಿ ನಾರಾಯಣ ಅಯ್ಯಂಗಾರ್ ಅವರ ತಾಯಿ ಶ್ರೀಮತಿ ಕನಕಮ್ಮಾಳ್ ಸ್ಮರಣಾರ್ಥ ಅವರ ಹೆಸರಲ್ಲಿ ಅವರ ತಂದೆ ಕೊಡುಗೈ ದಾನಿ ರಾಮಕೃಷ್ಣ ಅಯ್ಯಂಗಾರರು ಆನಂದಪುರಂ ನಿವಾಸಿಗಳಿಗೆ ಅವರ ಸ್ವಂತ ಆರು ಎಕರೆ ಜಾಗದಲ್ಲಿ ನಿರ್ಮಿಸಿಕೊಟ್ಟ ಆಸ್ಪತ್ರೆ.
ನಾವೆಲ್ಲ ಯುವ ಜನಪ್ರತಿನಿದಿಗಳು ಬಂಗಾರಪ್ಪರನ್ನ ಸ್ಟಾರ್ ಐಕಾನ್ ಆಗಿ ಸ್ವೀಕರಿಸಿದ್ದರಿಂದ ಆ ವರ್ಷ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಂಗಾರಪ್ಪರ ಪರ ಕ್ಯಾಂಪೇನ್ ಮಾಡಿದ್ದೆವು ಆದ್ದರಿಂದ ನಮ್ಮ ಪ್ರೀತಿಯ ಲೋಕಸಭಾ ಸದಸ್ಯರಾದ ಬಂಗಾರಪ್ಪರಿಂದಲೇ ಎಕ್ಸರೇ ಯಂತ್ರ ಉದ್ಫಾಟನೆ ನಿಗದಿ ಮಾಡಿದ್ದೆ.
ಪ್ರೋಟೋ ಕಾಲ್ ಪ್ರಕಾರ ಸಾಗರದ ಶಾಸಕರಾದ ಬಂಗಾರಪ್ಪರ ಪಾಳೆಯಕ್ಕೆ ಜಿಗಿಯುವ ಮುನ್ನ ನನ್ನ ಹಳೆಯ ರಾಜಕೀಯ ನೇತಾರರಾದ ಕಾಗೋಡು ತಿಮ್ಮಪ್ಪ ಮತ್ತು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ತಿಪ್ಪಾ ನಾಯಕ್, ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಭೀಮನೇರಿ ಶಿವಪ್ಪ ಭಾಗವಹಿಸಿದ್ದರು.
ಸಾಗರ ತಾಲೂಕಿನಲ್ಲಿ ನಡೆದ ಕೃಷಿ ಇಲಾಖೆಯ ಕೋಟ್ಯಾಂತರ ರೂಪಾಯಿ ಹಗರಣ ಆಗಿನ ಕೃಷಿ ಸಚಿವ ಬೈರೇಗೌಡರನ್ನ ಕರೆತಂದು ಏಳು ಜನ ಕೃಷಿ ಅಧಿಕಾರಿಗಳನ್ನ ಜೈಲಿಗೆ ಕಳಿಸಿದ್ದರಿಂದ ಸಾಗರ ತಾಲೂಕಿನ ಮುಖಂಡರುಗಳು ನನಗೆ ಮತ್ತು ಬೀಮನೇರಿ ಶಿವಪ್ಪನರನ್ನ ಬ್ಲಾಕ್ ಲೀಸ್ಟ್ ಗೆ ಸೇರಿಸಿದ್ದ ಕಾಲವದು.
ಆ ನಂತರ ಆನಂದಪುರಂ ಆಸ್ಪತ್ರೆಯಲ್ಲಿ ಮೂಳೆ ಮುರಿದವರಿಗೆ ಎಕ್ಸ್ ರೇ ತೆಗೆದು ಬ್ಯಾಂಡೇಜು ಹಾಕುವ ಚಿಕಿತ್ಸೆ ಆರೋಗ್ಯ ಸಿಬ್ಬಂದಿ ಮುಂದುವರಿಸಿದ್ದರು.
ಈಗ ಆ ಯಂತ್ರ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ಹಳೆಯ ಪೋಟೋಗಳು ಆದಿನದ ನೆನಪು ಮಾಡಿಕೊಳ್ಳುವಂತೆ ಮಾಡಿತು.
Comments
Post a Comment