#ಸ್ವಾಮಿರಾವ್_ಮಾತುಕಥೆ_ಭಾಗ_6.
#ಅವರ_ಜೀವನ_ವೃತ್ತಾಂತದ_ನಾನು_ಹೇಳುವುದೆಲ್ಲ_ಸತ್ಯ
#ಪ್ರತಿಯೊಬ್ಬರೂ_ಓದಲೇ_ಬೇಕು.
#ಹಿಂದುಳಿದ_ವರ್ಗದ_ಅಭ್ಯರ್ಥಿ_1962ರಲ್ಲಿ_ಮೇಲ್ವರ್ಗದ_ಮನೆಯಲ್ಲಿ
#ಲೋಟ_ತಟ್ಟೆ_ತೋಳೆದು_ಇಟ್ಟು_ಬರಬೇಕಿತ್ತು.
#ದೀವರ_ಸಮಾಜ_ಅಭಿವೃದ್ಧಿಗಾಗಿ_ಸ್ವಾಮಿರಾವ್_ಕುಟುಂಬದ_ಕೊಡುಗೆ
#ಸ್ವಾಮಿರಾವ್_ದೀವರ_ಸಮಾಜಕ್ಕೆ_ಏನು_ಮಾಡಿದ್ದಾರೆ_ಎಂಬ_ಪ್ರಶ್ನೆಗೆ_ಉತ್ತರ
#ನಾನು_ಹೇಳುವುದೆಲ್ಲ_ಸತ್ಯ_ಪುಸ್ತಕದಲ್ಲಿ_ನಮೂದಿಸಿದ್ದಾರೆ
#ಪುಸ್ತಕ_ಬೇಕಾದವರು_ಹೊಸನಗರದ_ಪತ್ರಕರ್ತ
#ಶ್ರೀಕಂಠ_ಅವರ_ಫೋನ್_ನಂಬರ್_9483016851_ಸಂಪರ್ಕಿಸಿ
https://youtu.be/VV7Wq-D2Xek?feature=shared
ಹೊಸನಗರದ ಮಾಜಿ ಶಾಸಕರಾದ ಸಜ್ಜನ ರಾಜ ಕಾರಣಿ 94 ನೆ ತಮ್ಮ ವಯಸ್ಸಿನಲ್ಲಿ ತಮ್ಮ ಜೀವನ ವೃತ್ತಾಂತದಲ್ಲಿ ಇದನ್ನೆಲ್ಲ ದಾಖಲಿಸಿದ್ದಾರೆ ನೋಡಿ......
"1962ರಲ್ಲಿ ಚುನಾವಣಾ ಪ್ರಚಾರದ ವೇಳೆ ಮನೆ ಮನೆಗೆ ಭೇಟಿ ನನಗೆ ಮಾಮೂಲಾಗಿತ್ತು....
ಉತ್ತಮ ಜನಾಂಗದ ಮನೆಯಲ್ಲಿ ಕಾಪಿ ಕುಡಿದ ಬಳಿಕ ಆ ಲೋಟ ಹಿಂದುಳಿದ ವರ್ಗದವ ತೊಳೆದಿಟ್ಟು ಬರುವ ಪದ್ದತಿ ಅಂದು ರೂಡಿಯಲ್ಲಿತ್ತು....
ಊಟ ಮಾಡಿದ ಮೇಲೆ ಬಾಳೆ ಎಲೆ ತೆಗೆದು ಗೋಮಯ ಹಾಕಿ ಸಾರಿಸಿದ್ದೂ ಸ್ವಾಮಿ ರಾವ್ ಬರೆದಿದ್ದಾರೆ.
ಕಾಗೋಡು ಚಳುವಳಿಯಲ್ಲಿ ನಾನು ಮತ್ತು ಕಾಗೋಡು ತಿಮ್ಮಪ್ಪ ಭಾಗವಹಿಸಲಿಲ್ಲ ಕಾಗೋಡು ಚಳವಳಿ ನೇತಾರ ಹೆಚ್.ಗಣಪತಿಯಪ್ಪ ಮಾತ್ರ ಇದನ್ನು ಗಣಪತಿಯಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅವರ ಸಮ್ಮುಖದಲ್ಲಿಯೇ ಪ್ರಸ್ತಾಪಿಸುವ ಮೂಲಕ ಸೃಷ್ಟೀಕರಿಸಿದ್ದೇನೆ.
ನನ್ನ ತಂದೆ ಕುಂಬತ್ತಿ ಬೈರನಾಯಕರು ಕಾಗೋಡು ತಿಮ್ಮಪ್ಪ ಅವರನ್ನ ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಆ ಕಾಲದಲ್ಲಿ ಹದಿನೈದು ರೂಪಾಯಿ ಧನ ಸಹಾಯ ಮಾಡಿದ್ದರೆಂಬ ಅವರ ಮಾತುಗಳು ನನಗೆ ಈಗಲೂ ನೆನಪಿನಲ್ಲಿದೆ. "....
Comments
Post a Comment