Blog number 2199. ಕೆಳದಿ ಅರಸರ ಮೂರನೆ ರಾಜದಾನಿ ಬಿದನೂರು ನಗರದ ಐತಿಹಾಸಿಕ ಕೋಟೆಯ ಇಂಚಿಂಚು ವಿವರಗಳನ್ನ ಡಿಜಿಟಲ್ ಮಾಧ್ಯಮದ 10 ಕಂತುಗಳಲ್ಲಿ ಖ್ಯಾತ ಇತಿಹಾಸಕಾರ ಅಂಬ್ರಯ್ಯ ಮಠ ವಿವರಿಸಿದ್ದಾರೆ ನೋಡಿ.
#ನಮ್ಮ_ಜಿಲ್ಲೆಯ_ಹೆಮ್ಮೆಯ
#ಬಿದನೂರು_ಕೋಟೆ_ನೋಡ_ಬನ್ನಿ
#ಸಾಧ್ಯವಾಗದಿದ್ದರೆ_ಡಿಜಿಟಲ್_ಮಾಧ್ಯಮದ
#ಈ_ಸರಣಿಗಳನ್ನ_ನೋಡಿ_50_ಎಕರೆ_ವಿಸ್ತಾರದ
#ಕೋಟೆಯ_ಇಂಚಿಂಚು_ಜಾಗದ_ಮಾಹಿತಿ
#ಖ್ಯಾತ_ಇತಿಹಾಸ_ತಜ್ಞ_ಅಂಬ್ರಯ್ಯ_ಮಠ_ವಿವರಿಸುತ್ತಿದ್ದಾರೆ
#ಬಿದನೂರು_ನಗರ_ಕೆಳದಿ_ರಾಜರ_ಮೂರನೆ_ರಾಜದಾನಿ
#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ
#ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ_2012ರಲ್ಲಿ_ಪ್ರಕಟಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜನಪ್ರತಿನಿದಿಗಳು ಹೈದ್ರಾಬಾದ್ ಸಮೀಪದ ಗೋಲ್ಕೊಂಡ ಕೋಟೆಗೆ ಒಮ್ಮೆ ಹೋಗಿ ಬರಬೇಕು 2000 ರಿಂದ 2004ರಲ್ಲಿ ಅಲ್ಲಿನ ಮುಖ್ಯಮಂತ್ರಿ ಅದನ್ನು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿ ಮಾಡಿದಾರೆ.
ಅಲ್ಲಿಗೆ ರಸ್ತೆ, ಪ್ರವಾಸಿಗಳಿಗೆ ಕುಡಿಯುವ ನೀರು ಶೌಚಾಲಯ ವ್ಯವಸ್ತೆ, ಪ್ರತಿ ಎರಡು ಗಂಟೆಗೆ ಆ ಕೋಟೆಯ ಇತಿಹಾಸ ವಿವರಿಸುವ ಸಾಕ್ಷಾಚಿತ್ರ, ರಾತ್ರಿ ವಿದ್ಯುತ್ ಬೆಳಕಿನ ಪ್ರದರ್ಶನ, ಪರಿಣಿತ ಗೈಡ್ ವ್ಯವಸ್ತೆ ಮಾಡಿದ್ದಾರೆ ಅಂತಹ ವ್ಯವಸ್ಥೆ ಬಿದನೂರು ನಗರ ಕೋಟೆಗೆ ಮಾಡಲು ಸಾಧ್ಯವಿದೆ ಜಿಲ್ಲೆಯ ಜನಪ್ರತಿನಿದಿಗಳಿಗೆ ಸಲಹೆ ನೀಡಲು ಸಾಧ್ಯವಿರುವವರು ಅವರಿಗೆ ತಿಳಿಸಬೇಕು.
ಜಿಲ್ಲೆಯ ಉತ್ಸಾಹಿ ಇತಿಹಾಸ ಸಂಶೋದಕರುಗಳು, ಯೂಟ್ಯೂಬರ್ಸ್ಗಳು ಡಿಜಿಟಲ್ ಮಾಧ್ಯಮದ ಈ ಕಂತುಗಳ ಪ್ರೇರಣೆ ಪಡೆದು ಮುಂದಿನ ದಿನಗಳಲ್ಲಿ ಅವರ ಚಾನಲ್ ಗಳಲ್ಲೂ ಶಿವಮೊಗ್ಗ ಜಿಲ್ಲೆಯ ಇತಿಹಾಸ ದಾಖಲಿಸಲಿ ಎಂದು ಆಶಿಸುತ್ತೇನೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಟಿತ ಇತಿಹಾಸ ಪ್ರಸಿದ್ಧ ಕೆಳದಿ ರಾಜರ ಮೂರನೇ ರಾಜದಾನಿ ಬಿದನೂರು ನಗರದ ಕೋಟೆಯ ನೋಡ ಬನ್ನಿ...
1)https://youtu.be/HZkuDH2yRVM?si=R3MKx6xmrnUhGajk.
ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ #ಅಂಬ್ರಯ್ಯಮಠ 2012 ರಲ್ಲಿ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ,ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವ ಆಸಕ್ತಿ ಇದ್ದವರು ಓದಲೇ ಬೇಕು.
ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ ಪ್ರೇಮ ವಿವಾಹ ಇದಕ್ಕೆ ಕಾರಣವೇ? ದುರಂತ ನಾಯಕಿ ಚಂಪಕಾರಾಣಿಯಿಂದ ಹೀಗಾಯಿತೆ? ಎಂಬ ಬಗ್ಗೆ ಮುಂದಿನ ದಿನದಲ್ಲಿ ಸಂಶೋದನೆ ಆಗಬೇಕು.
ಮುಂದಿನ ದಿನದಲ್ಲಿ ಇತಿಹಾಸ ಸಂಶೋದಕರು, ಶಾಲಾ ಕಾಲೇಜುಗಳಲ್ಲಿ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ವಿಷಯ ತಿಳಿಸಲು ಈ ಪುಸ್ತಕ ಪ್ರೇರಣೆ ಆಗಬೇಕು.
ಇಟಲಿಯ ಪ್ರವಾಸಿ ಡಲ್ಲೊ ವಿಲ್ಲಾ ಇಕ್ಕೇರಿಯಲ್ಲಿ ವೆಂಕಟಪ್ಪ ನಾಯಕರ ಬೇಟಿ ಮಾಡಿದ ಬಗ್ಗೆ ಬರೆದ ದಾಖಲೆ ಈ ಪುಸ್ತಕದಲ್ಲಿದೆ, ರಾಣಿ ಅಬ್ಬಕ್ಕ, ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ, ಬಿದನೂರಿನ ರಾಣಿ ಅಮ್ಮಿದೇವಮ್ಮ ವೆಂಕಟಪ್ಪ ನಾಯಕರಿಂದ ಸಹಾಯ ಕೇಳಿ ರಾಜ್ಯ ಕಳೆದುಕೊಂಡ ಕಥೆ ಅವರೇ ಪಾತ್ರಗಳಾಗಿ ಈ ಕಾದಂಬರಿಯಲ್ಲಿ ಅಂಬ್ರಯ್ಯ ಮಠರು ಸ್ವಾರಸ್ಯವಾಗಿ ಹೇಳಿಸಿದ್ದಾರೆ.
ಅದೇ ರೀತಿ ಪಟ್ಟದ ರಾಣಿ ಭದ್ರಮ್ಮಾಜಿ, ಚಂಪಕಾ ಮತ್ತು ಶಿವಪ್ಪ ನಾಯಕರಿಂದಲೂ ಇತಿಹಾಸ ನಮಗೆ ಮನನ ಮಾಡುವಂತೆ ಬರೆದಿದ್ದಾರೆ.
ಅನೇಕ ಬರಹ ಕಾದಂಬರಿಗಳನ್ನು ಬರೆದ ಅಂಬ್ರಯ್ಯ ಮಠರು ತಮ್ಮ ಸಂಶೋದನೆಗಾಗಿಯೇ ಕೆಳದಿ ರಾಜರ ಹಾಲಿ ಪಳಯುಳಿಕೆ ಆಗಿರುವ ರಾಜದಾನಿ ಬಿದನೂರು ನಗರದಲ್ಲಿ ನೆಲೆಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಪುಸ್ತಕಕ್ಕಾಗಿ ಅಂಬ್ರಯ್ಯ ಮಠರ 94804 02712 ವಾಟ್ಸ್ ಪ್ ನಂಬರ್ ಗೆ ಸಂಪಕಿ೯ಸಬಹುದು.
Comments
Post a Comment