Blog number 2206. ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡುಗೋಡಿನ ಸಮೀಪ ಇರುವ ವರಾಹಿ ನದಿ ಜಲಪಾತ ಏಷ್ಯಾ ಖಂಡದ ಎರಡನೆ ಮತ್ತು ಭಾರತದ ಅತ್ಯಂತ ಎತ್ತರದ ಜಲಪಾತ
#ಖ್ಯಾತ_ವೈಚಾರಿಕ_ಲೇಖಕ_ಮುಷ್ತಾಕ್_ಹೆನ್ನಾಬೈಲು
#ಅವರು_ಕುಂಚಿಕಲ್_ಪಾಲ್ಸ್_ಬಗ್ಗೆ_ಬರೆಯಬೇಡಿ
#ಎಂದವರಿಗೆ_ನೀಡಿದ_ಉತ್ತರ
#ನಾವೆಲ್ಲ_ಕುಂಚಿಕಲ್_ಪಾಲ್ಸ್_ತಲೆಯ_ಕಡೆ_ಇದ್ದರೆ
#ಮುಷ್ತಾಕ್_ಹೆನ್ನಾಭೈಲು_ಕುಂಚಿಕಲ್_ಪಾಲ್ಸ್_ಕಾಲ_ಬುಡದಲ್ಲಿ_ಅತೀ_ಸಮೀಪದಲ್ಲಿದ್ದಾರೆ.
ಬರೀ ಗೂಗಲ್ ನೋಡಿಕೊಂಡು ವಿವರಣೆ ಕೊಡುತ್ತಾ ಹೋದರೆ ನೀವು ತಿಳಿದಂತೆ ಎಲ್ಲರೂ ತಿಳಿಯುತ್ತಾರೆ,, ಭಾರತದ ಅತ್ಯಂತ ದೊಡ್ಡ ಜಲಪಾತ ಎಂದು ಪರಿಗಣಿಸಿರುವುದು ಮತ್ತು ಅದನ್ನು ಅಂಗೀಕಾರಗೊಳಿಸಿರುವುದು ನಾನಲ್ಲ, 🤣🤣 ಭಾರತದ ಸರ್ಕಾರದ ಸಂಬಂಧಪಟ್ಟ ಇಲಾಖೆ..
ಜಲಪಾತವನ್ನು ಸೂಕ್ತ ಸಂಸ್ಥೆಗಳಿಂದ ಅಳತೆಯನ್ನು ಮಾಡಿದ ನಂತರವೇ ಹೀಗೆ ಅಂಗೀಕಾರಗೊಂಡಿದೆ.. ಜಲಪಾತವನ್ನು ಅಳೆಯ ಬೇಕಾಗಿರುವುದು ಒಂದು ಹಂತದ ನೀರಿನ ಆಧಾರದ ಮೇಲೆ ಅಲ್ಲ.
ಜೋಗ ಜಲಪಾತವು ಸೇರಿದಂತೆ ಹೆಚ್ಚಿನ ಜಲಪಾತಗಳು ಹಲವು ಹೀಗಿನ ಹಂತಗಳನ್ನು ಹೊಂದಿದೆ,ಇದನ್ನು ಏಷ್ಯಾದ ಎರಡನೇ ಅತಿ ದೊಡ್ಡ ಜಲಪಾತ ಮತ್ತು ಭಾರತದ ಅತಿ ದೊಡ್ಡ ಜಲಪಾತ ಎಂದು ಪರಿಗಣನೆ ಮಾಡಿದ ಕೇಂದ್ರ ಸರ್ಕಾರ ಮತ್ತು ಅದನ್ನು ಕಣ್ಣಾರೆ ಕಂಡ ನಾವೆಲ್ಲ ಪೆದ್ದರಾಗಿ ಬರೀ ಗೂಗಲ್ ಮ್ಯಾಪ್ ನಲ್ಲಿ ಮಾತ್ರ ಕಂಡ ನೀವು ಬುದ್ಧಿವಂತರು ಎಂದು ನೀವು ಸ್ವಯಂ ಸಾರುತ್ತಿರುವುದು ಕಂಡು ನನಗೆ ನಗು ಬರುತ್ತಿದೆ.
ಜಗತ್ತಿನ ಪ್ರಮುಖ 10 ಜಲಪಾತಗಳು ಹಂತ ಹಂತವಾಗಿಯೇ ಹಾರುತ್ತಿವೆ,ಜಲಪಾತ ನೋಡದೆ ನೋಡಲು ಬಂದರೆ ನಿಸರ್ಗ ಹಾಳಾಗುತ್ತದೆ ಎನ್ನುವ ಪಾಠ ನನ್ನಂಥವರಿಗೆ ಹೇಳಬೇಡಿ.
ನಾನು ಅರಣ್ಯ ಇಲಾಖೆಯ ಉದ್ಯೋಗಿಯ ಮಗ, ನಿಸರ್ಗ ಹಾಳಾಗುವುದು ಯಾರಿಂದ ಎನ್ನುವುದು ನನಗೆ ಸ್ಪಷ್ಟ ಅರಿವಿದೆ.
ಆದರೂ ದೇಶದ ನಂಬರ್ ಒನ್ ಜಲಪಾತವನ್ನು ಪ್ರವಾಸಿಗರಿಗೆ ತೋರಿಸಬಾರದು ಎಂಬ ನಿಮ್ಮ ಮನಸ್ಥಿತಿ ಇದೆಯಲ್ಲ ಇದು ಇಡೀ ಲೋಕದಲ್ಲಿ ಯಾರಿಗೂ ಅರ್ಥವಾಗದು.
ಒಂದು ವೇಳೆ ಜೋಗ ಜಲಪಾತವಾಗಲಿ ನಯಾಗಾರ ಜಲಪಾತವಾಗಲಿ ಪ್ರವಾಸಿಗರಿಗೆ ತೋರಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಂಡರೆ ಏನಾದೀತು?.
ವಿಮಾನವನ್ನು ಕೆಳಗಿನಿಂದ ಮೇಲೆ ನೋಡಿದಾಗ ಇರುವ ಗಾತ್ರಕ್ಕಿಂತ ಅದೆಷ್ಟೋ ಚಿಕ್ಕದಾಗಿ ಕಾಣುತ್ತದೆ ಸ್ವಾಮಿ, ಜಲಪಾತವನ್ನು ಮೇಲಿನಿಂದ ಕೆಳಗೆ ನೋಡಿದಾಗ ಅದು ನೆಲದ ಮೇಲೆ ಹರಿದಂತೆ ಕಾಣುತ್ತದೆ. ಜಲಪಾತವನ್ನು ಮತ್ತು ವಿಮಾನವನ್ನು ಕಾಣಬಾರದ ಜಾಗದಿಂದ ಕಂಡು ಅಳೆಯಬಾರದು. ಏನಂತೀರಿ?...
Comments
Post a Comment