Blog number 2219. ಬಿದನೂರು ನಗರದ ದೇವಗಂಗೆಯ ಕೆಳದಿ ರಾಜರ ಅಂತಃಪುರದ ರಾಣಿವಾಸಿಗಳಿಗೆ ನಿರ್ಮಿಸಿರುವ ನೈಸರ್ಗಿಕ ಈಜುಕೊಳ ಸಂಕೀರ್ಣ ಡಿಜಿಟಲ್ ಮಾಧ್ಯಮದಲ್ಲಿ
#ನಾನು_ಈಜು_ಕಲಿತ_ಕೊಳ_ಇದು
#ಕೆಳದಿ_ಅರಸರ_ದೇವಗಂಗೆ_ಈಜು_ಕೊಳಗಳು
#ಜಲ_ವಿಜ್ಞಾನಿಗಳಿಗೆ_ನೈಸಗಿ೯ಕ_ಈಜು_ಕೊಳದ_ಆದುನಿಕ_ಪ್ರತಿಪಾದಕರಿಗೆ
#ಮತ್ತು_ಇತಿಹಾಸ_ಪ್ರಿಯರಿಗೆ_ಕೈ_ಬೀಸಿ_ಕರೆಯುತ್ತಿರುವ_ದೇವಗಂಗೆ.
#ಬಿದನೂರುನಗರದ_ಈ_ಸು೦ದರ_ಈಜು_ಕೊಳಗಳ_ಸಂಕೀಣ೯ಕ್ಕೆ
#ಒಮ್ಮೆಯಾದರೂ_ಬೇಟಿ_ನೀಡಿ.
#ಈ_ಈಜು_ಕೊಳದ_ಬಗ್ಗೆ_ಡಿಜಿಟಲ್_ಮಾಧ್ಯಮ_ಖ್ಯಾತ_ಇತಿಹಾಸ
#ಸಂಶೋದಕ_ಅಂಬ್ರಯ್ಯಮಠ್_ವಿವರಣೆಯ_ಎಪಿಸೋಡುಗಳನ್ನ_ಪ್ರಕಟಿಸುತ್ತಿದೆ.
ಬಿದನೂರು ನಗರ ಸಮೀಪದ ಕೆಳದಿ ಅರಸರು ನಿರ್ಮಿಸಿರುವ ದೇವಗಂಗೆ ಕೊಳಗಳು ಸಂಶೋದಕರಿಗೆ, ಜಲ ತಜ್ಞರಿಗೆ ಮತ್ತು ಪ್ರವಾಸಿಗಳಿಗೆ ಕೈ ಬೀಸಿ ಕರೆಯುತ್ತಿದೆ.
ಜಲ ವಿಜ್ಞಾನಿಗಳಿಗೆ, ನೈಸಗಿ೯ಕ ಈಜು ಕೊಳದ ಆದುನಿಕ ಪ್ರತಿಪಾದಕರಿಗೆ ಮತ್ತು ಇತಿಹಾಸ ಪ್ರಿಯರಿಗೆ ಕೈ ಬೀಸಿ ಕರೆಯುತ್ತಿರುವ ದೇವಗಂಗೆ.
ಸಂಶೋದಕ ಅಂಬ್ರಯ್ಯಮಠ್ ವಿವರಣೆಯ ಎಪಿಸೋಡುಗಳನ್ನ ಪ್ರಕಟಿಸುತ್ತಿದೆ.
ಇಲ್ಲಿ ಕ್ಲಿಕ್ ಮಾಡಿ ನೋಡಿ
1. https://youtu.be/ChIi8XZ9R3A?si=T4L5zQ-Da_1L9ClC.
2. https://youtu.be/PJcuDtqMYf4?si=YlUxbwLR0rFBawQa
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಿದನೂರು ನಗರದ ಕೋಟೆಯಿ೦ದ ಕೊಲ್ಲೂರು ಮಾಗ೯ದಲ್ಲಿ 5-6 ಕಿ.ಮಿ. ಸಾಗಿದರೆ ಅಲ್ಲಿ ಬೈಸೆ ಎಂಬ ಹಳ್ಳಿ ಸಿಗುತ್ತದೆ, ಈ ಹಳ್ಳಿಯ ಬಲ ಬಾಗದಲ್ಲಿ ಕೆಳದಿ ಅರಸರ ಶಿಥಿಲ ಸಮಾದಿಗಳು ಇದೆ.
ಇಲ್ಲೇ ಒಂದು ರಸ್ತೆ ಬಲಕ್ಕೆ ದೇವಗಂಗೆಗೆ ಹೋಗುತ್ತದೆ, ಇಲ್ಲಿಯೇ ಕೆಳದಿ ಅರಸರ ಅದ್ಬುತ ನಿಮಾ೯ಣದ ಈಜು ಕೊಳಗಳ ಸಂಕೀಣ೯ವಿದೆ.
ಈಗೆಲ್ಲ ನೈಸಗಿ೯ಕ ಈಜುಕೊಳಗಳ ಬಗ್ಗೆ ವಿದೇಶಗಳಲ್ಲಿ ವಿಪರೀತ ಕಯಾಲಿಪ್ರಾರಂಭ ಆಗಿದೆ ಆದರೆ 350 - 400 ವಷ೯ದ ಹಿಂದೆ ಕೆಳದಿ ಅರಸರು ನಿಮಿ೯ಸಿದ ಈ ನೈಸಗಿ೯ಕ ಈಜು ಕೊಳಗಳ ಸಂಕೀಣ೯ ಸಂಶೋದನೆಗೆ ಆಹ೯ವಾಗಿದೆ.
ವಷ೯ ಪೂತಿ೯ ಈ ಈಜು ಕೊಳದಲ್ಲಿ ಒಂದೇ ಮಟ್ಟದಲ್ಲಿ ನೀರು ಇರುತ್ತದೆ ಮತ್ತು ನೀರು ಸದಾ ಹರಿಯುತ್ತಿರುತ್ತದೆ.
ದೊಡ್ಡ ಕೊಳ ಸಂಪೂಣ೯ ಶಿಲೆ ಕಲ್ಲಿನಿಂದ ನಿಮಿ೯ಸಿದ್ದಾರೆ, ಇದರ ಮದ್ಯೆ ರಾಣಿ ಪರಿವಾರದವರಿಗಾಗಿ ಕಲ್ಲಿನ ಸುಂದರ ತೊಟ್ಟಿಲು ಅಲ್ಲಿಗೆ ತಲುಪಲು ಕಲ್ಲಿನ ಸಂಕ ಇದೆ.
ಈಜು ಕೊಳದ ಸುತ್ತಲೂ ಸುಂದರವಾದ ಕಟಾಂಜನ, ಕೊಳಕ್ಕೆ ಇಳಿಯಲು ವಿಶಾಲವಾದ ಪಾವಟಿಗೆಗಳಿದೆ.
ದೊಡ್ಡ ಕೊಳದ ನೀರು ಹರಿಯುವ ದಿಕ್ಕಿನಲ್ಲಿ ವಿವಿಧ ಆಕೃತಿಯ, ಅಳತೆಯ ಮತ್ತು ಆಳದ 7 ಕೊಳಗಳಿದೆ.
ವಷ೯ ಪೂತಿ೯ ಈ ಕೊಳಗಳಲ್ಲಿ ನೀರು ಹರಿಯುವುದರಿಂದ ಇದರ ನೀರು ಮಲೀನವಾಗುವುದಿಲ್ಲ, ಈ ಕೊಳಕ್ಕೆ ಬೆಟ್ಟದ ಮೇಲಿನ ದೊಡ್ಡಕೆರೆಯಿOದ ನೀರು ಹರಿದು ಬರಲು ಭೂಮಿ ಆಳದಲ್ಲಿ ಹಿತ್ತಾಳೆಯ ಕೊಳವೆ ಮತ್ತು ಕಲ್ಲಿನ ಕೊಳವೆ ಅಳವಡಿಸಿದ್ದಾರೆ.
ಈಜು ಕೊಳದ ಸ೦ಕಿಣ೯ ನೆಲದಿಂದ ಸುಮಾರು 15 ಅಡಿ ಆಳದಲ್ಲಿ ನಿಮಿ೯ಸಿರುವುದು ರಾಣಿ ವಾಸದ ಖಾಸಾಗಿ ತನಕ್ಕಾಗಿ, ದೂರದಿಂದ ಈಜು ಕೊಳ ಕಾಣುವುದಿಲ್ಲ.
Comments
Post a Comment