Blog number 2187. ಭಾರತೀಯ ಹುಲಿ ಜೇಡ / Indian Tiger Spider/Indian ornamental tree spider ಕಡಿತ ಜೀವಕ್ಕೆ ಅಪಾಯವಿಲ್ಲ ನೋವು- ಬಾವು- ಸೋಂಕಿನ ಸಾಧ್ಯತೆ ಹೆಚ್ಚು ನನ್ನ ಆತ್ಮೀಯ ಗೆಳೆಯ ಜೋಗಿ ನಾರಾಯಣರು ಹುಲಿ ಜೇಡದ ಕಡಿತಕ್ಕೆ ಒಳಗಾಗಿದ್ದರು.
#ಆತ್ಮೀಯ_ಗೆಳೆಯ_ಜೋಗಿ_ನಾರಾಯಣರಿಗೆ
#ಹುಲಿ_ಜೇಡ_ಕಡಿತದಿಂದ_ಆತಂಕ_ಉಂಟಾಗಿತ್ತು
#ಕಾಲಿನ_ಪಾದದ_ಬಾವು_ಮತ್ತು_ಶಿವಮೊಗ್ಗದ_ಮೆಗಾನ್_ಆಸ್ಪತ್ರೆಯಿಂದ
#ಮಣಿಪಾಲಿಗೆ_ಅಲ್ಲಿನ_ವೈದ್ಯರಿಗೂ_ಇದು_ಅಪರೂಪದ_ಮೊದಲ_ಕೇಸಂತೆ
#ತೀವ್ರವಾದ_ನೋವು_ಬಾವು_ಉಂಟಾಗುತ್ತದೆ
#ಚಿಕಿತ್ಸೆ_ಮಾಡದಿದ್ದರೆ_ಸೋಂಕಾಗುವ_ಸಾಧ್ಯತೆ
#ಮಿತ್ರ_ನಾರಾಯಣ_ಜೋಗಿ_ಆರೋಗ್ಯವಾಗಿದ್ದಾರೆ.
ಆನಂದಪುರಂನ ಪಶುವೈದ್ಯ ಆಸ್ಪತ್ರೆ ಎದುರಿನ ಮನೆ ನನ್ನ ಆತ್ಮೀಯ ಗೆಳೆಯ ಜೋಗಿ ನಾರಾಯಣರದ್ದು ಇವರ ತಂದೆ ದಿವಂಗತ ಜೋಗಿ ಹನುಮಂತಪ್ಪನವರು ಆನಂದಪುರಂ ವಿಲೇಜ್ ಪಂಚಾಯಿತಿ ಸದಸ್ಯರಾಗಿದ್ದವರು, ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರ್ ಅಣ್ಣ ವೆಂಕಟಾಚಲಯ್ಯಂಗಾರರ ನಿಕಟವರ್ತಿಗಳು ಮತ್ತು ಅವರ ಕುಟುಂಬದ ವಕೀಲರಾದ ಮುಂದೆ ಮುಖ್ಯಮಂತ್ರಿಗಳಾದ ಕಡಿದಾಳು ಮಂಜಪ್ಪರ ಗೆಳೆಯರು ಹಾಗೂ ನಾಟಕ ನಿರ್ದೇಶಕರು ಆಗಿದ್ದವರು.
ಕಳೆದ ವಾರ ತೆಂಗಿನ ಮರಗಳ ಹೆಡೆಗಳನ್ನ ಸವರಿ ಊರುವಲು ಕಟ್ಟಿಗೆ ಮಾಡುತ್ತಿರುವಾಗ ಕಾಲಿಗೆ ಏನೋ ಕಚ್ಚಿದಂತೆ ತಕ್ಷಣ ಉರಿ ಪ್ರಾರಂಭವಾದಾಗ ಇವರಿಗೆ ಹಾವಿನ ಕಡಿತ ಇರಬಹುದೆನ್ನಿಸಿದೆ, ಆ ಕಸದ ರಾಶಿ ಶೋದಿಸಿದಾಗ ಸಿಕ್ಕಿದ್ದು ಅಂಗೈ ಅಗಲದ ಬಾರತದ ಹುಲಿ ಜೇಡ (Indian Tiger Spider/Indian ornamental tree spider) ಇದನ್ನು ನೋಡಿದ ಮೇಲೆ ಮೊದಲು ಉಂಟಾಗಿದ್ದ ಹಾವಿನ ಕಡಿತದ ಭಯ ಹೋದರೂ ಸ್ಥಳೀಯವಾಗಿ ಹುಲಿ ಜೇಡ ವಿಷ ಎಂಬ ನಂಬಿಕೆ ತಕ್ಷಣ ಶಿವಮೊಗ್ಗದ ಜಿಲ್ಲಾ ಮೆಗಾನ್ ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರು TT ಚುಚ್ಚು ಮದ್ದು ನೀಡಿ ಮಣಿಪಾಲಿಗೆ ಕಳಿಸಿದ್ದಾರೆ.
ಈ ಜೇಡ ಅಕ್ಕ ಪಕ್ಕದವರು ಬಂದು ಹೊಡೆದು ಸಾಯಿಸಿದ್ದಾರೆ ಅಂಗೈ ಅಗಲ ಗಾತ್ರದ ಈ ಹುಲಿ ಜೇಡ ಒಂದು ಮುಷ್ಟಿ ಗಾತ್ರಕ್ಕೆ ಮುರುಟಿಗೊಂಡಿದೆ ಮತ್ತು ಇದರ ಮುಂಭಾಗದ ಕಾಲು 7 ರಿಂದ 8 ಸೆ.ಮಿ ಉದ್ದವಿತ್ತು ಇದರ ಪೋಟೋ ತೆಗೆದು ಕೊಂಡು ವೈದ್ಯರಿಗೆ ತೋರಿಸಿದ್ದರಿಂದ ಚಿಕಿತ್ಸೆಗೆ ಅನುಕೂಲವಾಯಿತು.
ಮಣಿಪಾಲಿನಲ್ಲಿ ಸೋಂಕು ನಿವಾರಕ ಚಿಕಿತ್ಸೆ ನೀಡಿದ್ದಾರೆ ಒಂದು ವಿಶೇಷ ಅಂದರೆ ಹುಲಿ ಜೇಡದ ಕಡಿತದ ಮೊದಲ ಕೇಸು ಇದಂತೆ ಕಾರಣ ಹುಲಿ ಜೇಡದ ಕಡಿತ ಆದವರು ಅವರ ಹಳ್ಳಿಯಲ್ಲಿ ನಾಟಿ ಚಿಕೆತ್ಸೆ ಪಡೆಯುವುದರಿಂದ ಆಸ್ಪತ್ರೆಗೆ ಬರುವುದಿಲ್ಲ ಎಂದಿದ್ದಾರೆ.
Comments
Post a Comment