Blog number 2203. ಪುರುಶೊತ್ತಮ ಬಿಳಿಮಲೆ ಅವರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೇಳಿಕೆ ಸರ್ಕಾರದಿಂದ ಜಾರಿ ಸಾಧ್ಯವೇ?...
#ಪುರುಶೋತ್ತಮಬಿಳಿಮಲೆ
#ಕರ್ನಾಟಕ_ಸರ್ಕಾರದ
#ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಧ್ಯಕ್ಷರು
#ಅವರ_ಹೇಳಿಕೆ_ಒತ್ತಾಯ
#ಪ್ರಾಥಮಿಕ_ಶಾಲೆಗಳಲ್ಲಿ_ಆಂಗ್ಲ_ಮಾಧ್ಯಮ_ಬೇಡ
#ಇದರ_ಸಾದಕ_ಭಾದಕ_ಏನು?
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಹೇಳಿಕೆ ಸ್ವಾಗತಾರ್ಹ ಆದರೂ ಇದು ಸಾಧ್ಯವಾ? ಕರ್ನಾಟಕದಲ್ಲಿನ ಸರ್ಕಾರಿ ಶಾಲೆಗೆ ಮಾತ್ರವಾ? ಅಥವ ರಾಜ್ಯದ ಎಲ್ಲಾ ಖಾಸಾಗಿ ಮತ್ತು ಸೆಂಟ್ರಲ್ ಸಿಲಬಸ್ ಶಾಲೆಗಳಿಗೂ ಅನ್ವಯವಾ? ಸರ್ವೋಚ್ಚ ನಾಯಾಲಯದ ತೀರ್ಪುಗಳು ಏನಿದೆ? ಎಂಬ ಅನೇಕ ರೀತಿ ಚರ್ಚಿಗಳು ಸಾಮಾಜಿಕ ಜಾಲತಾಣದಲ್ಲಿ ಗಮನಿಸಬಹುದು.
ಪ್ರಾಥಮಿಕ ಶಿಕ್ಷಣ 1 ರಿಂದ 4 ರವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಸಿ 5 ರಿಂದ 10 ನೇ ತರಗತಿ ತನಕ ಇಂಗ್ಲಿಷ್ ಮಾಧ್ಯಮದ ಅನುಮತಿ ಪಡೆದ ಶಾಲೆಗಳು ಈ ಆದೇಶ ಪಾಲಿಸುವುದೇ ಇಲ್ಲ ರಾಜಾರೋಸ್ತಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ಅಂತ ಬೋರ್ಡ್ ಹಾಕಿ ಕೊಂಡು ಇಂಗ್ಲೀಷ್ ನಲ್ಲೇ ಪಾಠ ಮಾಡುತ್ತಾರೆ ಕನ್ನಡ ಮಾತಾಡಿದರೆ ದಂಡ ಇದೆಲ್ಲ ಸಣ್ಣ ಸಣ್ಣ ಹಳ್ಳಿಗಳಲ್ಲಿ ಕಾನ್ವೆಂಟ್ ಶಿಕ್ಷಣದ ಪ್ಯಾಶನ್ ಶುರುವಾಗಿದೆ ಇದಕ್ಕೆ ಪ್ರತಿಫಲವಾಗಿ ಶಿಕ್ಷಣ ಇಲಾಖೆಗೆ ನಿಗದಿ ಪಡಿಸಿದ ಲಂಚ ತಲುಪಿಸ ಬೇಕು.
ನಾನು ನನ್ನ ಮಕ್ಕಳನ್ನ ಸರ್ಕಾರಿ ಅಂಗನವಾಡಿಯಿಂದ ದ್ವಿತೀಯ puc ತನಕ ನಮ್ಮ ಊರಿನ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿಸಿದೆ ನನಗೆ ಇದಕ್ಕೆಲ್ಲ ಪ್ರೇರಣೆ ಆದ ಸಾಹಿತಿಗಳು ಕನ್ನಡ ಹೋರಾಟಗಾರರು ಮಾತ್ರ ಅವರ ಮಕ್ಕಳನ್ನ ಇಂಗ್ಲೀಷ್ ಮಾಧ್ಯಮದಲ್ಲೇ ಶಿಕ್ಷಣ ನೀಡಿದರು.
ಪ್ರತಿ ವರ್ಷ ನಮ್ಮ ಹಳ್ಳಿಗಳಲ್ಲಿ ಕನ್ನಡ ರಾಜ್ಯೋತ್ಸವ ಮಾಡುವ ಕನ್ನಡ ವೀರರು ಯಾರು ತಮ್ಮ ಮಕ್ಕಳನ್ನ ಕನ್ನಡ ಮಾಧ್ಯಮದಲ್ಲಿ ಓದಿಸುವುದಿಲ್ಲ ಆದ್ದರಿಂದ ಪುರುಶೋತ್ತಮ ಬಿಳಿಮಲೆ ಅವರ ಪತ್ರಿಕಾ ಹೇಳಿಕೆ ಗೊಂದಲ ಉಂಟು ಮಾಡಿದೆ.
ಶೃಂಗೇರಿಯ ಶ್ರೀನಿವಾಸ ಮೂರ್ತಿ ಅವರ ಪೇಸ್ ಬುಕ್ ನಲ್ಲಿ ಕೆಲ ವಿಚಾರ ವಿನಿಮಯ ಆದ ಆಯ್ದ ಪೋಸ್ಟುಗಳು ವಿಚಾರ ಮಾಡುವಂತದ್ದಾಗಿದೆ ಆದ್ದರಿಂದ ಇಲ್ಲಿ ಓದುಗರ ಅವಾಗಾಹನೆಗಾಗಿ ಇಲ್ಲಿ ದಾಖಲಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ಬರೆಯಿರಿ...
#ಮನು_ಜೋಗಿಬೈಲು ಬರೆದ ಅಭಿಪ್ರಾಯ...
..... "ಏನೂ ಬೇಕಾಗಿಲ್ಲ ಆಂಗ್ಲಮಾದ್ಯಮವೇ ಇರಲಿ ನಾವೆಲ್ಲ ಕನ್ನಡದಲ್ಲಿ ಓದಿ ತೊಂದರೆ ಪಟ್ಟಿದ್ದು ಸಾಕು. ಮಾತೆತಿದ್ದರೆ ಯಾರೋ ಮಾಹಾನ್ ಸಾದಕರನ್ನು ಅವರು ಕನ್ನಡ ಮಾದ್ಯಮ ಇವರು ಕನ್ನಡ ಮಾದ್ಯಮ ಅನ್ನುವುದು. ನಾವು ನೋಡಬೇಕಾಗಿರುವುದು ಯಾರೋ ಕೆಲವೇ ಕೆಲವು ಜನ ಬುದ್ದಿವಂತರ ಸಾದನೆಯನ್ನಲ್ಲ ಅವರು ಎಲ್ಲಿದ್ದರೂ ಸಾಧನೆ ಮಾಡುತ್ತಾರೆ. ನಾವು ನೋಡಬೇಕಿರುವುದು ಕನ್ನಡ ಮಾದ್ಯಮದಲ್ಲಿ ಓದಿದ ಒಟ್ಟು ವಿದ್ಯಾರ್ಥಿಗಳ ಸರಾಸರಿ ಜೀವನಮಟ್ಟ ಏನು ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಓದಿದವರ ಸರಾಸರಿ ಜೀವನಮಟ್ಟ ಏನು ಎಂಬುದನ್ನು ತುಲನೆ ಮಾಡಿ ನೋಡಿ. ಆಗ ನಿಜ ತಿಳಿಯುತ್ತದೆ. ಈ ಸಾಹಿತಿಗಳು ಆವು ಇವೆಲ್ಲ ಬರೀ ಕಂಡೋರ ಮಕ್ಕಳನ್ನ ಬಾವಿಗೆ ದೂಡಿ ಮಜಾ ನೋಡುವವರಷ್ಟೇ ಇವರ ಮಕ್ಕಳು ಯಾವುದೋ ಒಳ್ಳೇ ಇಂಗ್ಲೀಷ್ ಮೀಡಿಯಂ ಖಾಸಗಿ ಶಾಲೆಯಲ್ಲಿ ಓದ್ತಾ ಇರ್ತಾರೆ. "
#ಮನೋಹರ_L_G_ಗೌಡರ ಅಭಿಪ್ರಾಯ....
...."ಬೇಡ ಅಂದಮೇಲೆ ಯಾರಿಗೂ ಬೇಡ ಬಿಳಿ ಮಲೆಯವರು ಮೊದಲು ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಲ್ಲ ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಒಂದೇ ರೀತಿಯ ಪುಸ್ತಕ ಒಂದೇ ರೀತಿಯ ಪಾಠ ನಡೆಯಬೇಕು ಖಾಸಗಿ ಶಾಲೆಯಲ್ಲಿ ಬಡವನ ಮಕ್ಕಳು ಕನ್ನಡ ಕಲಿತು ಬೀದಿಗೆ ಬರೋದು ಬೇಡ ಅಂದ್ರೆ ಕನ್ನಡ ಕಲಿತರೆ ಬೀದಿಗೆ ಬರುತ್ತಾರೆ ಅರ್ಥ ಯಾಕೆ ಅಂದ್ರೆ ಇವತ್ತು ಅಯೋಗ್ಯ ಸರ್ಕಾರಗಳು ಜಾರಿಗೆ ತಂದಿರುವ ನೀಟು ವ್ಯವಸ್ಥೆಯಿಂದ ಹಿಡಿದು ಎಲ್ಲ ವ್ಯವಸ್ಥೆಗಳು ಕೂಡ ಅಸಹಾಯಕ ಹಾಗೂ ಬಡ ಮಧ್ಯಮ ವರ್ಗದ ಮಕ್ಕಳಿಗೆ ಮರಣ ಶಾಸನ ಆಗ್ತಾ ಇದೆ.."
#ಶ್ರೀನಿವಾಸಮೂರ್ತಿಗಳ ಅಭಿಪ್ರಾಯ....
...."ಈ ಸಾಹಿತಿಗಳು ಒಂದು ರೀತಿಯ ಗಂಡು ವೇಶ್ಯೆಯರು ಎಂದು ಕುಂವೀರಭದ್ರಪ್ಪ ಕರೆದಿರುವುದು ಸರಿಯಾಗಿದೆ ಇವರ ಮಕ್ಕಳು ವಿದೇಶದಲ್ಲಿರಬೇಕು ಬಡವರ ಮಕ್ಕಳಿಗೆ ಉಪದೇಶ ಕೊಡಬೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ಯಾವ ಮಾನದಂಡದಲ್ಲೂ ನೀಡಲಾಗುವುದಿಲ್ಲ"....
#ನನ್ನ ಅಭಿಪ್ರಾಯ....
....."5 ನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾಧ್ಯಮ ಅನ್ನುತ್ತಿದ್ದ ಸಕಾ೯ರದ ಅನುಮತಿ ಇದ್ದಾಗ 1ರಿಂದ 4 ನೇ ತರಗತಿ ಕನ್ನಡ ಮಾಧ್ಯಮದಲ್ಲೇ ಬೋದಿಸ ಬೇಕೆಂದಿದ್ದಾಗ ಶಿಕ್ಷಣ ಇಲಾಖೆ ನಿಗದಿ ಮಾಡಿದ ಲಂಚ ನೀಡಿ ಇಂಗ್ಲೀಷ್ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡುತ್ತಿದ್ದನ್ನ ನೋಡಿದ್ದೆ,ಕಾನ್ವೆಂಟ್ಗಳಲ್ಲಿ ಮಾತ್ರ ಕನ್ನಡ ಮೀಡಿಯಂ ಇರುವುದಿಲ್ಲ ಅಲ್ಲಿ ನಮ್ಮ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರು ತಮ್ಮ ಮಕ್ಕಳನ್ನ ಓದಿಸುತ್ತಾರೆ...."
Comments
Post a Comment