Blog number 2217. ಆನಂದಪುರಂನಿಂದ ಸಿಂಹದಾಮದವರೆಗೆ ಹೊನ್ನಾವರ ಚಿತ್ತೂರು ರಾಷ್ಟ್ರೀಯ ಹೆದ್ದಾರಿ 69 ನಾಲ್ಕು ಲೇನ್ ರಸ್ತೆ.
#ಆನಂದಪುರಂನಿಂದ_ಶಿವಮೊಗ್ಗ_ಸಿಂಹದಾಮದ_ತನಕ
#ಚತುಷ್ಪಾದ_ರಾಷ್ಟ್ರೀಯ_ಹೆದ್ದಾರಿ_ಎಲ್ಲೆಲ್ಲಿಂದ_ಮಾಹಿತಿ
#ಹೊನ್ನಾವರ_ಚಿತ್ತೂರು_ರಾಷ್ಟ್ರೀಯ_ಹೆದ್ದಾರಿ_69
#ಶಿವಮೊಗ್ಗ_ಸಿಂಹದಾಮದಿಂದ_ಆನಂದಪುರಂವರೆಗೆ_ನಾಲ್ಕು_ಲೇನ್
#ಅಪಘಾತ_ವಲಯದ_ಬ್ಲಾಕ್_ಸ್ಪಾಟ್_ಗಳಾದ
#ಗಿಳಾಲಗುಂಡಿ_ಕುಣೇಹೊಸೂರು_ತುಪ್ಪೂರು_ಚೋರಡಿ_ಸ್ಪಾಟ್
#ಬದಲಿಸಿ_ನೇರ_ಮಾಡಿದ್ದಾರೆ
#ಕುಂಸಿಗೆ_ಬೈಪಾಸ್_ಆಗಲಿದೆ
#ಚೊರಡಿ_ತುಪ್ಪೂರು_ಅಯನೂರು_ರಸ್ತೆ_ಅಗಲಿಕರಣ
ನಿನ್ನೆಯ ಲೇಖನದಲ್ಲಿ ಆನಂದಪುರOನಿಂದ ಶಿವಮೊಗ್ಗ ಮಾರ್ಗದ ಚೆನ್ನಕೊಪ್ಪದವರೆಗಿನ ರಾಷ್ಟ್ರೀಯ ಹೆದ್ದಾರಿ 69 (ಹೊನ್ನಾವರ ಚಿತ್ತೂರು) 4 ಲೇನ್ ಕಾಮಗಾರಿ ಮಾಹಿತಿ ದಾಖಲಿಸಿದ್ದೆ.
ಈ ಲೇಖನದಲ್ಲಿ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮಪಂಚಾಯಿತಿಯ ಚೆನ್ನಕೊಪ್ಪದಿಂದ ನೇರವಾಗಿ ರಾ.ಹೆ. ತಂಗಳವಾಡಿ ರಸ್ತೆಯಿಂದ ಕೊಲ್ಲಿಬಚ್ಚಲು ಆಣೆಕಟ್ಟಿನ ಆಚೆ ಬದಿಯಿಂದ ಕುಣೇಹೊಸೂರು ನೇರವಾಗಿ ಸೇರಲಿದೆ.
ಕುಣೇಹೊಸೂರು ತುಪ್ಪೂರು ಮಧ್ಯದ ದೀರ್ಘ ತಿರುವಾದ ಇನ್ನೊಂದು ಬ್ಲಾಕ್ ಸ್ಪಾಟ್ ಬದಲಿಸಿ ಕುಣೇಹೊಸೂರು- ತುಪ್ಪೂರು - ಜೋರಡಿ ನೇರ ಮಾರ್ಗ ಮಾಡಲಾಗಿರುವುದರಿಂದ ತುಪ್ಪೂರು ಚೊರಡಿಯಲ್ಲಿ ರಾ.ಹೆ. ನಾಲ್ಕು ಲೇನ್ ಮಾರ್ಗಕ್ಕಾಗಿ ರಸ್ತೆ ಅಗಲಿಕರಣ ಆಗಲಿದೆ.
ಚೊರಡಿಯಿಂದ ಕುಮದ್ವತಿ ಸೇತುವೆ ಮತ್ತು ದರ್ಗಾದವರೆಗೆ ಅಪಘಾತ ವಲಯ ಆಗಿತ್ತು ಈಗ ರಾ.ಹೆದ್ದಾರಿ ಚೊರಡಿಯಿಂದ ಕುಂಸಿ ತನಕ ನೇರಗೊಳಿಸಿದ್ದು ಕುಮದ್ವತಿ ನದಿಗೆ ಹೊಸದಾದ ಮೂರನೇ ಸೇತುವೆ ನಿರ್ಮಾಣ ಆಗಲಿದೆ.
ಕುಂಸಿ ಎಪಿಎಂಸಿ ಹಿಂಬಾಗದಿಂದ ದಾನಂದಿ ತನಕ ರಾಷ್ಟ್ರೀಯ ಹೆದ್ದಾರಿಗೆ ಕುಂಸಿ ಬೈಪಾಸ್ ಆಗಲಿದೆ ಇದರಿಂದ ಕುಂಸಿ ನಾಗರೀಕರಿಗೆ ರಸ್ತೆ ಅಗಲೀಕರಣದ ಬಿಸಿ ತಟ್ಟುವುದಿಲ್ಲ.
ಕುಂಸಿ ದಾನಂದಿಯಿಂದ ಅಯನೂರು ಊರ ಒಳಗಿನಿಂದ ರಸ್ತೆ ಅಗಲೀಕರಣದ ಜೊತೆ ಸಿಂಹ ದಾಮದವರೆಗೆ 4 ಲೇನ್ ರಾ.ಹೆ. 69 ನಿರ್ಮಾಣವಾಗಿ ಈಗಾಗಲೇ ಅಲ್ಲಿಯವರೆಗೆ ಮಾಚೇನಹಳ್ಳಿಯಿಂದ ಬಂದು ತಲುಪಿರುವ 4 ಲೇನ್ ರಾ.ಹೆದ್ದಾರಿಗೆ ತಲುಪಲಿದೆ.
Comments
Post a Comment