Skip to main content

Blog number 2155. ಇಕ್ಕೇರಿ ಇತಿಹಾಸ....ಎಲ್ಲಾ ಇತಿಹಾಸ ಗೊತ್ತು ಅನ್ನಲು ಸಾಧ್ಯವಾ? ನೂರು ಪುಸ್ತಕದ ಓದು ಒಂದು ದೃಶ್ಯ ಮಾಧ್ಯಮಕ್ಕೆ ಸಂಕ್ಷಿಪ್ತಗೊಳಿಸಿ ವಿವರಿಸುವುದು ಸುಲಭವಲ್ಲ

#ಇತಿಹಾಸ_ನಾಲ್ಕು_ಅಕ್ಷರದ_ಪದ

#ಅದಿಷ್ಟೆ_ಇತಿಹಾಸವಲ್ಲ

#ಅನೇಕರು_ನಮಗೆಲ್ಲ_ಇತಿಹಾಸ_ತಿಳಿಯದ್ದೇನಲ್ಲ_ಎಂದು_ಅಸಡ್ಡೆ_ಆಗಿ_ಮಾತಾಡುತ್ತಾರೆ

#ಇತಿಹಾಸದ_ಬಗ್ಗೆ_ಬರೆದರೆ_ಮಾತಾಡಿದರೆ_ಅವರ_ಪದವಿ_ಪ್ರಶ್ನಿಸುತ್ತಾರೆ

#ಇಂತಹ_ಗಾಂಪರಿಂದಲೇ_ನಮ್ಮ_ಇತಿಹಾಸ_ಮುಂದಿನ_ತಲೆಮಾರಿಗೆ_ತಲುಪುತ್ತಿಲ್ಲ

#ನಮ್ಮ_ಸಾಗರದ_ಇಕ್ಕೇರಿ_ಬಗ್ಗೆ_ನಮಗೇನು_ಗೊತ್ತು?

#ಬಹುಶಃ_ಇಷ್ಟು_ಸರಳವಾಗಿ_ಅರ್ಥವಾಗುವಂತೆ_ಡಿಜಿಟಲ್_ಮಾಧ್ಯಮದಲ್ಲಿ

#ಇಕ್ಕೇರಿ_ಇತಿಹಾಸ_ವಿವರಿಸುತ್ತಿರುವ_ಗಣಪತಿ_ಹೆಚ್_ಕೆ_ಅಪಾರ_ಜ್ಞಾನ_ಓದು

#ಅವರ_ವಿವರಣೆ_ನೋಡಿದವರಿಗೆ_ಅರಿವಾದೀತು_ಅವರ_ಯೋಗ್ಯತೆ

#ಇಕ್ಕೇರಿ_ದೇವಾಲಯದ_ಮಂಟಪ_ನಿರ್ಮಿಸಿದ_ಹೊಂಬುಜದ_ಆಚಾರಿ_ವೆಂಕಟಯ್ಯ

#ರಾಜ_ವೀರಭದ್ರನಾಯಕರ_ಗಾಜಿನ_ಕನ್ನಡಿ_ಒಡೆದಿದ್ದರಿಂದ_ಬೆಳ್ಳಿ_ಕನ್ನಡಿ_ನಿರ್ಮಿಸಿದ_ಆಚಾರರು

#ಇಕ್ಕೇರಿಯ_ಚಿನ್ನದ_ಕಲಶ_ಭಟ್ಕಳ_ತಲುಪಿದ್ದು

#ಪುಟ್ಟಣ್ಣ_ಕಣಗಲ್_ತಮ್ಮ_ಅಮೃತಘಳಿಗೆ_ಸಿನಿಮಾದ_ಹಾಡು

#ಪಾರ್ವತಿ_ಪರಶಿವರ_ಪ್ರಣಯ_ಪ್ರಸಂಗ_ಎಂಬ_ಹಾಡಿನ_ನೃತ್ಯ_ಇಕ್ಕೇರಿ_ದೇವಾಲಯದ

#ಒಳ_ಮಂಟಪದಲ್ಲಿ_ಚಿತ್ರಿಕರಣವಾಗಿತ್ತು.


  ಜನರು ವರ್ತಮಾನದಲ್ಲಿ ಬದುಕುತ್ತಾರೆ...ಭವಿಷ್ಯವನ್ನು ಕುರಿತು ಚಿಂತಿಸುತ್ತಾರೆ....
    ಇತಿಹಾಸವು ಗತಕಾಲದ ಕಿಟಕಿಯಾಗಿದ್ದು ಅದು ನಾವು ವಾಸಿಸುವ ಜಗತ್ತನ್ನು ರೂಪಿಸಿದ ಮಾದರಿಗಳು ಮತ್ತು ಘಟನೆಗಳನ್ನು ಬಹಿರಂಗಪಡಿಸುತ್ತದೆ. 
    ಇತಿಹಾಸವು ಒಂದು ಶೈಕ್ಷಣಿಕ ವಿಭಾಗವಾಗಿದ್ದು , ಹಿಂದಿನ ಘಟನೆಗಳನ್ನು ವಿವರಿಸಲು, ಪರೀಕ್ಷಿಸಲು, ಪ್ರಶ್ನಿಸಲು ಮತ್ತು ವಿಶ್ಲೇಷಿಸಲು ಮತ್ತು ಅವುಗಳ ಕಾರಣ ಮತ್ತು ಪರಿಣಾಮದ ಮಾದರಿಗಳನ್ನು ತನಿಖೆ ಮಾಡಲು ನಿರೂಪಣೆಯನ್ನು ಬಳಸುತ್ತದೆ.
   ಇಂತಹ ನಿರೂಪಣೆ ಮಾಡುವ ಸಂಶೋದಕ, ಪತ್ರಿಕೆ ಅಥವ   ದೃಶ್ಯ ಮಾಧ್ಯಮವು ಸಂಬಂದ ಪಟ್ಟ ಇತಿಹಾಸದ ಅಗಾದ ಓದು - ಅಧ್ಯಯನ-ಸ್ಥಳ ಪರಿಶೀಲನೆ- ಸ್ಥಳಿಯ ಜನಪದ ಇತ್ಯಾದಿ ತಿಳಿದಿರದಿದ್ದರೆ ನಿರೂಪಣೆ ಮಾಡುವುದಾದರೂ ಹೇಗೆ? ಪ್ರಕಟಿಸುವುದಾದರೂ ಹೇಗೆ?
  ಸಾಗರ ತಾಲೂಕಿನ ಇಕ್ಕೇರಿ ವರದಾ ನದಿ ದಂಡೆಯ ರಾಜಮನೆತನ ಕೆಳದಿ ಸಂಸ್ಥಾನದ ಎರಡನೇ ರಾಜದಾನಿ ಅಲ್ಲಿ ನ ಕೋಟೆ ಮತ್ತು ಬೃಹತ್ ಶಿಲಾಮಯ ಅಘೋರೇಶ್ವರ ದೇವಾಲಯದ ಶಂಕುಸ್ಥಾಪನೆ ಮಾಡಿದವರು ವಿಜಯನಗರದ ಸಾಮ್ರಾಟ ಕೃಷ್ಣ ದೇವರಾಯರು....
   ಈ ದೇವಾಲಯದ ಮಂಟಪದ ನಿರ್ಮಾಣ ಕೆಲಸ ಮಾಡಿದ ಶಾಸನ " ಈ ಮಂಟಪದ ಕೆಲಸ ಗೈಯಿದ ಆಚಾರಿ ಹೊಂಬುಚದ ವೆಂಕಟಯ್ಯ" .....
  ಈ ವಿಶೇಷ ಕೌಶಲ್ಯದ ವಿಶ್ವಕರ್ಮ ವೆಂಕಟಯ್ಯ ಆಚಾರಿ ರಾಜ ವೀರಭದ್ರ ನಾಯಕರು ಕಟ್ಟು ಹಾಕಲು ನೀಡಿದ ಆ ಕಾಲದ ಅಪರೂಪದ ಗಾಜಿನ ಕನ್ನಡಿ ಅಚಾತುರ್ಯದಿಂದ ಒಡೆದು ಹೋಗಿದ್ದರಿಂದ ಆತ ಬೆಳ್ಳಿಯ ಹಾಳೆಗೆ ವಿಶೇಷ ಹೊಳಪು ನೀಡಿ ಗಾಜಿನ ಕನ್ನಡಿಗೆ ಪಯಾ೯ಯವಾಗಿ ಬೆಳ್ಳಿ ಕನ್ನಡಿ ತಯಾರಿಸಿ ನೀಡಿದರಂತೆ....
    ಇಕ್ಕೇರಿಯ ಶಿಲಾಮಯ ಗರ್ಭಗುಡಿ ಅದಕ್ಕೆ ಇರುವ ಮೂರು ಬಾಗಿಲು, ಮಂಟಪ,ಕಲಶ, ಗೋಡೆಯಲ್ಲಿರುವ ಮಿಥುನ ಶಿಲ್ಪ, ಹಾವು- ಚೇಳು, ಅಡಿಪಾಯ, ಬಣ್ಣ ತಯಾರಿ ಬಗ್ಗೆ ಅಧಿಕೃತ ವಿವರಣೆ ನೀಡುತ್ತಿರುವ ಇಕ್ಕೇರಿ ಸಮೀಪದ ಹುಲಿಮನೆಯವರೇ ಆದ ನಿವೃತ್ತ ಉಪನ್ಯಾಸಕ ಕಾಳೆ ಮನೆತನದ ಗಣಪತಿ ಹೆಚ್.ಕೆ.
   ಅವರು ಕೆಳದಿ ಇತಿಹಾಸದ ಬಗ್ಗೆ ಹೆಚ್ಚು ತಿಳಿದಿದ್ದಾರೆ, ಅವರು ನೂರಾರು ಪುಸ್ತಕಗಳನ್ನ ಓದಿ ಪಡೆದ ಇತಿಹಾಸ - ಸ್ಥಳ ಸಂಶೋಧನೆಗಳನ್ನ ಇಕ್ಕೇರಿ ದೇವಾಲಯದ ಎದುರು ನಿಂತು ದೃಶ್ಯ ಮಾಧ್ಯಮದಲ್ಲಿ ವಿವರಿಸುತ್ತಿರುವುದು ನೋಡುವ ವೀಕ್ಷಕನಿಗೆ ಕೆಳದಿ ಇತಿಹಾಸ ಸ್ವಾರಸ್ಯಕರವಾಗಿ ಸುಲಭವಾಗಿ ತಿಳಿಯುತ್ತಿದೆ.
 ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/VNfkSaoh5nM?feature=shared

https://youtu.be/Kg8W2S83klM?feature=shared

  ಇಕ್ಕೇರಿ ದೇವಾಲಯದ ಒಳಾಂಗಣದ ಮಂಟಪದಲ್ಲಿ ಪ್ರಖ್ಯಾತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಲ್ ತಮ್ಮ #ಅಮೃತ_ಘಳಿಗೆ ಸಿನಿಮಾದ ಒಂದು ನೃತ್ಯ ಗೀತೆ "ಪಾರ್ವತಿ ಪರಶಿವನ ಪ್ರಣಯ ಪ್ರಸಂಗ" ಚಿತ್ರಿಕರಣ ಮಾಡಿದ್ದರು ಆ ಸಿನಿಮಾ ಪ್ರಸಿದ್ದಿಯೂ ಆಗಿತ್ತು.
   ನನಗೆಲ್ಲ ಗೊತ್ತಿದೆ... ಇತಿಹಾಸ ಎಲ್ಲಾ ತಿಳಿದಿದ್ದೇನೆ .... ಈ ಡಿಜಿಟಲ್ ಮಾಧ್ಯಮದವರಿಗೆ ಸರಿಯಾಗಿ ಇತಿಹಾಸವೇ ಗೊತ್ತಿಲ್ಲ.....ಓದಿಕೊಂಡಿಲ್ಲ... ಉಚ್ಚಾರಣೆ ಸರಿ ಇಲ್ಲ.... ASI (ಪುರಾತತ್ವ ಇಲಾಖೆ) ಅನುಮತಿ ಪಡೆದಿದ್ದಾರಾ....ಅರಣ್ಯ ಇಲಾಖೆ ಅನುಮತಿ ಪಡೆದಿದ್ದಾರಾ.. ಅವರ ಮೇಲೆ ಕೇಸ್ ದಾಖಲು ಮಾಡಿ ಎಂದು ಲಿಖಿತ ದೂರು ಮೈಲ್ ಮಾಡುವವರು  ನಮ್ಮ ಜಿಲ್ಲೆಯಲ್ಲಿ ಅನೇಕರು ಇದ್ದಾರೆ.
    ಡಿಜಿಟಲ್ ಮಾಧ್ಯಮ ಸಂಸ್ಥೆ ನಮ್ಮ ಜಿಲ್ಲೆಯ ಇತಿಹಾಸ ಮುಂದಿನ ತಲೆಮಾರಿಗೆ ಯೂಟ್ಯೂಬ್ ನಲ್ಲಿ ದಾಖಲೆ ಮಾಡುತ್ತಿರುವುದರಿಂದ ಅವರಿಗೆ ನಮ್ಮ ಸಂಸ್ಥೆಯಿಂದ ವಾಸ್ತವ್ಯದ ಅತಿಥ್ಯ ವ್ಯವಸ್ಥೆ ಮಾಡಿದ್ದೆ ಈ ಸಂಸ್ಥೆ ಖಂಡೋಬ ರಾವ್ ಮ್ಯೂಸಿಯಂ, ಕದಂಬರ ಇತಿಹಾಸ, ಈಸೂರು ಸ್ವಾತಂತ್ರ್ಯ ಹೋರಾಟ, ಸಿಂಹಧಾಮ, ಸಕ್ರೆಬೈಲು ಆನೆ ಕ್ಯಾಂಪ್, ಕಡಿದಾಳು ಮoಜಪ್ಪ, ಕುವೆಂಪು, ಗೇರುಸೊಪ್ಪೆ ಅರಸರು, ಕೆಳದಿ ಇತಿಹಾಸ, ಕಾಗೋಡು ಹೋರಾಟ ಹೀಗೆ ಜಿಲ್ಲೆಯ ಸಾಲು ಸಾಲು ಇತಿಹಾಸ ದಾಖಲಿಸಿರುವುದು ಈ ಸಂಸ್ಥೆಯ ಯೋಗ್ಯತೆ ಸಾಬೀತು ಮಾಡಿದೆ.
  ಶ್ರೀಮತಿ ನಂದಿನಿ ಮತ್ತು ಆಕರ್ಷ ದಂಪತಿಗಳು ಪತ್ರಿಕೋದ್ಯಮದಲ್ಲಿ ಮಾಸ್ಟರ್ ಡಿಗ್ರಿ ಮಾಡಿದವರು, ದೊಡ್ಡ ಮೊತ್ತದ ಸಂಬಳದಲ್ಲಿ ಖ್ಯಾತ ಪತ್ರಿಕೆಯಲ್ಲಿ ಕೆಲಸ ಮಾಡಿದವರು, ಪಿಹೆಚ್ ಡಿ ಮಾಡಿದ್ದಾರೆ ಅವರು ನಮ್ಮ ನಾಡಿನ ಇತಿಹಾಸ ನಮಗೆ ತೋರಿಸಲು ವಿವರಣೆಗಾರರಿಗೆ ಪ್ರಶ್ನೆಗಳನ್ನ ಮಾಡುತ್ತಾರೆ ಹಾಗಂತ ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಅಂತಲ್ಲ ಈ ಚಾನಲ್ ವೀಕ್ಷಕರಲ್ಲಿ ಮಕ್ಕಳು ವಿದ್ಯಾರ್ಥಿಗಳೇ ಹೆಚ್ಚು ಆದ್ದರಿಂದ ಅವರ ಅರಿವಿಗೆ ನೆರವಾಗಲು ವಿಷಯ ಕೆದಕಲು ಈ ಪ್ರಶ್ನೆಗಳು ಇದನ್ನೆ ಬಾಲಿಷ ಪ್ರಶ್ನೆ ಅಂತ, ಈ ಅಮ್ಮನ ಉಚ್ಚಾರಣೆ ಸರಿ ಇಲ್ಲ ಅಂತೆಲ್ಲ ಗೇಲಿ ಮಾಡುವವರು ನಮ್ಮ ಜಿಲ್ಲೆಯವರೇ ಎಂಬುದು ಬೇಸರದ ವಿಚಾರ.
   ರಾಜ್ಯದಲ್ಲಿ ಒಂದೊಂದು ಜಿಲ್ಲೆಯಲ್ಲಿ ಕನ್ನಡ ಆಡು ಮಾತು ಉಚ್ಚಾರಣೆ ಬಿನ್ನವಾಗಿದೆ ಇವರ ಉಚಾರಣೆ ಹಾಸನದ ಒಕ್ಕಲಿಗ ಸಮುದಾಯದ ಕನ್ನಡ ಆಕ್ಸೆಂಟ್ ಆದರೆ ನಮ್ಮ ಜಿಲ್ಲೆಯ ಇತಿಹಾಸ ಅರಿತುಕೊಳ್ಳಲು ಇದೇನು ಅಡ್ಡಿಯಾಗಿಲ್ಲವಲ್ಲ.
  ಈ ಸಂಸ್ಥೆ ನನ್ನ ಆತಿಥ್ಯದ ಲಕ್ಷ ಪಟ್ಟು ಯೋಗ್ಯವಾದ ನನ್ನ ಶಿವಮೊಗ್ಗ ಜಿಲ್ಲೆಯ ಇತಿಹಾಸ ಮುಂದಿನ ತಲೆಮಾರಿಗಾಗಿ ದಾಖಲಿಸಿದ್ಧಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ.
   ನಾನು ಈ ಸಂಸ್ಥೆಗೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಬೈಕರ್ ಗಳಿಗೆ, ವಾಕರ್ ಗಳಿಗೆ ಪ್ರವಾಸಿಗಳಿಗೆ ಆತಿಥ್ಯ ಈ ಹಿಂದೂ ನೀಡಿದ್ದೇನೆ, ಈಗಲೂ ನೀಡುತ್ತೇನೆ ಅಷ್ಟೆ ಅಲ್ಲ ಮುಂದೂ ನೀಡುತ್ತೇನೆ,ನನಗೆ ನನ್ನ ಊರು ಜಿಲ್ಲೆ ಬಗ್ಗೆ ವಿಶೇಷ ಅಭಿಮಾನ ಇದೆ ಇದಕ್ಕಾಗಿ ನನ್ನ ನಿಂದಿಸುವವರ ಮನಸ್ಥಿತಿ ನನಗೆ ಅರ್ಥವಾಗಲಿಲ್ಲ, ರಾಜಕೀಯದಿಂದ ಸಾರ್ವಜನಿಕ ಜೀವನದಿಂದ ಅಷ್ಟೇ ಅಲ್ಲ ನಮ್ಮ ಮನೆ ಗೇಟಿನಿಂದಲೇ ಹೊರ ಹೋಗದ ನನಗೆ ಇವರ ವರ್ಥನೆ ಬೇಸರ ತರಿಸಿದೆ.
   ಇಷ್ಟೆಲ್ಲ ಬರೆಯಲು ಕಾರಣ ಈ ಸಂಸ್ಥೆ ಜೊತೆ ನಮ್ಮ ಜಿಲ್ಲೆಯ ಕೆಲ ಪತ್ರಕರ್ತರ ಜಟಾಪಟಿ ಮಾಡಿಕೊಂಡಿದ್ದಾರೆ, ಅವರುಗಳು ಪುರಾತತ್ವ ಇಲಾಖೆ -ಅರಣ್ಯ ಇಲಾಖೆಗೆ ಬರೆದ ದೂರುಗಳ ಪ್ರತಿ ನೋಡಿದೆ ಅಷ್ಟೇ ಅಲ್ಲದೆ ಅವರುಗಳು ಅವರ ಜೊತೆ ಮಾಡಿದ ಫೋನ್ ಸಂಭಾಷಣೆಯನ್ನೂ ಕೇಳಿದೆ ಅದರಲ್ಲಿ ಒಬ್ಬ ಜಿಲ್ಲೆಯ ಪತ್ರಕರ್ತ ನನಗೆ ಬೇವರ್ಸಿ ಅಂತ ಬೈದಿದ್ದಾನೆ... ಇರಲಿ ಇಂತ ಸಭ್ಯರ ಮುಖವಾಡ ಬಯಲಾಗಿದೆ.
  #ಪತ್ರಕರ್ತರಿಗೆ_ಬರಹಗಾರರಿಗೆ_ಸಾಮಾಜಿಕ_ಜವಾಬ್ದಾರಿ_ಮತ್ತು_ರಾಜಕೀಯ_ಅರಿವು
#ಎಷ್ಟು_ಮುಖ್ಯ_ಎಂದು_ಗೊತ್ತಿಲ್ಲದಿದ್ದರೆ_ಯಾರೇನು_ಮಾಡಲು_ಸಾಧ್ಯ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...