#ಕವಿ_ದೇವನೂರು_ಮಹಾದೇವರು_10_ಜೂನ್_1948_ಹುಟ್ಟಿದ_ದಿನ
#ಎಪ್ಪತ್ತಾರನೆ_ಹುಟ್ಟು_ಹಬ್ಬದ_ಶುಭ_ಹಾರೈಕೆ_ಅಪಿ೯ಸುತ್ತೇನೆ
#ಈವರೆಗೆ_ಮುಖತಃ_ಬೇಟಿ_ಆಗಲಿಲ್ಲ
#ಅವರ_ಜೊತೆ_ಫೋನ್_ಸಂಬಾಷಣೆ_ಮಾಡಿದ್ದೆ.
ಇವತ್ತು ನಮ್ಮ ಖ್ಯಾತ ಕವಿ ದೇವನೂರು ಮಹಾದೇವರ 76ನೇ ಹುಟ್ಟು ಹಬ್ಬ ಅವರಿಗೆ ನನ್ನ ಶುಭ ಕಾಮನೆಗಳನ್ನ ಅರ್ಪಿಸುತ್ತಾ ಅವರ ಜೊತೆ ಪೋನಿನಲ್ಲಿ ಒಮ್ಮೆ ಮಾತ್ರ ಮಾತನಾಡಿದ ನೆನಪುಗಳ ಮತ್ತೊಮ್ಮೆ ಬರೆಯ ಬೇಕನ್ನಿಸಿತು...
ಅವತ್ತು ಬೆಳಿಗ್ಗೆ 4-ನವೆಂಬರ್-2016 ರಂದು ದೇವನೂರು ಮಹದೇವರಿಂದ ಪೋನ್ ಬಂದಿತ್ತು.....
ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು. "#ಹಲೋ_ನಾನು_ದೇವನೂರುಮಹಾದೇವ" ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........
ನೀವು ಬರೆದ #ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ...ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ನಮ್ಮ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ....
ನೀವು ದಸರಾ ಉದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ ಹಾಗೇನಿಲ್ಲ ಆ ಸಂದಭ೯ ಹಾಗಿತ್ತು ಆದ್ದರಿಂದ ನಿರಾಕರಿಸಿದೆ....
ಈ ಸಾರಿಯ 29- ಡಿಸೆಂಬರ್-2016ರ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು.....
ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ ಅಂದದ್ದಕ್ಕೆ ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ ಅಂದರು.......
ಮೈಸೂರಿಗೆ ಬನ್ನಿ ಅಮಂತ್ರಿಸಿದರು....
Comments
Post a Comment