#ಕೆಳದಿ_ಅರಸರ_ಮೂರನೆ_ರಾಜದಾನಿ_ಬಿದನೂರು_ನಗರದ
#ಅಮೋಘ_ವಿವರಣೆ_ಡಿಜಿಟಲ್_ಮಾಧ್ಯಮದಲ್ಲಿ_ನೀಡುತ್ತಿರುವ
#ನಮ್ಮ_ಜಿಲ್ಲೆಯ_ಇತಿಹಾಸ_ಸಂಶೋದಕ_ಅಂಬ್ರಯ್ಯ_ಮಠ್_ಪ್ರತಿಕ್ರಿಯೆ
#ನಾನು_ಅವರಿಗೆ_ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋಧಕರೆಂದು_ಬರೆದಿದ್ದೆ
#ಕಾರಣ_ಈ_ಹಿಂದೆ_ಖ್ಯಾತ_ಇತಿಹಾಸ_ಸಂಶೋದಕ_ಎಂದು_ಕರೆದಿದ್ದಕ್ಕೆ
ಅಂಬ್ರಯ್ಯ ಮಠರೆ ನಿಮ್ಮ ಇತಿಹಾಸ ಜ್ಞಾನಕ್ಕೆ ದನ್ಯೋಸ್ಮಿ, 55 ವರ್ಷದಿಂದ ಬಿದನೂರು ಕೋಟೆ ನೋಡುತ್ತಾ ಬಂದಿದ್ದೇನೆ, ಕೋಟೆ ಬಾಗಿಲಿನ ಎದರು ಪ್ರವಾಸಿ ಮಂದಿರ ಇತ್ತು ಅಲ್ಲಿ ನಮ್ಮ ಪ್ರೀತಿಯ ರಂಗಣ್ಣ ಇದ್ದರು ನಂತರ ಅದು ನಶಿಸಿತು ರಂಗಣ್ಣ ಸಾಗರದ ತಹಸೀಲ್ದಾರ್ ಕಛೇರಿಯಲ್ಲಿ ವೃತ್ತಿ ಮಾಡಿ ನಿವೃತ್ತರಾದರು.
ನಗರ ಕೋಟಿಯಲ್ಲಿ ಪುರಾತತ್ವ ಇಲಾಖೆಯಲ್ಲಿ ಸೇವೆಯಲ್ಲಿದ್ದ ಪ್ರಕಾಶ್ ಗೆ ಅವರ ಮೀಸೆಯಿಂದ ಮೀಸೆ ಪ್ರಕಾಶ್ ಅನ್ನುತ್ತಿದ್ದರು ನಂತರ ಅವರು ಶಿವಮೊಗ್ಗ ಅಬಕಾರಿ ಇಲಾಖೆ ನೌಕರ ಸಂಘದ ಅಧ್ಯಕ್ಷರಾಗಿದ್ದರು.
ಅವರ ಪುತ್ರಿ ಸಾಗರ ನಗರಸಭಾ ಅಧ್ಯಕ್ಷೆ ಆಗಿದ್ದರು, ನಾನು ಈಜು ಕಲಿತಿದ್ದು ದೇವಗಂಗೆ ಕೊಳ ಹಾಗಾಗಿ ನನಗೂ ನಿಮ್ಮಂತೆ ಬಿದನೂರು ನಗರ ಹೆಚ್ಚು ಆಕರ್ಷಣೆಯ ಸ್ಥಳ ಆದರೆ ಕೋಟೆ ಸ್ಮಾರಕದ ಎದರು ನಿಂತು ನೀವು ಕೆಳದಿ ಅರಸರ ಇತಿಹಾಸ ಹೇಳುವ ಪರಿ ಮಾತ್ರ ಅದ್ವಿತೀಯ.
ಅಂಬ್ರಯ್ಯ ಮಠರ ಪತ್ರ.....
ನಮಸ್ತೆ ಅರುಣ್ ಪ್ರಸಾದ್ ಅವರೇ .ಮೂಲತಹ ನನ್ನೂರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಹತ್ತಿರದ ಕೊಡಗಾನೂರು.ಆದರೆ ಆ ಊರಿನ ಸಂಪರ್ಕ ಕಳೆದುಕೊಂಡು ಸುಮಾರು 50 ವರ್ಷಗಳೇ ಆಯಿತು.ನಾನೀಗ ಬಿದನೂರು ನಗರದವನು.ತಾವು ನನ್ನನ್ನು ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋಧಕ ಎಂದು ಕರೆದದ್ದಕ್ಕೆ ಖಂಡಿತವಾಗಿಯೂ ಬೇಸರವಿಲ್ಲ.ಏಕೆಂದರೆ ನಾನು ಈಗಲೂ ಇತಿಹಾಸಕ್ಕೆ ಹೊಸಬನೇ.ಈಗಲೂ ನಾನು ಉದಯೋನ್ಮುಖನೇ.ನಾನೀಗಲು ಇತಿಹಾಸದ ವಿದ್ಯಾರ್ಥಿಯೇ.ಹಾಗಾಗಿ ತಾವು 'ಉದಯೋನ್ಮುಖ' ಎಂದು ಕರೆದಿದ್ದರಲ್ಲಿ ತಪ್ಪಿಲ್ಲ .ಖ್ಯಾತ ಇತಿಹಾಸ ಸಂಶೋಧಕರ ನಾಡು ಶಿವಮೊಗ್ಗ ಜಿಲ್ಲೆ.ಆ ಇತಿಹಾಸ ಸಂಶೋಧಕರ ಮುಂದೆ ನಾನೀಗಲೂ ಎಳೆ ಯ. ತಾವು ನನ್ನ ಬಗ್ಗೆ ತೋರಿಸುತ್ತಿರುವ ಪ್ರೀತಿಗೆ ಶಿರಭಾಗಿದ್ದೇನೆ .ನನ್ನ ಜಂಗಮವಾಣಿ ಸಂಖ್ಯೆ ಬದಲಾಗಿದ್ದು ಇದೀಗ- 9480402712 ಈ ನಂಬರಿಗೆ ಸಂಪರ್ಕಿಸಬಹುದು.ಇದನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇನೆ ತಮ್ಮ ಇತಿಹಾಸ ಪ್ರೀತಿಯನ್ನು ಗಮನಿಸುತ್ತಲೇ ಬಂದವನು ನಾನು.ಆನಂದಪುರದ ಬಗ್ಗೆ ಅದೆಷ್ಟೊಂದು ತಿಳಿದುಕೊಂಡಿದ್ದೀರಿ.ತುಂಬಾ ಸಂತೋಷ ನನಗೆ.ನಿಮ್ಮಂಥವರು ಹೆಚ್ಚಾಗಲಿ ಎನ್ನುವುದೇ ನನ್ನ ಆಶಯ. ಪ್ರೀತಿ ಇರಲಿ.
ಅಂಬ್ರಯ್ಯ ಮಠ
ಬಿದನೂರು ನಗರ
14 -ಜೂನ್-2024
Comments
Post a Comment