https://youtu.be/DYjKTGe-pkA
#ದೇಸಿ_ಬಗ೯ರ್_ಪತ್ರೋಡೆ
#ಮರ_ಕೆಸದ_ಎಲೆ_ಪತ್ರೋಡೆ
#ಸಾವಯವ_ಕೆಸದ_ಎಲೆಗಳು
#ರುಚಿಕರ_ಆರೋಗ್ಯಕರ_ತಿನಿಸು
#ಮು೦ಗಾರು_ನಂತರ_ಮರ_ಕೆಸ_ಅಪರೂಪ.
ಮೊನ್ನೆ ಅಣಬೆ... ನಿನ್ನೆ ಕಳಲೆ..... ಇವತ್ತು ಮರಕೆಸದ ಖಾದ್ಯದ ವಿಶೇಷ .....
ಇದು ಪಶ್ಚಿಮ ಘಟ್ಟದ ಮಲೆನಾಡಿನ ಸಂಪ್ರದಾಯಿಕ ಆಹಾರ ಪದ್ದತಿ.
ವಿವಿದ ಕೆಸುವಿನ ಎಲೆಯಿಂದ ಪತ್ರೋಡೆ ತಯಾರಿಸ ಬಹುದಾದರೂ ಮರದ ಮೇಲೆ ಪರಾವಲಂಬಿಯಾಗಿ ಬೆಳೆಯುವ (ಆರ್ಕಿಡ್ ರೀತಿ ) ಮರ ಕೆಸುವಿನ ಎಲೆಯಲ್ಲಿ ತಯಾರಿಸುವ ಪತ್ರೋಡೆಯ ರುಚಿ ಘಮ ವಿಶಿಷ್ಟವಾಗಿರುತ್ತದೆ.
ಪತ್ರೋಡೆ ತಯಾರಿಸುವುದು ಸುಲಭ ಮಸಾಲೆ ಹಿಟ್ಟು ತಯಾರಿಸಿಕೊಂಡು ಕೆಸುವಿನ ಎಲೆಗೆ ಸವರುವುದು ಅದರ ಮೇಲೆ ಇನ್ನೊಂದ ಕೆಸುವಿನ ಎಲೆ... ಒಟ್ಟು ಐದು ಎಲೆಯ ಪದರ ಮಾಡಿ ಅದನ್ನು ಮಡಚಿ
ಈ ಎಲೆಗಳು ಯಾವುದೇ ರಾಸಾಯನಿಕ ಗೊಬ್ಬರ ಅಥವ ಕೀಟನಾಶಕ ತಾಗದ ಶುದ್ಧ ಸಾವಯವ ಇದಕ್ಕೆ ಬಳಸುವ ಮಸಾಲೆ ಕೂಡ ಆದ್ದರಿಂದ ಇದು ಶುದ್ದ ಸಾವಯುವ ದೇಶಿ ಬರ್ಗರ್ ಎನ್ನಬಹುದು.
#ಮರ_ಕೆಸುವಿನ_ರೆಸಿಪಿ.
1.ಮರ ಕೆಸುವಿನ ಎಲೆ 50.
2. ಅಕ್ಕಿ 2.5 ಕಪ್.
3. ಕಡಲೆಬೇಳೆ ಅರ್ಧ ಕಪ್
4. ತೊಗರಿ ಬೇಳೆ ಕಾಲು ಕಪ್
5 . ಉದ್ದಿನ ಬೇಳೆ ಅರ್ಧ ಕಪ್,
6. ಹೆಸರು ಬೇಳೆ 2 ಟೇಬಲ್ ಚಮಚ.
7. ಕಾಳು ಮೆಣಸು 2 ಟೇಬಲ್ ಚಮಚ.
8. ತೆಂಗಿನ ಕಾಯಿ ತುರಿ ಅರ್ಧ ಕಾಯಿ.
9.ಓಮ ಒಂದೂವರೆ ಟೀ ಚಮಚ.
10. ಇಂಗು ಅರ್ಧ ಟೀ ಚಮಚ .
11. ದ್ಯಾವನೂರು ಒಣ ಮೆಣಸು 60
12. ಹುಳಿ ಒಂದು ಕಿತ್ತಳೆ ಹಣ್ಣಿನ ಗಾತ್ರ.
13. ಬೆಳ್ಳುಳ್ಳಿ ಎರೆಡು.
14 . ಹುರಿಯಲು ಕೊಬ್ಬರಿ ಎಣ್ಣೆ.
15. ಕೊತ್ತುಂಬರಿ 4 ಟೇಬಲ್ ಚಮಚ
16, ಜೀರಿಗೆ 2 ಟೇಬಲ್ ಚಮಚ.
17. ಮೆಂತೆ ಅರ್ಧ ಟೀ ಚಮಚ.
18, ಬೆಲ್ಲ ಒಂದು ಟೀ ಚಮಚ.
19. ಅರಿಶಿಣ ಪುಡಿ,
20 ರುಚಿಗೆ ತಕ್ಕಷ್ಟು ಉಪ್ಪು.
#ಮಾಡುವ_ವಿಧಾನ
ಅಕ್ಕಿ ನಾಲ್ಕು ಗಂಟೆ ನೆನೆಸಿ ಅದಕ್ಕೆ ತೆಂಗಿನ ಕಾಯಿ ಹುಳಿ ಅರಿಶಿಣ ಬೆಲ್ಲ ಉಪ್ಪು ಸೇರಿಸುವುದು ಮತ್ತು ಪ್ರತ್ಯೇಕವಾಗಿ ಉಳಿದ ಎಲ್ಲಾ ಪದಾರ್ಥಗಳನ್ನು ಹುರಿದು ಸೇರಿಸಿ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಹೆಚ್ಚು ನುಣ್ಣಗೆ ರುಬ್ಬಿಕೊಳ್ಳಿ ಇದನ್ನ ಮರ ಕೆಸುವಿನ 5 ಎಲೆಗಳಿಗೆ ಪದರವಾಗಿ ಸವರಿ ನಂತರ ರೋಲ್ ಮಾಡಿ ಹಬೆ ಬರುವ ಇಡ್ಲಿ ಪಾತ್ರೆಯಲ್ಲಿ ಬಾಳೆ ಎಲೆ ಹರಡಿ ಅದರ ಮೇಲೆ ಪತ್ರೋಡೆ ರೋಲ್ ಮೀಡಿಯಂ ಉರಿಯಲ್ಲಿ 40 ನಿಮಿಷ ಬೇಯಿಸಿ ನಂತರ ಸ್ವಲ್ಪ ತಣ್ಣಗಾದ ಮೇಲೆ ರೋಲ್ ಗಳನ್ನು ನಿಮಗಿಷ್ಟದ ಅಳತೆಗೆ ಕತ್ತರಿಸಿ ಕಾವಲಿಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಗರಿ ಗರಿಯಾಗಿ ಹುರಿದರೆ ಪತ್ರೋಡೆ ಸವಿ ಸವಿಯಾಗಿ ತಿನ್ನಬಹುದು.
Comments
Post a Comment