Blog number 2173.ಮಿಸ್ಸಿನ ಡೈರಿ ಮೇದಿನಿ ಕೆಸುವಿನ ಮನೆ ಅವರ ಪುಸ್ತಕ ಪ್ರಕಟವಾಗಿ 10 ದಿನಕ್ಕೆ ಎರಡನೆ ಮುದ್ರಣವಾಗಿದೆ ನಮ್ಮ ಸಾಗರ ತಾಲೂಕಿನ ಉದಯೋನ್ಮುಖ ಸಾಹಿತಿ ಶಿಕ್ಷಕಿ ಆದ ಅವರಿಗೆ ಅಭಿನಂದನೆಗಳು
#ಮೇದಿನಿ_ಕೆಸುವಿನಮನೆ
#ಮಲೆನಾಡಿನ_ಉದಯೋನ್ಮುಖ_ಸಾಹಿತಿ
#ಇವರ_ಮಿಸ್ಸಿನ_ಡೈರಿ_ಪುಸ್ತಕ_ಎರಡನೇ_ಮುದ್ರಣ_ಕಂಡಿದೆ
#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲ್ಲೂಕಿನ_ಹೊಳೆಯಾಚೆಯ_ಕೆಸುವಿನ_ಮನೆ_ಎಂಬ_ಗ್ರಾಮದವರು
#ವೃತ್ತಿಯಲ್ಲಿ_ಶಿಕ್ಷಕಿ_ಪ್ರವೃತ್ತಿ_ಸಾಹಿತ್ಯ_ಪ್ರವಾಸ
#ನಾನು_ಪೇಸ್_ಬುಕ್_ನಲ್ಲಿ_ಇವರ_ಬರಹಗಳ_ಫ್ಯಾನ್
ಮೇದಿನಿ ಕೆಸುವಿನ ಮನೆ ಅವರ ನಿತ್ಯ ಪೋಸ್ಟ್ ನೋಡುತ್ತೇನೆ ಅವರ ಬಾಲ್ಯದಲ್ಲಿ ಸಂಜೆ ಮನೆಗೆ ಬರದ ಗೋವು ಹುಡುಕಿಕೊಂಡು ಹೋದ ಬರಹ ನನಗೆ ತುಂಬಾ ಹೃದಯಕ್ಕೆ ತಾಗಿದ ಲೇಖನ.
ರಾಣಿ ಚೆನ್ನ ಬೈರಾದೇವಿ ತಡ ರಾತ್ರಿ ಪ್ರಯಾಣದಲ್ಲಿ ಆಯಾಸದಿಂದ ಇವರ ಪೂರ್ವಿಕರ ಮನೆಯಲಿ ಆಶ್ರಯ ಪಡೆದಾಗ ಆ ರಾತ್ರಿ ಬೇರಾವುದೇ ತರಕಾರಿ ಇಲ್ಲದ್ದರಿಂದ ಕೆಸುವಿನ ಎಲೆಯ ಪದಾರ್ಥ ಮಾಡಿ ಹಾಕಿದ್ದನ್ನ ಸೇವಿಸಿ ರಾಣಿ ಚೆನ್ನ ಬೈರಾದೇವಿ ಈ ಹೊಸ ರುಚಿಯ ಬಗ್ಗೆ ವಿಚಾರಿಸುತ್ತಾಳೆ (ಮನೆಯವರಿಗೆ ಆ ರಾತ್ರಿ ಇವರು ರಾಣಿ ಅಂತ ಗೊತ್ತಿರುವುದಿಲ್ಲ) ಇದರಿಂದ ಇವರ ಮನೆತನಕ್ಕೆ #ಕೆಸುವಿನ_ಮನೆ ಎಂಬ ಹೆಸರು ಬಂತು ಅಂತ ಬರೆದಿದ್ದಾರೆ.
#ತುರಂಗ_ಭಾರತ ಬರೆದ ಕವಿ ಪರಮದೇವ ಹುಟ್ಟಿದ್ದು ನಿಟ್ಟೂರು, ಸಾಗರ ತಾಲೂಕಿನ ಬೀಮನಕೋಣೆಯ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಾರೆ ಅವರ ನೆನಪಿಗಾಗಿ ಹೆಗ್ಗೋಡಿನ ರಸ್ತೆ ಒಂದಕ್ಕೆ #ಕವಿ_ಪರಮ_ದೇವ_ಮಾರ್ಗ ಎಂದು ನಾಮಕರಣ ಮಾಡಿದ್ದಾರೆ ಈ ಕವಿಯ ಮೇಲೆ ಮೇದಿನಿ ಅವರು ಪಿ ಹೆಚ್ ಡಿ ಮಾಡುತ್ತಿದ್ದಾರೆ ಎಂದು ಕೇಳಿದ್ದೆ.
ಅವರ #ಮಿಸ್ಸಿನ_ಡೈರಿ ಕಳೆದ ಕೆಲವೇ ದಿನದ ಹಿಂದೆ ವೀರ ಲೋಕ ಪುಸ್ತಕ ಸಂಸ್ಥೆಯಿಂದ ಪ್ರಕಟವಾಗಿ (10 ದಿನದಲ್ಲಿ) ಈಗ ಎರಡನೆ ಮುದ್ರಣ ಆಗಿದೆ ಈ ಮೂಲಕ ಈ ಸಂಸ್ಥೆ ಹೊಸ ಬರಹಗಾರರ ಪುಸ್ತಕ ಹೊಸ ರೀತಿಯಲ್ಲಿ ಮಾರಾಟ ಮಾಡುವ ಮೂಲಕ ದಾಖಲೆ ಸೃಷ್ಟಿಸಿದೆ.
Comments
Post a Comment