Skip to main content

Blog number 2222. ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ನಿರ್ಮಿಸಿರುವ ಸ್ಮಾರಕ ರಾಣಿ ಚಂಪಕಾಳ ಪ್ರೇಮ ಸೌದ ಇದನ್ನು ಆದರಿಸಿ ನಾನು ಬರೆದ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕ ಕಾದಂಬರಿ ಓದಿ 2020 ರಲ್ಲಿ ಖ್ಯಾತ ಇತಿಹಾಸ ಸಂಶೋಧಕ ಅಂಬ್ರಯ್ಯ ಮಠರು ಬರೆದ ಅಭಿಪ್ರಾಯ ವಿಮರ್ಶೆ ಇಲ್ಲಿದೆ.

#ಕೆಳದಿ_ಇತಿಹಾಸದ_ಖ್ಯಾತಸಂಶೋದಕ

#ಅ೦ಬ್ರಯ್ಯಮಠ_ಬಿದನೂರುನಗರವಾಸಿ

#ಅವರು_4_10_2020ರಲ್ಲಿ_ನನ್ನ_ಕಾದಂಬರಿ

#ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ

#ಬೆಸ್ತರರಾಣಿ_ಚಂಪಕಾ_ಓದಿ_ವಿಮರ್ಶೆ_ಬರೆದಿದ್ದಾರೆ

#ಅವರು_ನನ್ನ_ಕಾದಂಬರಿ_ಓದಿ_ಪ್ರತಿಕ್ರಿಯಿಸಿದ್ದು_ನನಗೆ_ಸಂತೋಷ_ತಂದಿದೆ.

#ಡಿಜಿಟಲ್_ಮಾಧ್ಯಮದಲ್ಲಿ_ಅವರು_ಬಿದನೂರು_ಕೋಟೆ_ವಿವರಣೆ_ನೀಡುತ್ತಿದಾರೆ

#ಈ_ಸಂದರ್ಭದಲ್ಲಿ_ಇನ್ನೊಮ್ಮೆ

ಶ್ರೀ.ಕೆ.ಅರುಣ್ ಪ್ರಸಾದರು ಆನಂದಪುರದ ಕುರಿತಂತೆ ಇನ್ನೂ ಹೆಚ್ಚಿನ ಶೋಧನೆ ಮಾಡುವಂತಾಗಲಿ, ಹೆಚ್ಚು ಹೆಚ್ಚು ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡುವಂತಾಗಲಿ ಎಂದು ಹಾರೈಸುತ್ತ; ಈ ಕೃತಿಯನ್ನು ಓದುವ ಪ್ರತಿಯೊಬ್ಬರೂ  ಒಮ್ಮೆ ಆನಂದಪುರದ ಚಂಪಕ ಸರಸ್ಸನ್ನು ನೋಡುವಂತಾಗಲಿ, ಇದರ ರಕ್ಷಣೆಗೆ ಸರ್ಕಾರ ಹಾಗೂ ಸಾರ್ವಜನಿಕರು ಮುಂದಾಗಲಿ ಎಂದು ವಿನಂತಿಸಿಕೊಳ್ಳುತ್ತೇನೆ.

ದಿನಾಂಕ: 04.10.2020 ಅಂಬ್ರಯ್ಯ ಮಠ, ಬಿದನೂರುನಗರ
9480402712

 #ಬೆಸ್ತರರಾಣಿ_ಚಂಪಕಾ” ಕಾದಂಬರಿ ಕುರಿತು  ಒಂದು ಪ್ರತಿಕ್ರಿಯೆ
 ಶ್ರೀ ಕೆ.ಅರುಣ್ ಪ್ರಸಾದ್ ಅವರು ಬರೆದ “ಬೆಸ್ತರರಾಣಿ ಚಂಪಕಾ” ಸಂಪೂರ್ಣವಾಗಿ  ಓದಿದೆ. ಓದಿದೆ ಎನ್ನುವುದಕ್ಕಿಂತ  ಕೃತಿ ಓದಿಸಿಕೊಂಡುಹೋಯಿತು ಎನ್ನುವುದು ಹೆಚ್ಚು ಸೂಕ್ತ ಎನ್ನಿಸುತ್ತದೆ. ಓದಿದ ಮೇಲೆ ಆ ಕುರಿತಂತೆ ಬರೆಯದೇ ಹೋದರೆ ಅಪಚಾರವಾದೀತು ಎಂಬ ಕಾರಣಕ್ಕಾಗಿ ನಾಲ್ಕು ವಾಕ್ಯ ಬರೆಯಬೇಕೆಂದು ಕುಳಿತೆ.
 ಒಟ್ಟು 58 ಅಧ್ಯಾಯಗಳಲ್ಲಿ ಚಂಪಕಾ ಎಂಬ ಬೆಸ್ತರ ಕನ್ಯೆಯ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಲೇಖಕರು ಸಫಲವಾಗಿದ್ದಾರೆ.
 ನಿಜ. ಲೇಖಕರು ಹೇಳಿದಂತೆ ಕೆಳದಿ ಸಾಮ್ರಾಜ್ಯದ ಇತಿಹಾಸದಲ್ಲಿ ಎಲ್ಲಿಯೂ ಕಂಡು ಬರದ ಅಮಾಯಕಿ ಚಂಪಕಾನ ಕುರಿತು ಪ್ರಸ್ತಾಪಿಸಿ, ಒಂದು ಕಿರು ಕಾದಂಬರಿಯನ್ನು ಬರೆದು ಆಕೆಯ ಹೆಸರನ್ನು ಚಿರಸ್ಥಾಯಿಯಾಗಿಸಿದ ಅವರ ಕೆಲಸ ಅತ್ಯಂತ ಸ್ತುತ್ಯಾರ್ಹವಾದುದು.
 ಚಂಪಕಾನ ಕತೆಯನ್ನು ಹೇಳಹೇಳುತ್ತಲೇ ಕೆಳದಿಯರಸರ ಕುರಿತಂತೆ ಸಾಕಷ್ಟು ವಿವರಗಳನ್ನೂ ಕಾದಂಬರಿ ಪ್ರಸ್ತಾಪಿಸುತ್ತದೆ. ಕೋಟೆಗಾರರ ಬಗ್ಗೆ, ಪೋರ್ಚುಗೀಸರ ಬಗ್ಗೆ, ಅರಬ್ಬರ ಸಮುದ್ರಯಾನದ ಬಗ್ಗೆ, ರಾಣಿ ಅಬ್ಬಕ್ಕಳ ಬಗ್ಗೆ, ಗಂಗಾಮತಸ್ತರ ಬಗ್ಗೆ, ಗಂಗಾಮಠದ ಬಗ್ಗೆ, ಬಸವಣ್ಣನವರು ಹಾಗೂ ಅವರ ಕಾಲದಲ್ಲಿ ಆಗಿ ಹೋದ ಅಂಬಿಗರ ಚೌಡಯ್ಯನ ಬಗ್ಗೆ, ಕೊಲ್ಲೂರು ಮೂಕಾಂಬಿಕೆಯ ಬಗ್ಗೆ, ಕೊಡಚಾದ್ರಿಯ ಬಗೆಗೆ, ಬಾರಾ ಪಂಥ ಯೋಗಿಗಳ ಬಗ್ಗೆ, ಆನಂದಪುರ ಹಾಗೂ ಅಲ್ಲಿಯ ಕೋಟೆಯ ಬಗ್ಗೆ, ಸಂದರ್ಭಕ್ಕನಸುರಿಸಿ ಮಹಾಭಾರತದ ವ್ಯಕ್ತಿತ್ವಗಳ ಬಗ್ಗೆ, ಬಿದನೂರಿನ ಬಗೆಗೆ, ಇಕ್ಕೇರಿಯ ಬಗೆಗೆ, ಶೃಂಗೇರಿ ಕ್ಷೇತ್ರದ ಬಗೆಗೆ ಹೀಗೆ ಕಾದಂಬರಿಯುದ್ದಕ್ಕೂ ಹಲವಾರು ವಿಷಯಗಳು ತೆರೆದುಕೊಳ್ಳುತ್ತವೆ. ಕುತೂಹಲದ ಕಣ್ಣನ್ನು ತೆರೆಸುತ್ತವೆ. ಕಾದಂಬರಿ ತನ್ನ ಚೌಕಟ್ಟನ್ನು ಮೀರಿ ಬೆಳೆಯುತ್ತ, ಓದಿಸಿಕೊಳ್ಳುತ್ತ ಮುಂದೆ ಸಾಗುತ್ತದೆ.
 ಚಂಪಕಾ ಎಂಬ ರಂಗೋಲಿ ಕಲೆಯಲ್ಲಿ ನಿಷ್ಠಾತಳಾದ ಕನ್ಯೆ ವೆಂಕಟಪ್ಪನಾಯಕನ ಮನವನ್ನು ಮುದಗೊಳಿಸುತ್ತಾಳೆ, ಅವ್ಯಕ್ತವಾಗಿ ಆಕರ್ಶಿಸುತ್ತಾಳೆ. ಎಡೆಬಿಡದೆ ಕಾಡುತ್ತಾಳೆ. ಪ್ರೇಮಕಾವ್ಯಕ್ಕೊಂದು ಮುನ್ನುಡಿ ಬರೆಯುತ್ತಾಳೆ. ಹಾಗಂತ ಅವಳೆಂದೂ ವೆಂಕಟಪ್ಪನಾಯಕನ ಎದುರು ಕಾಣಿಸಿಕೊಂಡವಳಲ್ಲ. ಪ್ರೇಮ ನಿವೇದನೆಯನ್ನು ಮಾಡಿಕೊಂಡವಳೂ ಅಲ್ಲ.  ರಾಜಾ ವೆಂಕಟಪ್ಪನಾಯಕನೊಂದಿಗೆ ತನ್ನ ವಿವಾಹ ಆಗಲಿದೆ ಎಂದು ಕನಸು ಕಂಡವಳಲ್ಲ. ಮಹಾರಾಣಿ ಆಗುತ್ತೇನೆಂದು ಅವಳೆಂದೂ ಕನವರಿಸಿದವಳಲ್ಲ. ಅಪೇಕ್ಷೆ ಪಟ್ಟವಳೂ ಅಲ್ಲ. ಬದಲು ‘ಪ್ರಜೆಗಳ ಭಯ, ಭಕ್ತಿ ಹಾಗೂ ಗೌರವದ ದ್ಯೋತಕವಾಗಿ ಹೆಚ್ಚು ಶ್ರಮವಹಿಸಿ ರಂಗೋಲಿ ಸೃಷ್ಟಿಸುತ್ತಿದ್ದಳಷ್ಟೇ’ ಅದರ ನಿಮಿತ್ತವಾಗಿಯೇ ವಿಧಿ ತಾನೇತಾನಾಗಿ ಅವಳನ್ನು ಅರಸನ ಸಮೀಪಕ್ಕೆ ಕರೆದೊಯ್ಯತ್ತದೆ ನೀಲಮ್ಮನ ಸಹಾಯದೊಂದಿಗೆ. ಕೊನೆಗೊಮ್ಮೆ  ಇಕ್ಕೇರಿಯ ತನ್ನ ಪರಿವಾರವನ್ನು ಅಜ್ಞಾತದಲ್ಲಿಟ್ಟು ಆನಂದಪುರದ ಕೋಟೆಯರಮನೆಯಲ್ಲಿ ಚಂಪಕಾಳೊಂದಿಗೆ ಮದುವೆಯೆಂಬ ಶಾಸ್ತ್ರವನ್ನು ಮುಗಿಸುತ್ತಾನೆ ವೆಂಕಟಪ್ಪನಾಯಕ. ಕೆಲವೇ ದಿನಗಳಲ್ಲಿ ರಾಜ್ಯದ ಪ್ರಜೆಗಳ ಕೆಟ್ಟನಾಲಿಗೆಗಳಿಗೆ ಆಹಾರವಾಗುತ್ತಾನೆ. ಅದೆಲ್ಲಕ್ಕಿಂತ ಮಿಗಿಲಾಗಿ ನಿರ್ದೋಶಿ ಚಂಪಕಾಳನ್ನೇ ದೋಶಿಯನ್ನಾಗಿಸುವ ಸಮಾಜ ಹಾಗೂ ಇಕ್ಕೇರಿಯ ಅರಮನೆಯಂಗಳ; ಚಂಪಕಾಳ ದುರಂತ ಮರಣಕ್ಕೆ ಕಾರಣವಾಗುತ್ತದೆ. ಚಂಪಕಾಳ ಮರಣ ವೆಂಕಟಪ್ಪನಾಯಕನಿಗೆ ವೇದನೆಯನ್ನುಂಟು ಮಾಡಿತು. ಚೆಲುವೆ ಚಂಪಕಾಳ ಸಾತ್ವಿಕ ನಿಷ್ಠೆಗೆ ಮನಸೋತಿದ್ದ ಆತ ಆಕೆಯ ಸ್ಮರಣೆ ಇತಿಹಾಸವಾಗಲಿ ಎಂಬ ಕಾರಣಕ್ಕೆ ‘ಚಂಪಕ ಸರಸು’ವಿನ ನಿರ್ಮಾತೃವಾಗುತ್ತಾನೆ.
ನಂತರದ ದಿನಮಾನಗಳಲ್ಲಿ ‘ಪತಿಯಾದ ರಾಜಾ ವೆಂಕಟಪ್ಪನಾಯಕನಿಗಾಗಿ ಅವರ ಮೇಲಿನ ಕಳಂಕ ನಿವಾರಣೆಗಾಗಿ ಆತ್ಮಾಹುತಿ ಮಾಡಿಕೊಂಡು ಸಂತಳಾದಳು’ ಚಂಪಕಾ ಎಂದು ಪ್ರಜೆಗಳು ಕೊಂಡಾಡಿದರು. ದುರಂತದ ನಂತರ ಪಶ್ಚಾತ್ತಾಪಕ್ಕೆ ಒಳಗಾಗುವ ಸಮಾಜವನ್ನು ನೋಡುವಾಗÀ ‘ಇದೆಂಥ ಸಮಾಜ’ ಎನ್ನಿಸುತ್ತದೆ ಅಲ್ಲವೇ?
 ಒಂದು ಕೃತಿ ಹುಟ್ಟಬೇಕಾದರೆ ಅದರ ಹಿಂದೊಂದು ತಪನೆ ಬೇಕು, ಕುದಿ ಬೇಕು. ಇದಿಲ್ಲದೆ ಹುಟ್ಟುವ ಕೃತಿ ಬಹು ದಿನ ಉಳಿಯಲಾರದು. ಮಾತ್ರವಲ್ಲ ಓದುಗನ ಅಂತಃಕರಣಕ್ಕೆ ಮುಟ್ಟಲಾರದು. ತಟ್ಟಲಾರದು ಎಂಬುದು ನನ್ನ ವೈಯಕ್ತಿ ಅಭಿಪ್ರಾಯ. ಅಂಥದ್ದೇ ಕುದಿ ಸಾತ್ವಿಕ ಮನಸ್ಸಿನ ಕೆ.ಅರುಣ್‍ಪ್ರಸಾದ ಅವರ ಹೃದಯದಲ್ಲಿ ಹುಟ್ಟಿಕೊಂಡಿದೆ. ಚಡಪಡಿಕೆ ಶುರುವಾಗಿದೆ.  ಚಂಪಕಾ ಒಬ್ಬ ‘ವೇಶ್ಯ ಕನ್ಯೆ’ ಎಂಬ ಕೆಲವು ಪತ್ರಿಕೆಗಳ ಸುದ್ದಿಯನ್ನು ಓದಿ ಅವರ ಮನಸ್ಸು ಕುದ್ದುಹೋಗಿದೆ. ಪ್ರತಿಭಟನೆಗೆ ಮುಂದಾಗಿದೆ. ಅದರಲ್ಲೂ ಚಂಪಕಾ ಎನ್ನುವ ಕನ್ಯೆ ಆಗಿ ಹೋದುದೂ ಅವರು ನಡೆದಾಡುವ ಪ್ರದೇಶದಲ್ಲಿ! ತಮ್ಮೂರ ಮನೆಯ ಹುಡುಗಿ ಅವಳು!! ಅವಳಿಗೆ ಇಂಥ ಕಳಂಕ ಬಂದುದೇಕೆ? ಇದರಲ್ಲಿ ಚಾರಿತ್ರಿಕ ಸತ್ಯ ಎಷ್ಟಿದೆ? ಸುಳ್ಳಿನ ಕಂತೆ ಎಷ್ಟಿದೆ? ಎನ್ನುವ ಕುರಿತು ಇವರನ್ನು ಶೋಧನೆಗೆ ಹಚ್ಚಿದೆ. ಕ್ಷೇತ್ರ ಅಧ್ಯಯನಕ್ಕೆ  ನಾಂದಿ ಹಾಡಿದೆ. ಅದೆಲ್ಲದರ ಪರಿಣಾಮವೇÀ  ಈ ಕೃತಿಯ ಜನನ. ಹೀಗಾಗಿ ಈ ಕೃತಿ ಆನಂದಪುರದ ಇತಿಹಾಸಕ್ಕೆ ಒಂದು ಕಿರೀಟಪ್ರಾಯವಾಗಿದ್ದು ಮುಂದಿನ ಸಂಶೋಧನೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಕಾರಣದಿಂದ ಶ್ರೀ ಕೆ.ಅರುಣ್ ಪ್ರಸಾದ ಅಭಿನಂದನಾರ್ಹರು.
 ಶ್ರೀ.ಕೆ.ಅರುಣ್ ಪ್ರಸಾದ, ಆನಂದಪುರದ ಕುರಿತಂತೆ ಇನ್ನೂ ಹೆಚ್ಚಿನ ಶೋಧನೆ ಮಾಡುವಂತಾಗಲಿ, ಹೆಚ್ಚು ಹೆಚ್ಚು ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡುವಂತಾಗಲಿ ಎಂದು ಹಾರೈಸುತ್ತ; ಈ ಕೃತಿಯನ್ನು ಓದುವ ಪ್ರತಿಯೊಬ್ಬರೂ  ಒಮ್ಮೆ ಆನಂದಪುರದ ಚಂಪಕ ಸರಸ್ಸನ್ನು ನೋಡುವಂತಾಗಲಿ, ಇದರ ರಕ್ಷಣೆಗೆ ಸರ್ಕಾರ ಹಾಗೂ ಸಾರ್ವಜನಿಕರು ಮುಂದಾಗಲಿ ಎಂದು ವಿನಂತಿಸಿಕೊಳ್ಳುತ್ತೇನೆ.

ದಿನಾಂಕ: 04.10.2020 ಅಂಬ್ರಯ್ಯ ಮಠ, ಬಿದನೂರುನಗರ
94804 02712

(ಕೆಳದಿ ಅರಸೊತ್ತಿಗೆಯ ಇತಿಹಾಸದ ಬಗ್ಗೆ ಅದಿಕೃತವಾಗಿ ಮಾತಾಡುವ ಬರೆಯುವ ಕೆಲವೇ ಕೆಲವರಲ್ಲಿ ಅಂಬ್ರಯ್ಯ ಮಠ ಮುಂಚೂಣಿಯಲ್ಲಿದ್ದಾರೆ, ದೇಶ ವಿದೇಶ ಯಾತ್ರೆ ಮಾಡಿರುವ ಅಂಬ್ರಯ್ಯ ಮಠರು ಅನೇಕ ಪ್ರಸ್ತಕ ಬರೆದವರು (20ಕ್ಕೂ ಹೆಚ್ಚು ಪುಸ್ತಕ ಪ್ರಕಟ ಆಗಿದೆ) ಇವರು ಬರೆದ ''ಕೆಳದಿಯ ಕುಲ ತಿಲಕ ವೆಂಕಟಪ್ಪ ನಾಯಕ " ವಿಶೇಷವಾದದ್ದು ಇದರಲ್ಲಿ ಚಂಪಕಾಳ ಬಗ್ಗೆ ಬರೆದಿದ್ದಾರೆ, ಇತಿಹಾಸದಲ್ಲಿ ಬರುವ ಚಂಪಕಾಳ ಮ್ಲೇಚ್ಚಾ ಜಾತಿ ಎಂಬ ಬಗ್ಗೆ ವೈದಿಕ ಶಾಸ್ತ್ರದ ಅಥ೯ ಹಳೆಗನ್ನಡದ ಅಥ೯ದ ಬಗ್ಗೆ ಅನೇಕ ವಿದ್ವಾಂಸರಲ್ಲಿ ವಿಚಾರ ವಿನಿಮಯ ಮಾಡಿದ ಬಗ್ಗೆ ಪೋನಿನಲ್ಲಿ ತಿಳಿಸಿದರು.
  ಕನಾ೯ಟಕ ಪವರ್ ಕಾರ್ಪೊರೇಷನ್ ನಲ್ಲಿ ವೃತ್ತಿ ಮಾಡಿ ವ್ಯವಸ್ಥಾಪಕರಾಗಿ ನಿವೃತ್ತರಾಗಿ ಶಿವಮೊಗ್ಗ ಜಿಲ್ಲೆಯ ನಗರದಲ್ಲಿ ನೆಲೆಸಿದ್ದಾರೆ, ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರು.)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...