Blog number 2179. ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿರುವ ರಾಣಿ ಚಂಪಕಾರ ಸ್ಮಾರಕ ಚಂಪಕ ಸರಸ್ಸು ವಿನಲ್ಲಿ ಕೊಳದ ಮಧ್ಯ ರಾಣಿ ಪೂಜಿಸುತ್ತಿದ್ದ ಶಿವಲಿಂಗ ತೆಗೆದು ಬಸವಣ್ಣನ ವಿಗ್ರಹ ಸ್ಥಾಪಿಸಲು ಅನುಮತಿ ನೀಡಿದವರು ಯಾರು?
#ಇತಿಹಾಸದ_ಪುಟದಲ್ಲಿ_ಇಕ್ಕೇರಿ_ಇತಿಹಾಸ
#ಮತ್ತಿಕೊಪ್ಪ_ಹೆಸರು_ಮತ್ತಿಮರದಿಂದ_ಬಂದಿದ್ದಲ್ಲ
#ಮದ್ದು_ಅರೆಯುವ_ಸ್ಥಳವಾದ್ದರಿಂದ_ಮತ್ತಿಕೊಪ್ಪ_ಆಯಿತು
#ಅಲ್ಲಿ_ಈಗಲೂ_ಇರುವ_ಮದ್ದು_ಅರೆಯುವ_ಕಲ್ಲು_ಸಾಕ್ಷಿ
#ರಾಜರ_ಸಂಸ್ಥಾನದ_ಸ್ಮಾರಕ_ಸಮಾದಿಗಳ_ಹೆಸರಿನ
#ಹಿನ್ನೆಲೆ_ಅಲ್ಲಿನ_ಇತಿಹಾಸಕ್ಕೆ_ಸಂಬಂದಪಟ್ಟಿರುತ್ತದೆ
#ಈಗಿನ_ಬರಹಗಾರರು_ಊರ_ಹೆಸರಿಗೆ_ಮೂಲ
#ಅಲ್ಲಿನ_ಹೂವಿನ_ಮರಗಳು_ಇತ್ಯಾದಿ_ವಾದ_ಸರಿಯಾ?
#ಆನಂದಪುರಂನ_ಕೆಳದಿ_ರಾಜರ_ಸ್ಮಾರಕ_ಚಂಪಕಸರಸ್ಸು_ಹೆಸರು_ರಾಣಿ_ಚಂಪಕಾಳಿಂದ_ಬಂದದ್ದಲ್ಲ
#ಸಂಪಿಗೆ_ಹೂವಿನಿಂದ_ಬಂದದ್ದು_ಎನ್ನುತ್ತಿದ್ದಾರೆ.
https://youtu.be/f3-Z1nNRk8A?feature=shared
ಇವತ್ತಿನ ಡಿಜಿಟಲ್ ಮಾಧ್ಯಮದಲ್ಲಿ ಇಕ್ಕೇರಿ ಕೋಟೆ ವೀಕ್ಷಕರಿಗೆ ವಿವರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸಕಾರ ಸಾಗರ ತಾಲೂಕಿನ ಹುಲಿ ಮನೆಯ ಹೆಚ್.ಕೆ. ಗಣಪತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪದಲ್ಲಿ ಕೆಳದಿ ಅರಸರ ಕಾಲದ ಮದ್ದು ಅರೆಯುವ ಕಲ್ಲುಗಳನ್ನ ಮುಚ್ಚಲ್ಪಟ್ಟ ಮಣ್ಣುಗಳನ್ನು ತೆಗೆದು ವಿವರಿಸುವಾಗ ಆ ಊರಿಗೆ #ಮತ್ತಿಕೊಪ್ಪ ಎಂಬ ಹೆಸರು ಬರಲು ಕಾರಣವಾದ ಸ್ವಾರಸ್ಯದ ಕಥೆ ಹೇಳಿದ್ದಾರೆ.
ಪ್ರತಿಯೊಂದು ಊರಿಗೆ ಸ್ಥಳಕ್ಕೆ ಒಂದು ಹೆಸರು ಇರುತ್ತದೆ ಅದಕ್ಕೆ ಕಾರಣವಾದ ಅಂಶಗಳನ್ನು ಕಾಲ ಕ್ರಮೇಣ ತಲೆಮಾರಿಗೆ ಮರೆತುಹೋಗಿರುತ್ತದೆ ಕೆಲ ಊರಿನ ಮೂಲ ಹೆಸರು ಆಡು ಭಾಷೆಯ ಉಚ್ಚಾರಣೆಯಲ್ಲಿ ಅಳಸಿ ಹೋಗುವುದು ಸಹಜ.
ಈಗಿನ ಹೊಸ ತಲೆಮಾರು ತಮ್ಮ ಊರಿಗೆ ಇಂತಾ ಹೆಸರು ಬರಲು ಕಾರಣ ಏನು? ಎಂಬ ಪ್ರಶ್ನೆ ಆಯಾ ಕಾಲದ ಬರಹಗಾರರಿಗೆ ಸಾಹಿತಿಗಳಿಗೆ ಸಹಜವಾಗಿ ಕೇಳುತ್ತಾರೆ ಆದರೆ ಸ್ಥಳಿಯ ಇತಿಹಾಸ ಜನಪದ ಮೂಲ ತಿಳಿಯಲು ಹೋಗದ ಅಂತಹ ಕೆಲ ಬರಹಗಾರರು ಸಾಹಿತಿಗಳು ಈ ಊರಲ್ಲಿ ಇಂತಹ ಮರ ಹೆಚ್ಚು ಇದ್ದಿದ್ದರಿಂದ ಅಥವ ಈ ಊರಲ್ಲಿ ಇಂತಹ ಹೂವಿನ ಮರ ಹೆಚ್ಚು ಇದ್ದಿದ್ದರಿಂದ ಈ ಹೆಸರು ಬಂದಿದೆ ಅನ್ನುವುದನ್ನೇ ಜನ ನಂಬುತ್ತಾರೆ ಅಥವ ನಂಬಲೇ ಬೇಕು.
ಇದೇ ರೀತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪಕ್ಕೆ ಹೆಸರು ಬರಲು ಅಲ್ಲಿನ ಮತ್ತಿಮರ ಕಾರಣ ಎಂಬ ಸ್ಥಳಿಯರ ನಂಬಿಕೆ ತಪ್ಪು ಅಲ್ಲಿ ಕೆಳದಿ ಅರಸರ ಕಾಲದಲ್ಲಿ ಮದ್ದು ಅರೆಯುವ ಪ್ರದೇಶವಾಗಿತ್ತು ಅದಕ್ಕೆ ಪುರಾವೆ ಅಲ್ಲಿರುವ ಮದ್ದು ಅರೆಯುವ ಕಲ್ಲುಗಳು ಅಂತ ತಿಳಿಸಿದ್ದಾರೆ ಇದರಿಂದ ಮತ್ತಿಕೊಪ್ಪಕ್ಕೆ 400 ವರ್ಷಗಳ ಕೆಳದಿ ಅರಸರ ಇತಿಹಾಸ ಇದೆ ಇದು ಅರಸರ ಮದ್ದಿನ ಕಾರ್ಖಾನೆ ಆಗಿದ್ದ ಸ್ಥಳ ಎಂದರೆ ಆ ಊರಿನವರಿಗೂ ಹೆಮ್ಮೆಯೇ ಆಗಿದೆ.
ನಮ್ಮ ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿದ #ಚಂಪಕ_ಸರಸ್ಸು ಇದನ್ನ ಈಗ ಅಲ್ಲಿ ಸಂಪಿಗೆ ಮರ ಇದ್ದಿದ್ದರಿಂದ ಚಂಪಕ ಎಂಬ ಹೆಸರು ಬಂತು ಎಂಬ ಹೊಸ ಸಂಶೋಧನೆಗಳನ್ನು ಹೇಳುತ್ತಿದ್ದಾರೆ
ಚಂಪಕ ಸರಸ್ಸು ಅಸ್ತಿತ್ವಕ್ಕೆ ಇರುವ ಜನಪದ ಕಥೆ, ಇಟಲಿ ಪ್ರವಾಸಿ ಡೊಲ್ಲಾವಲ್ಲೆ ಉಲ್ಲೇಖ ಮತ್ತು ಮೈಸೂರು ಸರ್ಕಾರದ ಗೆಜೆಟಿಯರ್ ಹಾಗೂ ಅಲ್ಲಿ ಸಾಕ್ಷಿಯಾಗಿ ಇರುವ ತಾಜ್ ಮಹಲ್ ಗಿಂತ ಮೊದಲು ನಿರ್ಮಿಸಿದ ಪ್ರೇಮ ಸೌದ ಚಂಪಕ ಸರಸ್ಸು ಸ್ಮಾರಕ ಸಾಕ್ಷಿಯಾಗಿದೆ.
ಅಲ್ಲಿ ಕೊಳದ ಮಧ್ಯದ ಗುಡಿಯಲ್ಲಿ ರಾಜ ವೆಂಕಟಪ್ಪ ನಾಯಕ ಇರಿಸಿರುವ ರಾಣಿ ಚಂಪಕ ಪೂಜಿಸುತ್ತಿದ್ದ ಶಿವ ಲಿಂಗ ಕೂಡ ಇತ್ತೀಚಿಗೆ ಬದಲಿಸಿ ಅಲ್ಲಿ ಬಸವಣ್ಣನ ವಿಗ್ರಹ ಇರಿಸಿದ್ದಾರೆ ಇದೆಲ್ಲ ಯಾವ ಕಾರಣದಿಂದ ಈ ಸ್ಮಾರಕ ನಿರ್ಮಾಣದ 400 ನೇ ವರ್ಷಕ್ಕೆ ನಡೆಯುತ್ತಿದೆ ಗೊತ್ತಿಲ್ಲ.
ಇದನ್ನು ಸ್ಥಳಿಯ ಮುರುಘಾ ಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾಡಿರುವುದಾಗಿ ಹೇಳುತ್ತಾರೆ ಸ್ವಾಮೀಜಿಗಳಿಗೆ ಇದು ಗೊತ್ತಿದೆಯೋ ಇಲ್ಲವೋ ಸ್ವಾಮಿಜೀಗಳೇ ಸೃಷ್ಟಿಕರಣ ನೀಡಬೇಕು.
ಕೆಳದಿ ಅರಸರ ಶಿಲಾಶಾಸನ ಕಾಶಿಯ ಕೊಳದಲ್ಲಿ ಸ್ಥಳಾಂತರವಾದದ್ದನ್ನ ನಮ್ಮ ಊರಿನ ವಕೀಲರಾದ ಪ್ರಶಾಂತ್ ಅದನ್ನು ಮೂಲಸ್ಥಾನಕ್ಕೆ ತಲುಪಿಸಲು ಹೋರಾಟ ನಡೆಸಿ ಯಶಸ್ವಿ ಆಗಿದ್ದಾರೆ ಕಾಶಿ ಮಠಾದೀಶರು ಸ್ವತಃ ಭಾಗಿ ಆಗಿ ಸ್ಮಾರಕ ರಕ್ಷಣೆ ಮಾಡಿರುವುದು ಶ್ಲಾಘನೀಯ.
ಈಗಲೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿರುವ ಈ ಕೆಳದಿ ಸ್ಮಾರಕ ಪುರಾತತ್ವ ಇಲಾಖೆ ವಶಕ್ಕೆ ತೆಗೆದುಕೊಂಡು ಹೆಚ್ಚಿನ ಸಂಶೋಧನೆ ಮಾಡಬೇಕು.
ಈಗಾಗಲೇ ಅಲ್ಲಿ ಕೆಲವು ಟ್ರಸ್ಟ್ ಗಳನ್ನು ಮಾಡಿಕೊಂಡು ಪ್ರಿ ವೆಡ್ಡಿಂಗ್ ಪೋಟೋ ಚಿತ್ರೀಕರಣಕ್ಕೆ 500 ರೂಪಾಯಿ ಶುಲ್ಕ ವಿಧಿಸಿ ಸಂಗ್ರಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಈ ಪುರಾತನ ಸ್ಮಾರಕ ಖಾಸಾಗಿ ವಶಕ್ಕೆ ತೆಗೆದು ಕೊಳ್ಳುವ ಹುನ್ನಾರವೇ?.
ಹಂಪೆಯ ರಾಗಿ ಕಾಳು ಗಣಪತಿ ಸಿಡಿಲಿನಿಂದ ಸೀಳು ಬಿಟ್ಟಾಗ ರಾಜ್ಯ ಸರ್ಕಾರ ಅದನ್ನು ಬದಲಿಸಲು ಮುಂದಾದಾಗ ಸಾಹಿತಿ ಶಿವರಾಮ ಕಾರಂತರು ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದರು.
ರಾಣಿ ಚಂಪಕಾ ಪೂಜಿಸುತ್ತಿದ್ದ ಶಿವಲಿಂಗ ಮೂಲಸ್ಥಾನದಲ್ಲಿ ತಂದಿಡದಿದ್ದರೆ ಅದು ಕೆಳದಿ ಇತಿಹಾಸಕ್ಕೆ ನಾವು ಮಾಡುವ ಅಪಚಾರವೇ ಆಗುತ್ತದೆ ಸಂಬಂದ ಪಟ್ಟವರು ತಕ್ಷಣ ಕಾರ್ಯಪ್ರವೃತ್ತರಾಗಲಿ.
Comments
Post a Comment